ವಿದ್ಯಾರ್ಥಿಗಳು ಹೆಚ್ಚು ವಿದ್ಯಾರ್ಜನೆಗೆ ಆದ್ಯತೆ ನೀಡಬೇಕು : ವಿಜಯ ಕರಡಿ

Samagraphrabha
2 Min Read

ಲಕ್ಷ್ಮೇಶ್ವರ: ಪದವಿ ಪೂರ್ವ ಎನ್ನುವದು ವಿದ್ಯಾರ್ಜನೆಯ ಮಹತ್ವಪೂರ್ಣ ಘಟ್ಟವಾಗಿದ್ದು ಇದರಲ್ಲಿ ವಿದ್ಯಾರ್ಥಿಗಳು ಹೆಚ್ಚು ವಿದ್ಯಾರ್ಜನೆಗೆ ಆದ್ಯತೆ ನೀಡಬೇಕು, ಪಟ್ಟಣದ ಸಾವಿರಾರು ಜನರಿಗೆ ವಿದ್ಯಾರ್ಜನೆ ನೀಡಿದ ಕೀರ್ತಿ ಹೊಂದಿರುವ ಪುರಸಭೆ ಕಾಲೇಜಿನಲ್ಲಿ ಪ್ರವೇಶ ಪಡೆದಿರುವದಕ್ಕೆ ಎಲ್ಲ ವಿದ್ಯಾರ್ಥಿಗಳಿಗೆ ಅಭಿನಂದಿಸುವದಾಗಿ ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ವಿಜಯ ಕರಡಿ ಹೇಳಿದರು.

ಅವರು ಪಟ್ಟಣದ ಪುರಸಭೆ ಪದವಿ ಪೂರ್ವ ಮಹಾವಿದ್ಯಾಲಯದಲ್ಲಿ ೨೦೨೫-೨೬ ನೇ ಸಾಲಿನ ಕ್ರೀಡಾ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಉದ್ಘಾಟನೆ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳ ಸ್ವಾಗತ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.
ಇಲ್ಲಿ ಅನೇಕರು ಶಿಕ್ಷಣ ಪಡೆದು ಸಮಾಜದಲ್ಲಿ ಉತ್ತಮ ಸಾಧನೆ ಮಾಡಿದ್ದಾರೆ ಅಂತಹ ವಿದ್ಯಾರ್ಥಿಗಳು ನೀವಾಗಬೇಕು ಎಂದು ಕರೆ ನೀಡಿದರು.

ಅತಿಥಿಗಳಾಗಿ ಆಗಮಿಸಿದ್ದ ಕನ್ನಡ ಸಾಹಿತ್ಯ ಪರಿಷತ್ತಿನ ತಾಲೂಕ ಅಧ್ಯಕ್ಷ ಈಶ್ವರ ಮೆಡ್ಲೇರಿ ಮಾತನಾಡಿ ಜೀವನದಲ್ಲಿ ಉತ್ತಮ ಭವಿಷ್ಯತ್ತು ರೂಪಿಸಿಕೊಳ್ಳು ಛಲ ನಿಮ್ಮಲ್ಲಿ ಬರಬೇಕು, ಎಲ್ಲವನ್ನು ಎದುರಿಸಿ ಸಾಧನೆ ಮಾಡುವ ಗುಣ ಬೆಳೆದು ಬಂದಲ್ಲಿ ಎಲ್ಲ ಹಾದಿಗಳು ನಿಮಗೆ ಸುಗಮವಾಗುವವು ಯಾವುದೇ ಕಾರಣಕ್ಕೂ ಎದೆಗುಂದದೆ ಧೈರ್ಯದಿಂದ ಎದುರಿಸುವ ಛಲ ಇದ್ದಲ್ಲಿ ಸಾಧನೆ ಅಸಾಧ್ಯವೆನಲ್ಲ ಸಾಧನೆ ಎನ್ನುವದು ಸಾಧಕರ ಸೊತ್ತೆ ಹೊರತು ಸಾಮಾನ್ಯರ ಸ್ವತ್ತಲ್ಲ, ವಿದ್ಯಾರ್ಜನೆಗೆ ಬಂದಿರುವ ನಿಮಗೆ ನಿಮ್ಮ ಆಯ್ಕೆಯ ಬಗ್ಗೆ ಸಂಪೂರ್ಣ ಜ್ಞಾನ ಇರುತ್ತದೆ, ಪುರಸಭೆ ಪ.ಪೂ.ಕಾಲೇಜು ಸುಮಾರು ೭೫ ವರ್ಷಗಳ ಭವ್ಯ ಇತಿಹಾಸವನ್ನು ಹೊಂದಿದ್ದು ಇಲ್ಲಿ ಕಲಿತ ಅನೇಕರು ದೇಶ ವಿದೇಶಗಳಲ್ಲಿ ತಮ್ಮ ಸಾಮರ್ಥ್ಯವನ್ನು ತೋರಿದ್ದಾರೆ ಎಲ್ಲ ಶಿಲೆಗಳು ಮೂರ್ತಿಯಾಗುವದಿಲ್ಲ, ಆದರೆ ಇಲ್ಲಿ ದೊರೆಯುವ ಶಿಕ್ಷಣದಿಂದ ಉತ್ತಮ ಮೂರ್ತಿಗಳಾಗಿ ಹೊರಹೊಮ್ಮುವ ಭರವಸೆ ಇದೆ ನಿಮ್ಮ ಭವಿಷ್ಯ ಇನ್ನೂ ಉತ್ತಮವಾಗಿ ಸಾಗಲಿ ಎಂದು ಶುಭ ಹಾರೈಸಿದರು.

ಸಭೆಯ ಅಧ್ಯಕ್ಷತೆಯನ್ನು ವಹಿಸಿದ್ದ ಪುರಸಭೆ ಉಪಾಧ್ಯಕ್ಷ ಪೀರದೋಷ ಆಡೂರ, ಸದಸ್ಯೆ ಜಯಕ್ಕ ಅಂದಲಗಿ ಮಾತನಾಡಿದರು ವೇದಿಕೆಯಲ್ಲಿ ಸದಸ್ಯೆ ಮಂಜುಳಾ ಗುಂಜಳ, ಪ್ರಾಚಾರ್ಯ ಅಶೋಕ ಕಳ್ಳಿಮನಿ, ಉಪನ್ಯಾಸಕರಾದ ಎಸ್.ಜಿ.ಹುಳಕನವರ, ಮಂಜುನಾಥ ಬೂದಿಹಾಳ, ಎಚ್.ಎಲ್.ಕೋರಿ, ಎಂ.ಎಲ್.ಬೋದ್ಲೆಖಾನ್, ಮುದಗಲ್, ಪಿ.ಡಿ.ದೇಶಪಾಂಡೆ, ವಿದ್ಯಾ ಬಾಲೇಹೊಸೂರು, ಶಾರದಾ ಉಕ್ಕಲಿ, ಎಂ.ಎಸ್.ಮಳಗಿ, ಡಿ.ಎಂ.ಪೂಜಾರ, ಬಿ.ಜೆ.ಪಾಟೀಲ, ಬನ್ನಿಕೊಪ್ಪ ಸೇರಿದಂತೆ ಅನೇಕರು ಹಾಜರಿದ್ದರು.
ಇದೇ ಸಂದರ್ಭದಲ್ಲಿ ೨೦೨೪-೨೫ ರ ದ್ವಿತಿಯ ಪಿಯುಸಿಯಲ್ಲಿ ಹೆಚ್ಚು ಅಂಕಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ನೂತನ ಸಂಸತ್ತನ್ನು ಉದ್ಘಾಟಿಸಲಾಯಿತು.

- Advertisement -
Ad image

Share this Article