ಪ್ರಿಯತಮೆ ರತ್ನಾಳ ಪೋನ ನಂಬಿ ಹೋಗಿ ಕೊಲೆಯಾದ ಚಂದ್ರು: 48 ಗಂಟೆಯೊಳಗೆ ಆರೋಪಗಳನ್ನು ಬಂಧಿಸಿದ ಪೋಲಿಸರು

Samagraphrabha
4 Min Read

ಬ್ರಿಡ್ಜ್ ಕೆಳಗೆ ಯುವಕ ದೇಹ ಸುಟ್ಟ ಪ್ರಕರಣ 48 ಗಂಟೆಗಳಲ್ಲಿ ಆರೋಪಿಗಳ ಬಂಧನ

ಅಕ್ರಮ ಸಂಬಂಧದ ನಂಟು ಪೂರ್ವ ನಿಯೋಜಿತ ಕೊಲೆ

ಗದಗ: ದಿನಾಂಕ 28.03.2026 ರಂದು ಹೊಂಬಳ-ಹುಯಿಲಗೋಳ ರಸ್ತೆ ಮಧ್ಯೆ ಇರುವ ಆಲಿ ಹಳ್ಳದ ಬ್ರಿಡ್ಜ್ ಕೆಳಗೆ ಅರ್ಧ ಮರ್ದ ಸುಟ್ಟು ಕೊಳೆತ ಸ್ಥಿತಿಯಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ ಹುಯಿಲಗೋಳ ಗ್ರಾಮದ ಚಂದ್ರು ಕುರಿ ಕೊಲೆಗೆ ಪ್ರಕರಣ ಭೇದಿಸಿದ ಪೋಲಿಸರು 48 ಗಂಟೆಯಲ್ಲಿ ಈರಪ್ಪ ಕುದರಿ (34) ಸಾ. ಹೊಳಲಾಪೂರ, ಮಹಾಂತೇಶ ಹದ್ಲಿ(30) ಸಾ. ಹುಯಿಲಗೋಳ , ರತ್ನಾ @ ರಾಮವ್ವ ಕುದರಿ (27) ಸಾ. ಹೊಳಲಾಪೂರ, 3 ಆರೋಪಿಗಳನ್ನು ಬಂಧಿಸಿದ್ದಾರೆ.

ಪ್ರಕರಣದ ಹಿನ್ನೆಲೆ:

- Advertisement -
Ad image

ಗದಗ ತಾಲೂಕು ಹುಯಿಲಗೋಳ ಗ್ರಾಮದ ನಿವಾಸಿಯಾದ ಚಂದು ಕುರಿ ದಿನಾಂಕ 24.03.2026 ರಾತ್ರಿ 10.00 ಗಂಟೆಯಿಂದಾ ದಿನಾಂಕ 25.03.2026 ರಂದು ಬೆಳಗಿನ 05.00 ಗಂಟೆಯ ಸುಮಾರಿಗೆ ತಮ್ಮ ಮನೆಯಿಂದಾ ಯಾರಿಗು ಹೆಳದೆ ಕೇಳದೆ ಎದ್ದು ಎಲ್ಲಿಯೋ ಹೋಗಿದ್ದು, ಅವನಿಗೆ ಇಲ್ಲಿಯವರಗೆ ಹುಡುಕಾಡಿದ್ದು ಸಿಕ್ಕಿರಲಿಲ್ಲಾ ಎಂದು ಅವರ ತಂದೆ ಬಸವರಾಜ ತಂದೆ ಸಂಗಪ್ಪ ಕುರಿ ಇವರು ದೂರು ನೀಡಿದ್ದಾರೆ
ದಿ.28/03/2026 ರಂದು ಹುಯಿಲಗೋಳದಿಂದಾ ಹೊಂಬಳ ಒಳ ದಾರಿಯಲ್ಲಿ ಆಲಿಹಳ್ಳದ ಬ್ರಿಜ್ ಕೆಳಗೆ ಒಂದು ಗಂಡಸಿನ ಶವ ಬಿದ್ದಿದ್ದು, ಅದನ್ನು ಪೊಲೀಸರು ಬಂದು ಪರಿಶೀಲನೆ ಮಾಡಿ ಶವವನ್ನು ತೆಗೆದುಕೊಂಡು ಗದಗ ಜಿಲ್ಲಾ ಆಸ್ಪತ್ರೆಯ ಶವಗಾರಕ್ಕೆ ಹೋಗಿರುತ್ತಾರೆ ಅಂತಾ ಸುದ್ದಿ ತಿಳಿದು, ಪಿರ್ಯಾದಿ ಹಾಗೂ ಸಂಬಂಧಿಕರು ಗದಗ ಜಿಲ್ಲಾ ಅಸ್ಪತ್ರೆಯ ಶವಗಾರಕ್ಕೆ ಬಂದು ಶವಗಾರದಲ್ಲಿದ್ದ ಮೃತನ ಶವವನ್ನು ನೋಡಿ ಶವ ತನ್ನ ಮಗ ಚಂದ್ರು ಇವನದೇ ಅಂತಾ ಗುರುತಿಸಿದ್ದಾರೆ.
ಈ ಪ್ರಕರಣದ ಕುರಿತು ಗದಗ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಯು.ಡಿ. ನಂಬರ್ 14/2026 ರ ಪ್ರಕಾರ ಅನುಮಾನಾಸ್ಪದ ಸಾವು ಪ್ರಕರಣ ದಾಖಲು ಮಾಡಿ ತನಿಖೆ ಆರಂಭಿಸುತ್ತಾರೆ.

ಚಂದ್ರು ಇವನ ಶವ ಅರ್ಧ ಮರ್ದ ಸುಟ್ಟ ಸ್ಥಿತಿಯಲ್ಲಿ ಇದ್ದುದನ್ನು ನೋಡಿ ದಿನಾಂಕ-24.03.2026 ರಂದು ರಾತ್ರಿ 10.00 ಗಂಟೆಯಿಂದಾ ದಿನಾಂಕ-28/03/2026 ರಂದು ಮುಂಜಾನೆ 08.00 ಗಂಟೆಯ ನಡುವಿನ ಅವಧಿಯಲ್ಲಿ ಯಾರೋ ದುಷ್ಕರ್ಮಿಗಳು ತಮ್ಮ ಮಗ ಚಂದ್ರು ಇವನನ್ನು ಯಾವುದೋ ದುರುರದ್ದೇಶದಿಂದಾ ಯಾವುದೋ ಆಯುಧದಿಂದಾ ಹೊಡೆದು ಕೊಲೆ ಮಾಡಿ ಹುಯಿಲಗೋಳ ಹೊಂಬಳ ರಸ್ತೆಯಲ್ಲಿ ಆಲಿ ಹಳ್ಳದ ಬ್ರಿಜ್ ಕೆಳಗೆ ಅವನ ಶವ ಗುರುತು ಸಿಗಬಾರದೆಂದು ಸುಟ್ಟು ಸಾಕ್ಷಿ ನಾಶ ಮಾಡಿರುತ್ತಾರೆ. ಅಂತಾ ನೀಡಿದ ದೂರಿನ ಮೇರೆಗೆ ಠಾಣಾ ಗುನ್ನಾ ನಂಬರ 75/2026ಕಲಂ 103[1], 238 ಬಿಎನ್‍ಎಸ್ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆಗೆ ಇಳಿದ ಪೋಲಿಸರು.

ಪ್ರಕರಣದ ಪತ್ತೆಗಾಗಿ ವಿಶೇಷ ತಂಡ ರಚನೆ :

ಸದರಿ ಪ್ರಕರಣದ ಪತ್ತೆಗಾಗಿ ರೋಹನ್ ಜಗದೀಶ, ಐಪಿಎಸ್ ಪೋಲಿಸ್ ಅಧೀಕ್ಷಕರು ಗದಗ ಜಿಲ್ಲೆ ರವರ ನಿರ್ದೇಶನದಂತೆ ಮಹಾಂತೇಶ ಸಜ್ಜನ ಪ್ರಭಾರ ಹೆಚ್ಚುವರಿ ಪೋಲಿಸ್ ಅಧೀಕ್ಷಕರು ಹಾಗೂ ಮುರ್ತಜಾ ಖಾದ್ರಿ ಡಿ.ಎಸ್.ಪಿ ಗದಗ ಉಪವಿಭಾಗ ರವರ ಮಾರ್ಗದರ್ಶನದಂತೆ ಸಿದ್ದರಾಮೇಶ್ವರ ಗಡೇದ ಪಿಐ ಗದಗ ಗ್ರಾಮೀಣ ಪೋಲಿಸ್ ಠಾಣೆರವರ ನೇತೃತ್ವದಲ್ಲಿ ಪಿಎಸ್‍ಐ ಎಸ್ ಬಿ ಕವಲೂರ, ವ್ಹಿ ಜಿ ಪವಾರ, ಸಿಬ್ಬಂದಿರವರಾದ ರವರಾದ ಪ್ರಕಾಶ ಗಾಣಿಗೇರ, ಎನ್ ಜಿ ಮಜ್ಜಗಿ, ಎಂ ಬಿ ವಡ್ಡಟ್ಟಿ, ಎಂ ಐ ಪಾಟೀಲ, ಖಾಜಾ ಮುಲ್ಲನವರ, ಎಲ್ ಬಿ ಪೂಜಾರ ಹಾಗೂ ತಾಂತ್ರಿಕ ವಿಭಾಗದ ಗುರುರಾಜ ಬೂದಿಹಾಳ, ಎ.ಆರ್.ಎಸ್.ಐ. ಹಾಗೂ ಎ ಪಿ ದೊಡ್ಡಮನಿ, ಸಂಜಯ ಕೊರಡೂರು ರವರ ತಂಡ ರಚಿಸಲಾಗಿತ್ತು ಸದರಿ ತಂಡವು ವಿವಿಧ ತಾಂತ್ರಿಕ ಹಾಗೂ ಸ್ಥಳಿಯ ಮಾಹಿತಿಯ ಮೇರೆಗೆ ಕೊಲೆಮಾಡಿದ ಆರೋಪಿತರು ತೆಲೆ ಮರೆಸಿಕೊಂಡು ಧಾರವಾಡ ಜಿಲ್ಲೆಯ ಕುಂದಗೋಳ ತಾಲೂಕಿನ ಯರಗುಪ್ಪಿ ಗ್ರಾಮದಲ್ಲಿ ಅವರ ಸಂಭಂದಿಕರ ಮನೆಯಲ್ಲಿದ್ದ ಬಗ್ಗೆ ಮಾಹಿತಿ ತೆಗೆದು ಅವರ ವಶಕ್ಕೆ ಪಡೆದುಕೊಂಡಿದ್ದಾರೆ.

ಅಕ್ರಮ ಸಂಬಂಧಕ್ಕೆ ಪೀಡಿಕೆಯೇ ಕೊಲೆಗೆ ಕಾರಣ..?

ಮೃತನಾದ ಚಂದ್ರು ಕುರಿ ಇತನು ಬಂಧಿತಳಾದ ರತ್ನಾ @ ರಾಮವ್ವ ಇವಳೊಂದಿಗೆ ಸುಮಾರು 4-5 ವರ್ಷಗಳಿಂದ ಸಲುಗೆಯಿಂದ ಇದ್ದು ಅವಳನ್ನು ತನ್ನ ಜೊತೆ ಸಂಭಂದ ಹೊಂದಲು ಪೀಡಿಸುತ್ತಿದ್ದು ಆಗಾಗ ಅವಳಿಗೆ ಪೋನಮಾಡುತ್ತಿದ್ದು ಇದರಿಂದ ಅವಳ ಗಂಡ ಬಂಧಿತನಾದ ಈರಪ್ಪ ಕುದರಿ ಮತ್ತು ಅವಳ ಅಣ್ನ ಮಹಾಂತೇಶ ಹದ್ಲಿ ಇವರಿಗೆ ಈ ವಿಚಾರ ಗೊತ್ತಾಗಿ ಮೃತನಿಗೆ 2-3 ಸಾರಿ ಎಚ್ಚರಿಕೆ ನೀಡಿದರೂ ಮೃತನು ಮಾತು ಕೇಳದೇ ಅವಳ ಜೊತೆ ಮಾತಾಡುವುದು ಬಾ ಎಂದು ಕರೆಯುವದು ಮಾಡುತ್ತಿದ್ದರಿಂದ ಆರೋಪಿತರು ಬೇಸತ್ತು ದಿನಾಂಕ 24-03-2026 ರಂದು ಸಾಯಂಕಾಲ 6-00 ಗಂಟೆಗೆ ಆರೋಪಿತಳಿಂದ ಪೋನಮಾಡಿಸಿ ರಾತ್ರಿ 12-00 ಗಂಟೆಗೆ ಮನೆಗೆ ಬರುವಂತೆ ತಿಳಿಸಿ ನಂತರ ಚಂದ್ರು 12-00 ಗಂಟೆಗೆ ಮನೆ ಹತ್ತಿರ ಬಂದಾಗ ಈಗಾಗಲೇ ಆರೋಪಿತರು ಕೊಲೆ ಮಾಡುವ ಉದ್ದೇಶದಿಂದ ಸಂಚು ರೂಪಿಸಿಕೊಂಡು ಒಂದು ಚಾಕು ಮತ್ತು ಸುಟ್ಟು ಹಾಕಲು ಪೆಟ್ರೋಲ್‍ನ್ನು ಒಂದು ಬಾಟಲಿಯಲ್ಲಿ ಬೈಕನಲ್ಲಿ ಇಟ್ಟುಕೊಂಡಿದ್ದರು. ಚಂದ್ರು ಇತನನ್ನು ಆರೋಪಿತರಾದ ಈರಪ್ಪ ಮತ್ತು ಮಹಾಂತೇಶ ಕೈಯಿಂದ ಹೊಡಿಬಡಿ ಮಾಡಿ ಆರೋಪಿತನಾದ ಈರಪ್ಪನ ಬೈಕ್‍ನಲ್ಲಿ ಕೂಡಿಸಿಕೊಂಡು ಹುಯಿಲಗೋಳ ಹೊಂಬಳ ರಸ್ತೆ ಮಧ್ಯದ ಆಲಿ ಹಳ್ಳದ ಬ್ರಿಡ್ಜ್ ಕೆಳಗಡೆ ಕರೆದುಕೊಂಡು ಹೋಗಿ ಚಾಕುವಿನಿಂದ ಕುತ್ತಿಗೆ ಕೊಯ್ದು ಕೊಲೆಮಾಡಿ ಗುರುತು ಸಿಗಬಾರದಂತೆ ತಾವು ತಂದಿದ್ದ ಪೆಟ್ರೋಲ್‍ನ್ನು ಮೈಮೇಲೆ ಸುರಿದು ಬೆಂಕಿ ಹಚ್ಚಿರುತ್ತಾರೆ ಅಂತಾ ವಿಚಾರಣೆಯಲ್ಲಿ ಬಾಯಿಬಿಟ್ಟಿದ್ದಾರೆ.

ಸದರಿ ಕೊಲೆ ಪ್ರಕರಣವನ್ನು 48 ಗಂಟೆಯೊಳಗೆ ಪತ್ತೆಮಾಡಿ ಆರೋಪಿತನನ್ನು ದಸ್ತಗೀರ ಮಾಡಿದ ಗದಗ ಗ್ರಾಮೀಣ ಠಾಣೆಯ ಪೋಲಿಸ್ ಅಧಿಕಾರಿ ಮತ್ತು ಸಿಬ್ಬಂದಿಯವರ ತಂಡಕ್ಕೆ ರೋಹನ್ ಜಗದೀಶ ಐಪಿಎಸ್ ಪೋಲಿಸ್ ಅಧೀಕ್ಷಕರು ಗದಗ ಜಿಲ್ಲೆ ರವರು ಪ್ರಶಂಸೆ ವ್ಯಕ್ತಪಡಿಸಿರುತ್ತಾರೆ.

Share this Article