ಸೌಹಾರ್ದಯುತದಿಂದ ಗಣಪತಿ ಮತ್ತು ಇದ್ ಮಿಲಾದ್ ಆಚರಿಸೋಣ : ವೀರಣ್ಣ ಶೆಟ್ಟರ್

Samagraphrabha
1 Min Read

ಗಜೇಂದ್ರಗಡ : ಸೌಹಾರ್ದಯುತದಿಂದ ಗಣಪತಿ ಮತ್ತು ಇದ್ ಮಿಲಾದ್ ಆಚರಣೆ ಮಾಡಿ ಹಬ್ಬಗಳು ಸ್ನೇಹ ಸಂಬಂಧವನ್ನು ಬೆಳೆಸುತ್ತವೆ. ಗಣಪತಿ ಹಬ್ಬವನ್ನು ಸಂಭ್ರಮ, ಸಡಗರದಿಂದ ಆಚರಿಸಿದಾಗ ಅದಕ್ಕೆ ಉತ್ತಮ ಸ್ಥಾನಮಾನ ದೊರೆಯುತ್ತದೆ ಎಂದು ವೀರಣ್ಣ ಶೆಟ್ಟರ್ ಹೇಳಿದರು.

ನಮ್ಮ ದೇಶ ಜ್ಯಾತ್ಯಾತೀತ ರಾಷ್ಟ ಹಲವಾರು ಜಾತಿ ಧರ್ಮಗಳನ್ನು ಹೊಂದಿದೆ. ಪ್ರೀತಿಯಿಂದ ಸ್ನೇಹದಿಂದ ಗಣೇಶ, ಇದ್ ಮಿಲಾದ್ ಆಚರಣೆ ಮಾಡೋಣ ಕೋಮು ಸೌಹಾರ್ದತೆಯಿಂದ ಹಬ್ಬಗಳನ್ನು ಆಚರಿಸುವದರಿಂದ ಎಲ್ಲರಿಗೂ ಒಳ್ಳೇಯದಾಗುತ್ತದೆ ಎಂದು ಗಣೇಶ, ಇದ್ ಮಿಲಾದ್ ಹಬ್ಬದ ಪ್ರಯುಕ್ತ ಸೂಡಿ ಗ್ರಾಮದಲ್ಲಿ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಅವರು ಮಾತನಾಡಿದರು.

ಗಜೇಂದ್ರಗಡ ಪಿಎಸ್ಐ ಪ್ರಕಾಶ್ ಡಿ ಮಾತನಾಡಿ ಈ ತಿಂಗಳು ಗಣಪತಿ ಹಬ್ಬ ಮತ್ತು ಇದ್ ಮಿಲಾದ್ ಹಬ್ಬ ಇರುವದರಿಂದ ಈ ಸಭೆಯನ್ನು ಕರೆಯಲಾಗಿದೆ. ಗ್ರಾಮಸ್ಥರು ಯಾವುದೇ ಅಹಿತಕರ ಘಟನೆ ನಡೆಯದಂತೆ ಹಬ್ಬಗಳ ಆಚರಣೆ ಮಾಡಬೇಕು. ಸ್ಥಳೀಯ ಗ್ರಾಮ ಪಂಚಾಯತಿ, ಕೆಇಬಿ ಮತ್ತು ಸ್ಥಳೀಯ ಪೊಲೀಸ್ ಇಲಾಖೆಯಿಂದ ಅನುಮತಿಯನ್ನು ಪಡೆಯಬೇಕು. ನಿಮ್ಮ ಸೇವೆಗಾಗಿ ನಾವು ಸದಾ ಸಿದ್ದ. ಗಣಪತಿ ಇಡುವ ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ರೀತಿಯ ಬೆಟ್ಟಿಂಗ್ ಪ್ರಚೋದನಾ ಆಟಗಳನ್ನು ನಿರ್ಬಂದಿಸಲಾಗಿದೆ. ಮದ್ಯಪಾನ ಮಾಡಿ ಆಚರಣೆಯಲ್ಲಿ ಭಾಗವಹಿಸಬೇಡಿ. ಡಿಜೆ ಗಳು ಆರೋಗ್ಯಕ್ಕೆ ಹಾನಿಕರ ಹೆಚ್ಚಾಗಿ ಡಿಜೆ ಬಳಸುವದರಿಂದ ಹೃದಯಾಘಾತ ಸಂಭವಿಸುತ್ತದೆ. ಸಾಧ್ಯವಾದಷ್ಟು ಸಾರ್ವಜನಿಕ ಗಣಪತಿ ಸ್ಥಳಗಳಲ್ಲಿ ಸಿಸಿಟಿವಿ ಅಳವಡಿಸಿ ಎಂದು ಹೇಳಿದರು.

- Advertisement -
Ad image

ಈ ಸಂದರ್ಭದಲ್ಲಿ ಗ್ರಾ. ಪಂ ಕ್ಲರ್ಕ್ ಮುಕ್ತಾ ಜಾಧವ, ಊರಿನ ಹಿರಿಯರಾದ ನಾಗಪ್ಪ ಅರಮನಿ, ಶಶಿಧರ್ ಒಕ್ಕಲರ, ಬಿಟ್ ಪೊಲೀಸ್ ಮಂಜುನಾಥ ಮಾರಣಬಸರಿ, ಗ್ರಾಮ ಪಂಚಾಯತಿ ಸಿಬ್ಬಂದಿಗಳು, ಊರಿನ ಹಿರಿಯರು, ಯುವಕರು ಭಾಗವಹಿಸಿದ್ದರು.

Share this Article