ಒಂದು ಉತ್ತಮ ಗ್ರಂಥ ನೂರು ಉತ್ತಮ ಸ್ನೇಹಿತರಿಗೆ ಸಮಾನ: ಸವಿತಾ ಮಾರಣಬಸರಿ

Samagraphrabha
1 Min Read

ಗಜೇಂದ್ರಗಡ: ತಾಲೂಕಿನ ಸೂಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ದ್ಯಾಮಹುನಸಿ ಗ್ರಾಮದಲ್ಲಿ ನೂತನ ಗ್ರಾಮ ಗ್ರಂಥಾಲಯವನ್ನು ಗ್ರಾಮ ಪಂಚಾಯಿತಿ ಅಧ್ಯಕ್ಷರಾದ ಆಯಿಶಾ ಬೇಗಂ ಅವರು ಉದ್ಘಾಟಿಸಿದರು. ಸಮಾರಂಭ ಸರಕಾರಿ ಶಾಲಾ ಆವರಣದಲ್ಲಿ ಹೊಸದಾದ ಗ್ರಂಥಾಲಯ ಕೊಠಡಿಯನ್ನು ಹಸಿರು ತೋರಣ ಕಟ್ಟಿ ಹೂವಿನಿಂದ ಅಲಂಕಾರ ಮಾಡಲಾಗಿತ್ತು.

ಈ ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯತಿ ಸದಸ್ಯರಾದ ಬೀರಪ್ಪ ಮಾರನಬಸರಿ, ಗ್ರಾಮ ಪಂಚಾಯಿತಿ ಪಿಡಿಓರವರಾದ ಶ್ರೀಯುತ ಅಶೋಕ ಕಂಬಿ, ದ್ವಿತೀಯ ದರ್ಜೆಯ ಸಹಾಯಕರಾದ ಮುಕ್ತಾಬಾಯಿ ಜಾಧವ ಹಾಗೂ ಸೂಡಿ ಗ್ರಾಮ ಪಂಚಾಯಿತಿಯ ಸಿಬ್ಬಂದಿಗಳಾದ ದುರಗಪ್ಪ ಛಲವಾದಿ, ಶಾನವಾಜ್ ಒಂಟಿಕಾಲ, ಸವಿತಾ ಸೊಬಗಿನ, ಸುಧಾ ಮಾರನಬಸರಿ, ಸಂತೋಷ ಮಾರನಬಸರಿ, ಯಲ್ಲಪ್ಪ ಕಾಸರ, ಸೂಡಿ ಗ್ರಂಥಾಲಯ ಮೇಲ್ವಿಚಾರಕರಾದ ಯಮನಪ್ಪ ಭಜಂತ್ರಿ ಮತ್ತು ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು, ಸರ್ವ ಸದಸ್ಯರು ಭಾಗವಹಿಸಿದ್ದರು. ಇವರೊಂದಿಗೆ ದ್ಯಾಮಹುನಸಿ ಗ್ರಾಮದ ಮಳಿಯಪ್ಪಯ್ಯ ಸ್ವಾಮಿ ಹಿರೇಮಠ, ಶರಣಪ್ಪ ಮೂಗನೂರು, ಬಸಪ್ಪ ಕುರಿ, ಹುತ್ತಪ್ಪ ಕುರಿ, ಯಲ್ಲಪ್ಪ ಹಾದಿಮನಿ, ಲಿಂಗನಗೌಡ ಗೌಡರ, ಗೂಳಪ್ಪ ಮಾದರ, ಯಮನಪ್ಪ ಕುರಿ,ದೇವಪ್ಪ ದಂಡಿನ, ಚಂದ್ರಶೇಖರ ಗೊರವರ, ಹಾಗೂ ಗ್ರಂಥಾಲಯ ನಿರ್ವಾಹಿಕಿಯಾದ ಸವಿತಾ ಹುತ್ತಪ್ಪ ಮಾರನಬಸರಿ ಮತ್ತು ಗ್ರಾಮದ ಗುರು ಹಿರಿಯರು, ಶಾಲೆಯ ಮುಖ್ಯೋಪಾಧ್ಯಾಯರಾದ ಸಿ ಎಫ್. ಗಾಣಿಗೇರ, ಶಿಕ್ಷಕರಾದ ವಿ. ಜಿ ವಡ್ಡರ,

ಶಾಲೆಯ ಮಕ್ಕಳು ಉಪಸ್ತಿತರಿದ್ದರು.
ಒಂದು ಉತ್ತಮ ಪುಸ್ತಕ ನೂರು ಸ್ನೇಹಿತರಿಗೆ ಸಮಾನ, ಆದರೆ ಒಬ್ಬ ಉತ್ತಮ ಸ್ನೇಹಿತ ಒಂದು ಗ್ರಂಥಾಲಯಕ್ಕೆ ಸಮಾನ ಎಂದು ಹೇಳುವ ಡಾ. ಅಬ್ದುಲ್ ಕಲಾಂ ರವರ ಹಾಗೆ ಗ್ರಂಥಾಲಯಗಳು ಜ್ಞಾನ ಭಂಡಾರದ ಖಜಾನೆ ಇದ್ದ ಹಾಗೆ ಅವುಗಳ ಉಪಯೋಗವನ್ನು ನಮ್ಮೂರಿನ ಎಲ್ಲಾ ಜನರು ತೆಗೆದುಕೊಳ್ಳುವುದಕ್ಕೆ ಇದೊಂದು ಉತ್ತಮ ಅವಕಾಶ ಎಂದು ಹೊಸ ಗ್ರಂಥಾಲಯ ನಿರ್ವಾಹಿಕಿ ಸವಿತಾ ಹುತ್ತಪ್ಪ ಮಾರನಬಸರಿ ಆಶಯ ವ್ಯಕ್ತಪಡಿಸಿದರು.

- Advertisement -
Ad image

Share this Article