ಗದಗ : ನಗರದ ತೋಂಟದಾರ್ಯ ಮಠದ ಜಾತ್ರೆಯಲ್ಲಿ ಮಹಾ ಅವಘಡವೊಂದು ಸಂಭವಿಸಿದೆ ಜಾತ್ರೆಯಲ್ಲಿ ಹಾಕಿದ ಡ್ಯಾನ್ಸಿಂಗ್ ಫ್ಲೈ ಜೋಕಾಲಿ ಆಡುತ್ತಿದ್ದ ವೇಳೆ ಏಕಾಏಕಿ ವೀಲ್ ಕಟ್ಟಾಗಿ ಸುಮಾರು 10 ಕ್ಕೂ ಹೆಚ್ಚು ತೊಟ್ಟಿಲುಗಳು ಕಳಚಿ ಬಿದ್ದವೆ ಇದರ ಪರಿಣಾಮ ಡ್ಯಾನ್ಸಿಂಗ್ ಫ್ಲೈ ಆಡುತ್ತಿದ್ದ ಮಹಿಳೆಯರು ಮಕ್ಕಳು ಸೇರಿದಂತೆ ಸುಮಾರು 20 ಹೆಚ್ಚು ಜನರಿಗೆ ಗಾಯಗಳಾವೆ ಇಬ್ಬರ ಸ್ಥಿತಿ ಗಂಭೀರವಾಗಿದೆ.

ಗಾಯಾಳುಗಳನ್ನು ಅಂಬುಲೆನ್ಸ್ ಮೂಲಕ ಗದಗ ಜಿಮ್ಸ್ ಅಸ್ಪತ್ರೆಗೆ ರವಾನೆ ಮಾಡಿದ್ದು ಚಿಕಿತ್ಸೆ ಮುಂದುವರೆದಿದೆ ಸ್ಥಳಕ್ಕೆ ಗದಗ ಶಹರ ಪೊಲೀಸರು ಭೇಟಿ ಪರಿಶೀಲನೆ ನಡೆಸಿದ್ದಾರೆ ಗದಗ ಶಹರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
