ಆನ್ ಲೈನ್ ಗೇಮ್ ನಿಷೇದ ಸ್ವಾಗತಾರ್ಹ – ಮಂಜುನಾಥ ಮುಧೋಳ

Samagraphrabha
1 Min Read

ಮುಂಡರಗಿ: ದೇಶದಲ್ಲಿ ಬಹಳ ವ್ಯಾಪಕವಾಗಿ ಹರಡಿ ದುಶ್ಚಟವಾಗಿ ಪರಿಣಮಿಸಿ ಯುವ ಬಳಗವನ್ನು ಸೆಳೆದು ದಾರಿ ತಪ್ಪಿಸಿ ಮೋಜಿನೊಂದಿಗೆ ಅವರನ್ನು ಆನ್ ಲೈಟ್ ಗೇಮ್ ಗಳ ಮೂಲಕ ವಂಚನೆಗೆ ಬಿದ್ದು ಏಳಲಾರದೆ ಕಂಗಾಲಾಗಿದ್ದಾರೆ. ಯಾರೇ ಏನೆ ಹೆಳಿದರು ಮಾತು ಕೇಳದ ಹಾಗೆ ಗೇಮ್ ಗಳು ಅವರನ್ನು ಆಕರ್ಷಿತಗೊಳಿಸಿವೇ ಇದರಿಂದ ಕೇಲ ಯುವಕರು ಆನ್ ಲೈನ್ ಸಹವಾಸದಿಂದ ಮನೆ ಹೊಲ ಮಠ ಮಾರಿಕೊಂಡು ಬಿದಿಗೆ ಬಂದ ಅನೇಕ ಉದಾಹರಣೆಗಳು ಇದ್ದಾವೆ, ನಮ್ಮ ಮುಂಡರಗಿಯಲ್ಲಿ ೨೫ ಕ್ಕೂ ಹೆಚ್ಚು ಯುವಕರು ಈ ಆನ್ ಲೈನ್ ಚಟಕ್ಕೆ ಬಿದ್ದು ಸಾಲ ಮಾಡಿ ವಾರಕ್ಕೆ ಬಡ್ಡಿ ಚಕ್ರಬಡ್ಡಿ ಅಂತಾ ಮನೆಗೆ ಬರುವ ಸಾಲಗಾರ ಕಾಟ ತಡಿಯಲಾರದೆ ಮನೆ ಬಿಟ್ಟು ಹೊಗಿದ್ದಾರೆ ಇದರಿಂದ ಮಕ್ಕಳ ಈ ಚಟದಿಂದ ತಂದೆ ತಾಯಿಗಳ ಆತಂಕಕ್ಕೆ ಕಾರಣವಾಗಿದ್ದಾರೆ, ಮರ್ಯಾದೇ ಹೋಗುತ್ತದೆ ಎಂದು ತಿಳಿದು ಹಿರಿಯರು ಮಾಡಿದ ಅಲ್ಪಸ್ವಲ್ಪ ಆಸ್ತಿಯನ್ನು ಮಾರಿ ಜೀವನ ಕಳೆಯುತ್ತಿದ್ದಾರೆ. ಇವರಂತೆ ಯಾರು ಆಗಬಾರದು ಅಂದರೆ ಈ ಆನ್ ಲೈನ್ ನಿಷೇದ್ ಅನಿವಾರ್ಯವಾಗಿತ್ತು ಅದೇ ತರಹ ಸಾಲ ಮಾಡಿ ಗೆಲ್ಲಬೇಕು ಎಂದು ಮತ್ತೆ ಮತ್ತೆ ಆಡಿ ಸಾಲ ತಿರಿಸಲಾಗದೆ ಜಿಲ್ಲೆಯಾಧ್ಯಂತ ಅನೇಕರು ನೇಣಿಗೆ ಶರಣಾಗಿದ್ದಾರೆ,
ಕೇಂದ್ರದ ಮೋದಿ ಸರಕಾರ ಆನ್ ಲೈನ್ ನಿಷೇದ ಸ್ವಾಗತಾರ್ಹವಾಗಿದೆ ಇದು ಎಷ್ಟೋ ತಂದೆ ತಾಯಿ ಕುಟುಂಬಗಳಿಗೆ ನೆಮ್ಮದಿ ತಂದಿದೆ ಎಂದು ಕನ್ನಡ ಕ್ರಾಂತಿ ಸೇನೆ ಜಿಲ್ಲಾಧ್ಯಕ್ಷರಾದ ಮಂಜುನಾಥ ಮುಧೋಳ ಸಂತಷ ವ್ಯಕ್ತಪಡಿಸಿದ್ದಾರೆ.

Share this Article