ಗದಗ : ರವಿವಾರ ರಾತ್ರಿ ನಗರದ ತೋಂಟದಾರ್ಯ ಮಠದ ಜಾತ್ರೆಯಲ್ಲಿ ಡ್ಯಾನ್ಸಿಂಗ್ ಫ್ಲೈ ಜೋಕಾಲಿ ಆಡುತ್ತಿದ್ದ ವೇಳೆ ಏಕಾಏಕಿ ವೀಲ್ ಕಟ್ಟಾಗಿ ಸುಮಾರು 10 ಕ್ಕೂ ಹೆಚ್ಚು ತೊಟ್ಟಿಲುಗಳು ಕಳಚಿ ಬಿದ್ದವೆ ಇದರ ಪರಿಣಾಮ ಡ್ಯಾನ್ಸಿಂಗ್ ಫ್ಲೈ ಆಡುತ್ತಿದ್ದ ಮಹಿಳೆಯರು ಮಕ್ಕಳು ಸೇರಿದಂತೆ ಸೂಮಾರು 21 ಜನರಿಗೆ ಗಾಯಗಳಗಿದ್ದ ಘಟನೆಗೆ ಸಂಭಂದಿಸಿದಂತೆ ಗಾಯಾಳುಗಳಿಗೆ ಸದ್ಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡುತ್ತಿದ್ದಾರೆ.
ಘಟನೆಯಲ್ಲಿ ಜಹೀರ ಅಹ್ಮದ್ ತಂದೆ ನಜೀರ ಅಹ್ಮದ್ ಖಾಜಿ (42 ವರ್ಷ), ಕಲಂದರ ತಂದೆ ಜಹೀರ ಅಹ್ಮದ್ ಖಾಜಿ (15 ವರ್ಷ), ಶಿಫಾ ತಂದೆ ಜಹೀರ ಅಹ್ಮದ್ ಖಾಜಿ (16 ವರ್ಷ), ಸಮೀನಾ ಕೋಂ. ಮೆಹಬೂಬ್ ಭಾಷಾ ಗಂಗಾವತಿ (18 ವರ್ಷ), ಸನಾ ತಂದೆ ಮೆಹಬೂಬ್ ಭಾಷಾ ಖಾಜಿ (15 ವರ್ಷ), ಸಗುಪ್ತಾ ತಂದೆ ಸಾದಿಕ್ ಭಾಷಾ ಖಾಜಿ (14 ವರ್ಷ), ಜ್ಯೋತಿ ತಂದೆ ರಾಜಪ್ಪ ಗಬ್ಬರ (18 ವರ್ಷ), ನಾಜಿಯಾ ಕೋಂ. ಸುಲೇಮಾನ್ ತೋಟಿಗಾರ (20 ವರ್ಷ), ಕಿರಣ ತಂದೆ ಉಮೇಶ ಹುಲ್ಲೂರ (25 ವರ್ಷ), ದೀಪಕ ತಂದೆ ಅನುರಾಜ ಹುಬ್ಬಳ್ಳಿ (29 ವರ್ಷ), ರಾಜೇಸಾಬ ತಂದೆ ಇಮಾಮಸಾಬ ಅಣ್ಣಿಗೇರಿ (23 ವರ್ಷ), ಸುಮನ್ ಕೋಂ. ಮಂಜು ನವಲಗುಂದ (28 ವರ್ಷ), ವಿಶಾಲ ತಂದೆ ಮಂಜು ನವಲಗುಂದ (06 ವರ್ಷ), ಸಲ್ಮಾ ತಂದೆ ಅಬಾದವುಲ್ಲಾ ಹಂದೂರ (17 ವರ್ಷ), ಖುಷಿ ತಂದೆ ಗಿರೀಶ ದಲಬಂಜನ (14 ವರ್ಷ), ಕಿರಣ ತಂದೆ ರಮೇಶ ಕಬಾಡಿ (21 ವರ್ಷ), ಮಾಹೀನ್ ತಂದೆ ಶಬ್ಬಿರ ಕಂದಗಲ್ (10 ವರ್ಷ), ರುಬಿನಾ ಕೋಂ. ಶಬೀರ ಅಹ್ಮದ ಕಂದಗಲ್ (36 ವರ್ಷ), ಮುಸ್ತಾಕ ತಂದೆ ಬಾಬು ಸಾಬ ಹಳೆಮನಿ (25 ವರ್ಷ), ಪ್ರದೀಪಕುಮಾರ ತಂದೆ ಮಂಜುನಾಥ ಕಮ್ಮಾರ (25 ವರ್ಷ), ಸತೀಶ ಗಬ್ಬರ (22 ವರ್ಷ) ಗಾಯಗೊಂಡಿದ್ದು, ವಿವಿಧ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಠದ ಜಾತ್ರಾ ಕಮೀಟಿ ಅಧ್ಯಕ್ಷ ಸೇರಿದಂತೆ ಡ್ಯಾನ್ಸಿಂಗ್ ಫ್ಲೈಜೋಕಾಲಿ ಮಾಲೀಕರ ಮೇಲೆ ಕ್ರಿಮಿನಲ್ ಕೇಸ್ ದಾಖಲು:
ಈ ಘಟನೆಗೆ ಸಂಬಂಧಿಸಿದಂತೆ ಗದಗ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಜಾತ್ರಾ ಸಮಿತಿ ಅಧ್ಯಕ್ಷರು, ಮ್ಯಾನೇಜರ್ ಹಾಗೂ ಡ್ಯಾನ್ಸಿಂಗ್ ಫ್ಲೋರ್ ಮಾಲೀಕರು ಸೇರಿದಂತೆ ಏಳು ಜನ ಹಾಗೂ ಇತರರ ವಿರುದ್ಧ ಕ್ರಿಮಿನಲ್ ಕೇಸ್ ದಾಖಲಿಸಲಾಗಿದೆ.
ಪರಶುರಾಮ ಸಮಗಾರ, ವಿಶ್ವನಾಥ ದೊಡ್ಡಮನಿ, ನೂರಅಹ್ಮದ ಧಾರವಾಡ, ನಾರಾಯಣ ದೊಡ್ಡಮನಿ, ಮಲ್ಲು ಬಾದನ, ವಿನಾಯಕ ಮಾನ್ವಿ (ಜಾತ್ರಾ ಕಮಿಟಿ ಅಧ್ಯಕ್ಷ), ಎಮ್.ಎಸ್. ಅಂಗಡಿ (ತೋಂಟದಾರ್ಯ ಮಠದ ಮ್ಯಾನೇಜರ್) ಹಾಗೂ ಇತರರು ವಿರುದ್ಧ ಪ್ರಕರಣ ದಾಖಲಾಗಿದೆ.
ಯಂತ್ರೋಪಕರಣಗಳ ನಿರ್ವಹಣೆಯಲ್ಲಿ ಬೇಜವಾಬ್ದಾರಿತನ ತೋರಿದ ಹಿನ್ನೆಲೆಯಲ್ಲಿ ಇವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ (BNS) 2023 ಅಡಿಯಲ್ಲಿ ಕಲಂ 289, 125(A), 125(B) 8 292 ರಡಿಯಲ್ಲಿ ಎಫ್ ಐ ಆರ್ ದಾಖಲಿಸಿದ್ದಾರೆ ಶಹರ ಪೋಲಿಸರು.

