ಗದಗ: ಹಾಸ್ಟೆಲ್ ವಿದ್ಯಾರ್ಥಿಗಳಿಗೆ ಸ್ಕಾಲರರ್ಶಿಪ್ ಆಸೆ ತೋರಿಸಿ ವಂಚನೆ ಮಾಡುತ್ತಿದ್ದ ಗುಂಪನ್ನು ಗೋವಾಕೆ ಹೋಗುವ ಮಾರ್ಗ ಮಧ್ಯೆ ಸೈಬರ್ ಪೋಲಿಸರು ಬಂಧಿಸಿ ಮುಂದಾಗುವ ದೊಡ್ಡ ಪ್ರಮಾಣದ ವಂಚನೆಯನ್ನು ಬೇಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
ಗದಗ ನಗರದ ಕಳಸಾಪೂರ ರಸ್ತೆಯಲ್ಲಿರುವ ಸರ್ಕಾರಿ ಹಾಸ್ಟೆಲ್ ಒಂದರ ವಿದ್ಯಾರ್ಥಿಗಳಿಗೆ
ಸ್ಕಾಲರರ್ಶಿಪ್ ಆಸೆ ತೋರಿಸಿ ಮಹಾರಾಷ್ಟ್ರ ಬ್ಯಾಂಕ್ ನಲ್ಲಿ ವಿದ್ಯಾರ್ಥಿಗಳ ಹೆಸರಿನಲ್ಲಿ ಖಾತೆ ತೆರೆದಿದ್ದಾರೆ ಖಾತೆಗಳನ್ನು ತೆರೆಯುವ ಕಾಲಕ್ಕೆ ಪ್ರತಿಯೊಂದು ಖಾತೆಗೆ 2000 ಹಣ ಡೆಪಾಸಿಟ್ ಮಾಡಿ ಖಾತೆಗಳನ್ನು ತೆರೆಯಿಸಿದ ನಂತರ ಪಾಸ ಬುಕ್, ಎಟಿಎಮ್ ಕಾರ್ಡ, ಇಂಟರ ನೆಟ್ ಬ್ಯಾಂಕಿಂಗ್ ಮಾಹಿತಿ ಹಾಗೂ ಖಾತೆಗೆ ಲಿಂಕ್ ಇರುವ ಸಿಮ್ ಕಾರ್ಡ ಪಡೆದುಕೊಂಡು ಗೋವಾಕ್ಕೆ ಹೋಗುತ್ತಿದ್ದರು ಅಲ್ಲಿಂದ ಆನ್ಲೈನ್ ಮೂಲಕ ಹಣವನ್ನು ಈ ಖಾತೆಗೆ ವರ್ಗಾವಣೆ ಮಾಡಿಸಲು ಅಮಾಯಕ ವಿದ್ಯಾರ್ಥಿಗಳ ಖಾತೆ ಬಳಕೆ ಮಾಡಿಕೊಳ್ಳುತ್ತಿದ್ದರು.
ವಿದ್ಯಾರ್ಥಿಗಳು ಮೋಸ ಹೋದ ಕುರಿತು ದಿನಾಂಕ 11/03/2026 ರಂದು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಗದಗ ಸೈಬರ್ ಕ್ರೈಮ್ ಪೊಲೀಸರು ತನಿಖೆ ಆರಂಭಿಸಿದರು ಖಚಿತ ಮಾಹಿತಿ ಮೇರೆಗೆ ಆರೋಪಿಗಳು ಪಾಸ ಬುಕ್, ಎಟಿಎಮ್ ಕಾರ್ಡ, ಇಂಟರ ನೆಟ್ ಬ್ಯಾಂಕಿಂಗ್ ಮಾಹಿತಿ ಹಾಗೂ ಖಾತೆಗೆ ಲಿಂಕ್ ಇರುವ ಸಿಮ್ ಕಾರ್ಡ ತೆಗೆದುಕೊಂಡು ಗೋವಾಕ್ಕೆ ಹೋಗುತ್ತಿರು ಬಗ್ಗೆ ಖಚಿತ ಮಾಹಿತಿ ಸಂಗ್ರಹ ಮಾಡಿ ಲೋಕೇಶನ್ ಆದಾರದ ಮೇಲೆ ಆರೋಪಿಗಳನ್ನು ಖೆಡ್ಡಾಕ್ಕೆ ಕೆಡವಿದ್ದಾರೆ ಪೊಲೀಸರು.
ಗದಗ ಎಸ್ಪಿ ರೋಹನ್ ಜಗದೀಶ ಮಾರ್ಗದರ್ಶದನಲ್ಲಿ ಗದಗ ಸೈಬರ್ ಕ್ರೈಂ ಡಿಎಸ್ಪಿ ನೇತೃತ್ವದಲ್ಲಿ ಸಿಬ್ಬಂದಿಗಳ ತಂಡದಿಂದ ಕಾರ್ಯಾಚರಣೆ ನಡೆಸಿದ್ದು ಒಟ್ಟು 05 ಜನ ಆರೋಪಿತರು ವಶಕ್ಕೆ ಪಡೆದಿದ್ದಾರೆ.
ಸೈಬರ ವಂಚನೆಗೆ ಖಾತೆಗಳನ್ನು ಉಪಯೋಗ ಮಾಡಿಕೊಳ್ಳುವ ಸಲುವಾಗಿ ಆಮಿಶವೊಡ್ಡಿ ಖಾತೆ ತೆರೆಸಿದ ಬಗ್ಗೆ ವಂಚಕರು ಪೋಲಿಸ್ ತನಿಖೆ ವೇಳೆಯಲ್ಲಿ ಬಾಯಿಬಿಟ್ಟಿದ್ದಾರೆ.
ವಿಜಯನಗರ ಜಿಲ್ಲೆ ಹೂವಿನಹಡಗಲಿ ತಾಲೂಕಿನ ದಾಸರಹಳ್ಳಿ ತಾಂಡಾದ ರಾಜ ತಂದೆ ರೇಖೆನಾಯಕ (23), ವಾಕ್ಡೊತ್ ವಕೀಲ ತಂದೆ ದೇವೆಂದ್ರ ನಾಯಕ (24), ಜಾರ್ಖಂಡ್ ಮೂಲದ ಜೀಶಾನ್ ಅನ್ಸಾರಿ @ ಜೀಸೂ ತಂದೆ ಜಾಗೀಂರ್ ಅನ್ಸಾರಿ (22) ಛತ್ತಿಸಘಡದ ಬಿಲಾಸ್ಪುರ್ ಬಿಹಾರಿಯ ಆಕಾಶ ತಂದೆ ಸೂರ್ಯಮೋಹನ (32) ಛತ್ತಿಸಘಡದ ಜೂನಾ ಬಿಲಾಸ್ಪುರ್’ದ ಸಾಹಿಲ್ ತಂದೆ ಮನೋಹರ ಟೆಕ್ಚೆಂದ್ದಾನಿ (22)
ಈ ಐದು ಜನ ಆರೋಪಿಗಳು ಪೋಲಿಸರು ವಶಕ್ಕೆ ಪಡೆದಿದ್ದಾರೆ.
ಅರೋಪಿತರಿಂದ ಕೃತ್ಯಕ್ಕೆ ಬಳಕೆ ಮಾಡಿದ 11 ಮೊಬೈಲ್, ಹಾವೇರಿ ಜಿಲ್ಲೆಯ ಬ್ಯಾಂಕಾ ಆಫ್ ಮಹರಾಷ್ಟ್ರದಲ್ಲಿ ತೆರೆದ 03 ಖಾತೆಗಳ ಪಾಸ ಬುಕ್ಕ, ಎಟಿಎಮ್ ಕಾರ್ಡ, ಖಾತೆಗೆ ಲಿಂಕ್ ಇರುವ ಸಿಮ್, ಇಂಟರನೆಟ್ ಬ್ಯಾಂಕಿಂಗ್ ಯುಸರ್ ನೆಮ್ ಪಾಸವರ್ಡ ಕಿಟ್ ಸೇರಿದಂತೆ
ಗದಗ ಬ್ಯಾಂಕಾ ಆಫ್ ಮಹರಾಷ್ಟ್ರದಲ್ಲಿ ತೆರೆದ ಒಟ್ಟು 05 ಖಾತೆಗಳ ಪಾಸ ಬುಕ್, ಎಟಿಎಮ್ ಕಾರ್ಡ, ಖಾತೆಗೆ ಲಿಂಕ ಇರುವ ಸಿಮ್, ಇಂಟರನೆಟ್ ಬ್ಯಾಂಕಿಂಗ್ ಯುಸರ್ ನೆಮ್ ಪಾಸವರ್ಡ ಇರುವ ಕಿಟ್ ಗಳು ವಶಕ್ಕೆ ಪಡೆದಿದ್ದು ಇನ್ನೂ ಇವರ ಜೊತೆಗೆ ಉಳಿದ 03 ಜನ ಆರೋಪಿಗಳಿಗೆ ಪೊಲೀಸ್ ಶೋಧ ನಡೆಸಿದ್ದಾರೆ ಗದಗ ಸೈಬರ್ ಕ್ರೈಮ್ ಪೊಲೀಸರ ಕಾರ್ಯಕ್ಕೆ ಸಾರ್ವಜನಿಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

