ಶಿಗ್ಲಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಲೋಕಾಯುಕ್ತ ಅಧಿಕಾರಿಗಳಿಂದ ಜನ ಸಂಪರ್ಕ ಸಭೆ ಸಾರ್ವಜನಿಕರಿಂದ ಹವಾಲು ಸ್ವೀಕಾರ

Samagraphrabha
1 Min Read

ಲಕ್ಷ್ಮೇಶ್ವರ”ತಾಲೂಕಿನ ಶಿಗ್ಲಿ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಮಂಗಳವಾರ ಗದಗ ಲೋಕಾಯುಕ್ತ ಪಿಎಸ್ಐ ಪರಮೇಶ್ವರ ಕವಟಗಿ, ಎಸ್ ಎಸ್ ತೇಲಿ, ಅವರ ಸಾರ್ವಜನಿಕ ಸಂಪರ್ಕ ಸಭೆ ಹಾಗೂ ಸಾರ್ವಜನಿಕರಿಂದ ಕುಂದು ಕೊರತೆಯ ಹವಾಲುಗಳನ್ನು ಸ್ವೀಕರಿಸಿದರು

ಈ ಸಮಯದಲ್ಲಿ ಮಾತನಾಡಿದ ಲೋಕಾಯುಕ್ತ ಪಿಎಸ್ಐ ಪರಮೇಶ್ವರ ಕವಟಗಿ ಅವರು ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳು ತಮ್ಮ ಹಲವು ಸಮಸ್ಯೆಗಳನ್ನು ಬಗ್ಗೆ ಹರಿಸಿಕೊಳ್ಳಲು ಬರುವ ಸಾರ್ವಜನಿಕರನ್ನು ತಮ್ಮ ಕಚೇರಿಗೆ ಅಲಿದಾಡಿಸದೆ ಇಲಾಖೆಯಿಂದ ಸಿಗುವ ಎಲ್ಲಾ ಸೌಲಭ್ಯಗಳನ್ನು ಅವರಿಗೆ ಒದಗಿಸಿಕೊಡಬೇಕು ಎಂದು ಹೇಳಿದರು ತಾಲೂಕಿನ ವಿವಿಧ ಇಲಾಖೆಯ ಅಧಿಕಾರಿಗಳಿಗೆ ಭಾಗವಹಿಸಿದ್ದರು.

ಗ್ರಾಮಸ್ಥರಿಂದ ಸರ್ಕಾರಿ ಜಾಗ ಒತ್ತುವರಿ ಶೌಚಾಲಯ ನಿರ್ಮಾಣ ಕೈಮಗ್ಗ ಜನನ ಮರಣ ಪ್ರಮಾಣ ಪತ್ರ ಪೂರೈಸುವುದು ಸೇರಿದಂತೆ ಒಟ್ಟು ಗ್ರಾಮಸ್ಥರಿಂದ 5 ಹವಾಲುಗಳನ್ನು ಸ್ವೀಕರಿಸಲಾಯಿತು

ಈ ಸಮಯದಲ್ಲಿ ತಾಲೂಕು ಪಂಚಾಯತಿ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣಪ್ಪ ಧರ್ಮರ, ಕಂದಾಯ ಇಲಾಖೆಯ ಪ್ರಶಾಂತ್ ಕಿಮ್ಮಾಯಿ, ರೈತ ಸಂಪರ್ಕ ಕೇಂದ್ರದ ಅಧಿಕಾರಿ ಚಂದ್ರಶೇಖರ್ ನರಸಮ್ಮನವರ, ತೋಟಗಾರಿಕೆ ಇಲಾಖೆ ಅಧಿಕಾರಿ ಶಂಭುಲಿಂಗ ನೆಗಳೂರು, ಸಮಾಜ ಕಲ್ಯಾಣ ಇಲಾಖೆಯ ಬಿ ಎಸ್ ಹಡಪದ, ಆಹಾರ ಇಲಾಖೆ ಜಗದೀಶ್ ಕುರುಬರು, ಪಂಚಾಯಿತಿಯ ಅಭಿವೃದ್ಧಿ ಅಧಿಕಾರಿ ರವಿ ಕೊರಕನವರ, ಭೂಮಾಪನ ಇಲಾಖೆ, ಪ್ರಜ್ವಲ್ ತೋಟದ, ಆರೋಗ್ಯ ಇಲಾಖೆ ಪಶು ವೈದ್ಯಧಿಕಾರಿ ಹೆಸ್ಕಾಂ ಇಲಾಖೆ ಅಂಗನವಾಡಿ ಆಶಾ ಕಾರ್ಯಕರ್ತೆಯರು ಪಂಚಾಯಿತಿಯ ಎಲ್ಲಾ ಸಿಬ್ಬಂದಿ ವರ್ಗದವರು ಸೇರಿದಂತೆ ತಾಲೂಕು ಮಟ್ಟದ ವಿವಿಧ ಇಲಾಖೆಯ ಎಲ್ಲಾ ಅಧಿಕಾರಿಗಳು ಗ್ರಾಮಸ್ಥರು ಪಾಲ್ಗೊಂಡಿದ್ದರು

- Advertisement -
Ad image

Share this Article