ಶಾಲಾ ಮಕ್ಕಳಿಂದ ಸಂಸತ್ತು ರಚನೆ

Samagraphrabha
1 Min Read

ಸೊರಟೂರ: ಗ್ರಾಮದ ಕೆ ಪಿ ಎಸ್ ಡಿ ಪಿ ಇ ಪಿ ಶಾಲೆಯಲ್ಲಿ 2025 – 26ನೇ ಸಾಲಿನ ವಿದ್ಯಾರ್ಥಿಗಳ ಶಾಲಾ ಸಂಸತ್ತು ರಚಿಸಲಾಯಿತು.

ಮಕ್ಕಳಿಗೆ ಪ್ರಜಾಪ್ರಭುತ್ವ ಚುನಾವಣೆ ಹಾಗೂ ಮತದಾನದ ಅರಿವು ಮೂಡಿಸುವ ಉದ್ದೇಶದಿಂದ

4ನೇ ತರಗತಿಯ ಮಕ್ಕಳಿಂದ 7ನೇ ತರಗತಿಯ ಮಕ್ಕಳಿಗೆ ಇ ವಿ ಎಂ ತಂತ್ರಜ್ಞಾನದ ಮೂಲಕ ದೇಶದ ಚುನಾವಣೆ ಹಂತಗಳ ರೀತಿಯಲ್ಲಿ ಪ್ರಜಾಪ್ರತಿನಿಧಿಗಳನ್ನು ಆಯ್ಕೆ ಮಾಡುವಂತೆ ಮಕ್ಕಳ ಶಾಲಾ ಸಂಸತ್ತನ್ನು ರಚಿಸಲಾಯಿತು.

ಪ್ರಧಾನ ಮಂತ್ರಿ – ಚೈತ್ರಾ ಜೋಗೇರ. ಉಪ ಪ್ರಧಾನಿ – ಶ್ರೀನಿವಾಸ್ ಚೆನ್ನವೀರ ಶೆಟ್ಟರ. ಹಣಕಾಸು – ಪ್ರೀತಮ್ ಮಲ್ಲಾರಿ. ಶಿಕ್ಷಣ – ಜಿಯಾ ಹುಬ್ಬಳ್ಳಿ . ಕ್ರೀಡೆ – ವೀರೇಶ್ ಪಲ್ಲೆದ. ನೀರಾವರಿ – ರಾಕೇಶ್ ಧನುಜಿ. ಪ್ರವಾಸ – ಆಯನ ಗುಡಿಸಲಮನಿ. ಆರೋಗ್ಯ – ಪ್ರತಿಕ್ಷ ಹಡಪದ. ಆಹಾರ -ತಸ್ಮೀಯಾ ಮಜೂರ. ಗ್ರಂಥಾಲಯ – ಜ್ಯೋತಿ ಸಂಕದಾಳ. ವಾರ್ತಾ – ದಿರಾಜ್ ಹಾದಿಮನಿ. ಶಾಲಾ ಉಸ್ತುವಾರಿ ಮಂತ್ರಿಗಳಾಗಿ ಸಮರ್ಥ ಕನ್ನೂರ. ಮಲ್ಲಪ್ಪ ದೇವಿ ಹಾಳ. ವಹಿಸಿಕೊಂಡರು

- Advertisement -
Ad image

ಈ ಸಂದರ್ಭದಲ್ಲಿ ಶಾಲಾ ಮುಖ್ಯೋಪಾಧ್ಯಾಯರಾದ ಮಹಾಂತೇಶ ಶಲಿಯಪ್ಪನವರ. ಹಾಗೂ ಶಿಕ್ಷಕ ಶಿಕ್ಷಕಿಯರು. ವಿದ್ಯಾರ್ಥಿ ವಿದ್ಯಾರ್ಥಿನಿಯರು ಉಪಸ್ಥಿತರಿದ್ದರು.

Share this Article