ಆದೇಶಕ್ಕೆ ವೇಗ ನೀಡಿದ ಡಿಕೆ ಸರ್ಕಾರ… ಗದಗ ಬಾರ್‌ಗಳಲ್ಲಿ 21ರ ಒಳಗಿನವರಿಗೆ ಮದ್ಯ ನಿಷೇಧ ಫಲಕ ಅಳವಡಿಕೆ

Samagraphrabha
1 Min Read

ಗದಗ:ರಾಜ್ಯ ಸರ್ಕಾರದ ಆದೇಶಕ್ಕೆ ಗದಗ ನಗರದ ಬಾರ್‌ಗಳು ತಕ್ಷಣವೇ ಸ್ಪಂದಿಸಿವೆ. 21 ವರ್ಷ ತುಂಬದ ಯುವಕರಿಗೆ ಮದ್ಯ ಪೂರೈಕೆ ಮಾಡದಂತೆ ಕರ್ನಾಟಕ ಸರ್ಕಾರದ ಮದ್ಯನಿಷೇಧ ಕಾಯ್ದೆ ಅನ್ವಯ ನೀಡಿರುವ ಸೂಚನೆಯನ್ನು ಬಾರ್‌ಗಳ ಮುಂಭಾಗದಲ್ಲಿ ಫಲಕ ಹಾಕಿದ್ದಾರೆ.

ನಗರದ ವಿವಿಧ ಬಾರ್‌ನಲ್ಲಿ ಅಂಟಿಸಿರುವ ಈ ನೋಟಿಸ್‌ನಲ್ಲಿ ಸ್ಪಷ್ಟವಾಗಿ ಬರೆಯಲಾಗಿದೆ

“ಕರ್ನಾಟಕ ಸರ್ಕಾರದ ಆದೇಶದ ಮೇರೆಗೆ 21 ವರ್ಷ ವಯಸ್ಸಿನ ಕೆಳಗೆ ಇರುವ ಯುವಕರಿಗೆ ಮದ್ಯ ಪೂರೈಕೆ (ಮಾರಾಟ) ಮಾಡಲಾಗುವುದಿಲ್ಲ. ಯುವಕರು ತಮ್ಮ ಆಧಾರ್ ಕಾರ್ಡ್‌ನಲ್ಲಿ ಜನ್ಮ ದಿನಾಂಕ 2005 ಒಳಗೆ ಇರಬೇಕು”

ಈ ಸೂಚನೆಯನ್ನು ಶಹರ ಪೊಲೀಸ್ ಠಾಣೆ, ಗದಗ ಇವರ ಸಲಹೆಯ ಮೇರೆಗೆ ಬಾರ್ ಆಡಳಿತ ಮಂಡಳಿ ಅಳವಡಿಸಿದೆ. ಆಧಾರ್ ಕಾರ್ಡ್ ಪರಿಶೀಲನೆ ಮಾಡದೆ ಯಾರಿಗೂ ಮದ್ಯ ಮಾರಾಟ ಮಾಡುವುದಿಲ್ಲ ಎಂಬ ಸಂದೇಶವನ್ನು ಗ್ರಾಹಕರಿಗೆ ನೀಡಲಾಗುತ್ತಿದೆ.

- Advertisement -
Ad image

ಡಿಕೆ ಸರ್ಕಾರದ ಕಠಿಣ ನಿಲುವು:
ಅಬಕಾರಿ ಇಲಾಖೆ ಮತ್ತು ಪೊಲೀಸ್ ಇಲಾಖೆಯ ಜಂಟಿ ದಾಳಿ, ದಂಡದ ಭೀತಿಯಿಂದಾಗಿ ಬಾರ್ ಮಾಲೀಕರು ಈಗ ಎಚ್ಚೆತ್ತುಕೊಂಡಿದ್ದಾರೆ. ಅಪ್ರಾಪ್ತರಿಗೆ ಮದ್ಯ ಮಾರಾಟ ಮಾಡಿದರೆ ಪರವಾನಗಿ ರದ್ದು ಜೊತೆಗೆ ಕ್ರಿಮಿನಲ್ ಕೇಸ್ ದಾಖಲಾಗುವ ಎಚ್ಚರಿಕೆ ನೀಡಲಾಗಿದೆ.

ರಾಜ್ಯದಲ್ಲಿ ಯುವಕರಲ್ಲಿ ಕುಡಿತದ ಚಟ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಸರ್ಕಾರದ ಈ ಕ್ರಮಕ್ಕೆ ಮುಂದಾಗಿದ್ದು ಆದೇಶ ನೀಡಿದ ಕೆಲವೇ ದಿನಗಳಲ್ಲಿ ಅಧಿಕಾರಿಗಳು ಕಾರ್ಯರೂಪಕ್ಕೆ ತಂದಿದ್ದಾರೆ.

“21 ವರ್ಷದ ಒಳಗಿನವರಿಗೆ ಮದ್ಯ ಇಲ್ಲ”ಎಂಬ ಫಲಕ ಬಾರ್ ಬಾಗಿಲಲ್ಲೇ ಕಾಣುತ್ತಿದ್ದು, ನಿಯಮ ಉಲ್ಲಂಘನೆಗೆ ಬ್ರೇಕ್ ಬಿದ್ದಂತಾಗಿದೆ.

ಅಬಕಾರಿ ಕಾಯ್ದೆ 1965ರ ಪ್ರಕಾರ 21 ವರ್ಷದೊಳಗಿನವರಿಗೆ ಮದ್ಯ ಮಾರಾಟ, ಪೂರೈಕೆ ಮಾಡುವುದು ಅಪರಾಧ. ನಿಯಮ ಉಲ್ಲಂಘಿಸಿದ ಬಾರ್ ಮಾಲೀಕರ ವಿರುದ್ಧ ₹10,000 ದಂಡ ಹಾಗೂ 6 ತಿಂಗಳು ಜೈಲು ಶಿಕ್ಷೆವರೆಗೂ ಆಗಬಹುದು.

Share this Article