ಗದಗ: ಗಣೇಶ ಚತುರ್ಥಿಗೆ ಕೆಲವೇ ದಿನಗಳು ಬಾಕಿ ಉಳಿದಿದ್ದು ಗಣೇಶ ಮೂರ್ತಿ ತಯಾರಕರು ಈಗಾಗಲೇ ಬಹುತೇಕ ಗಣೇಶ ಮೂರ್ತಿಗಳು ಪ್ರತಿಷ್ಠಾಪನೆಗೆ ಸಿದ್ಧವಾಗಿವೆ ಈ ಪೈಕಿ ಇನ್ನೂ ಕೆಲವು ಗಣೇಶನ ಮೂರ್ತಿಗಳಿಗೆ ಅಂತಿಮ ರೂಪ ನೀಡುವಲ್ಲಿ ಕುಂಬಾರ ಕುಟುಂಬದ ಕಲಾವಿದರು ನಿರತರಾಗಿದ್ದಾರೆ.
ಮಣ್ಣಿನ ಮೂರ್ತಿಗೆ ಬೇಡಿಕೆ:
ಪಿಓಪಿ ಗಣೇಶ ಮೂರ್ತಿಗಳ ಮಾರಾಟ, ತಯಾರಿಕೆಗೆ ನಿಷೇಧ ಹೇರಿದ್ದ ಪರಿಣಾಮವಾಗಿ ಜಿಲ್ಲೆಯಲ್ಲಿ ಬಹುತೇಕ ಸಂಪೂರ್ಣವಾಗಿ ಪಿಓಪಿ ಗಣೇಶ ಮೂರ್ತಿಗಳ ಮಾರಾಟ ನಿಷೇಧಿಸಲಾಗಿದೆ ಇದರ ಪರಿಣಾಮವಾಗಿ ಮಣ್ಣಿನ ಗಣೇಶ ಮೂರ್ತಿಗಳಿಗೆ ಎಲ್ಲಿಲ್ಲದ ಬೇಡಿಕೆ ಉಂಟಾಗಿದೆ.
ತಿಂಗಳುಗಳ ಮುಂಚೆಯೆ ಗಣೇಶನ ಮೂರ್ತಿಗಳು ಬುಕ್:
ಈ ಬಾರಿ ಕಳೆದ ಬಾರಿಗಿಂತ ಗಣೇಶನ ಮೂರ್ತಿ ಕೊಂಡುಕೊಳ್ಳುವವರಿಗೆ ಬೆಲೆ ಕೊಂಚ ದುಬಾರಿಯಾಗಿದೆ ಬೆಲೆ ಏರಿಕೆ ನಡುವೆಯೂ ಗದಗ-ಬೆಟಗೇರಿ ಸೇರಿದಂತೆ ಜಿಲ್ಲಾಧ್ಯಂತ ತಲೆಮಾರಿನಿಂದ ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿರುವವರು ಚಕ್ರಸಾಲಿ, ಚಿತ್ರಗಾರ, ಕುಂಬಾರ ಹಾಗೂ ಇತರೆ ಕಲಾವಿದರು ಕುಟುಂಬ ಸಮೇತವಾಗಿ ನಾಲ್ಕಐದು ತಿಂಗಳ ಹಿಂದೆಯೇ ಗಣೇಶನ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡು ಬಂದಿದ್ದಾರೆ.ಜೊತೆಗೆ ತಿಂಗಳ ಮುಂಚೆಯೇ ಗಣೇಶನ ಮೂರ್ತಿಗಳನ್ನು ಮಾರಾಟ ಪ್ರಕ್ರಿಯೆ ಗಣೇಶನ ಮೂರ್ತಿಯನ್ನು ಗುರುತಿಸಿ ಬುಕ್ ಮಾಡಿದ್ದಾರೆ.
ಮೂರ್ತಿ ನಿರ್ಮಾಣಕ್ಕೆ ಬೇಕಾದ ಅಗತ್ಯ ಜೇಡಿಮಣ್ಣನ್ನು ತಂದು ಅದನ್ನು ಹದಗೊಳಿಸುತ್ತ, ಅಚ್ಚುಗಳ ಮುಖಾಂತರ ಹಾಗೂ ತಮ್ಮ ನೆೈಪುಣ್ಯದ ಮೂಲಕ ಮೂರ್ತಿಗಳನ್ನು ವಿಭಿನ್ನವಾಗಿ ತಯಾರಿಸುತ್ತಿರುವ ಗಣೇಶ ಮೂರ್ತಿ ತಯಾರಕರು ಮೂರ್ತಿಗಳಿಗೆ ಬಣ್ಣ ಹಚ್ಚಿ ಅಂತಿಮ ಸ್ಪರ್ಷ ನೀಡಿದ್ದಾರೆ.

ವಿವಿಧ ಬಗೆಗೆಯಲ್ಲಿ ಗಣೇಶ ಮೂರ್ತಿಗಳು:
ಸಿಂಹಾಸನ ಗಣಪತಿ, ಬಲಮುರಿ ಗಣಪತಿ, ನಾಗರಹಾವು, ಇಲಿ, ತ್ರಿಶೂಲ, ಕಮಲ,ಶಿವನ ವೇಷ,ಕೃಷ್ಣವೇಷ ಹಾಗೂ ಡಮರು ಮೇಲೆ ಕುಳಿತ ಗಣಪತಿ, ನಿಂತ ಗಣಪತಿ, ಬಸವಣ್ಣನ ತಲೆ ಮೇಲೆ ಗಣೇಶ ಹೀಗೆ ವಿಶೇಷವಾಗಿ ವಿಶಿಷ್ಟ ರೀತಿಯ ಗಣಪತಿಗಳು ಸಿದ್ಧವಾಗಿದೆ.
ದುಬಾರಿಯಾದ ಗಣಪ:
ಜೇಡಿ ಮಣ್ಣು ,ಸಾಗಾಣಿಕಾ ವೆಚ್ಚ,
ಬಣ್ಣದ ಬೆಲೆ,ಕಲಾವಿದರ ಸಂಬಳ,ಬಾಡಿಗೆ ಸೇರಿದಂತೆ ಎಲ್ಲವು ದುಬಾರಿಯಾಗಿದೆ ಜೊತೆಗೆ ಸಾಗಾಣಿಕೆ ವೆಚ್ಚ ದುಪ್ಪಟ್ಟಾಗಿರುವುದರಿಂದ ಗಣೇಶನ ಮೂರ್ತಿಗಳ ಬೆಲೆಯಲ್ಲಿ ಕಳೆದ ಬಾರಿಗಿಂತಲೂ ಈ ಬಾರಿ ವ್ಯತಾಸವಾಗಿದೆ ಎನ್ನುತ್ತಾರೆ ಮೂರ್ತಿ ತಯಾರಕರು.
ಬೆಟಗೇರಿಯ ಬಾಬು(ಅಚ್ಚುತ)ಬೆಂತೂರ ಕುಟಂಬದವರು ತಲೆಮಾರುಗಳಿಂದ ಪರಿಸರ ಸ್ನೇಹಿ ಮಣ್ಣಿನ ಬಣ್ಣ ಬಣ್ಣದ ಗಣಪತಿ ಮೂರ್ತಿಗಳ ತಯಾರಿಕೆಯಲ್ಲಿ ತೊಡಗಿಕೊಂಡಿದ್ದಾರೆ ಮನೆಯ ಎಲ್ಲ ಸದಸ್ಯರು ಗಣೇಶ ಮೂರ್ತಿ ತಯಾರಿಕೆಯಲ್ಲಿ ತೊಡಗಿಸಿಕೊಂಡಿದ್ದಾರೆ ಸಣ್ಣ ಸಣ್ಣ ಮೂರ್ತಿಗಳಿಂದ 4 ಅಡಿ ಎತ್ತರದ ಗಣೇಶ ಮೂರ್ತಿಗಳನ್ನು ಮನೆಯಲ್ಲಿ ಪ್ರತಿಷ್ಠಾಪಿಸುವ ಮೂರ್ತಿ ಜೊತೆಗೆ ಸಾರ್ವಜನಿಕ ಮೂರ್ತಿಗಳನ್ನು ತಯಾರಿಸುತ್ತ ಬಂದಿದ್ದಾರೆ.
ಇದರ ಜೊತೆಗೆ ಮಣ್ಣೆತ್ತಿನ ಅಮಾವಾಸ್ಯೆಯಂದು ಮಣ್ಣಿನಿಂದ ಎತ್ತುಗಳು, ನಾಗರ ಪಂಚಮಿಯಂದು ಮಣ್ಣಿನ ನಾಗಪ್ಪ ಮೂರ್ತಿಯನ್ನು ಹಾಗೂ ಗಣೇಶ ಹಬ್ಬದಲ್ಲಿ ಗಣೇಶ ಮೂರ್ತಿಗಳನ್ನು ತಯಾರಿಸಿ ಗ್ರಾಹಕರಿಗೆ ಪೂರೈಸುತ್ತಾ ಬಂದಿದ್ದಾರೆ.

