ಸಂಶೋಧನೆ, ಮಾಹಿತಿಗೆ ಗ್ರಂಥಾಲಯ ಅವಶ್ಯ: ಗುರಣ್ಣ ಅವರಡ್ಡಿ

Samagraphrabha
2 Min Read

ಅಬ್ಬಿಗೇರಿ : ಗ್ರಂಥಾಲಯಗಳು ಜ್ಞಾನಾರ್ಜನೆ, ಸಂಶೋಧನೆ, ಮತ್ತು ವೈಯಕ್ತಿಕ ಅಭಿವೃದ್ಧಿಗೆ ಸಹಾಯಕವಾಗಿವೆ. ಪುಸ್ತಕಗಳು, ನಿಯತಕಾಲಿಕೆಗಳು, ಮತ್ತು ಇತರ ಶೈಕ್ಷಣಿಕ ಸಂಪನ್ಮೂಲಗಳನ್ನು ಪೂರೈಸುವ ಮೂಲಕ ಜ್ಞಾನವನ್ನು ವಿಸ್ತರಿಸಲು ಮತ್ತು ಹೊಸ ವಿಷಯಗಳನ್ನು ಕಲಿಯಲು ಸಹಾಯ ಮಾಡುತ್ತದೆ.ವಿದ್ಯಾರ್ಥಿಗಳಿಗೆ ಅಧ್ಯಯನ ಮಾಡಲು, ವಿಭಿನ್ನ ವಿಷಯಗಳ ಮಾಹಿತಿ ತಿಳಿಯಲು, ಸಂಶೋಧನೆ ಮಾಡಲು, ಮತ್ತು ವಿಷಯಗಳನ್ನು ಚೆನ್ನಾಗಿ ಅರ್ಥಮಾಡಿಕೊಳ್ಳಲು ಸಹಾಯ ಮಾಡುತ್ತವೆ. ಎಂದು ಅಬ್ಬಿಗೇರಿ ಪಿಕೆಪಿಎಸ್ ಅಧ್ಯಕ್ಷರಾದ ಗುರುನಾಥ ಅವರಡ್ಡಿ ಅಭಿಪ್ರಾಯ ವ್ಯಕ್ತಪಡಿಸಿದರು.
ಗ್ರಾ.ಪಂ.ಅಬ್ಬಿಗೇರಿ, ಅರಿವು ಕೇಂದ್ರ ಹಾಗು ಬಸವರಾಜ ತಳವಾರ ಅಭಿಮಾನಿ ಬಳಗ ಇವರ ಸಂಯುಕ್ತ ಆಶ್ರಯದಲ್ಲಿ ರೋಣ ತಾಲೂಕಾ ವಾಲ್ಮಿಖಿ ಸಮಾಜದ ಅಧ್ಯಕ್ಷರು, ತಾಲೂಕಾ ಗ್ಯಾರಂಟಿ ಸಮಿತಿ ಸದಸ್ಯರು, ಮಾಜಿ ಗ್ರಾ.ಪಂ. ಸದಸ್ಯರಾದ ಬಸವರಾಜ ತಳವಾರ ಇವರ ಜನ್ಮದಿನದ ನಿಮಿತ್ತ ಅಬ್ಬಿಗೇರಿಯ ಅರಿವು ಕೇಂದ್ರದಲ್ಲಿ ನಡೆದ, ಅರಿವು ಕೇಂದ್ರಕ್ಕೆ ಪುಸ್ತಕ ದಾನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡುತ್ತಾ ಜನ್ಮದಿನಾಚರಣೆಗಳಂದು ಇಂತಹ ಸಾರ್ವಜಜನಿಕ ಉಪಯುಕ್ತವಾಗುವ ಕಾರ್ಯ ಸ್ತುತ್ಯಾರ್ಯ ಸುಮಾರು ಹತ್ತುಸಾವಿರ ಮೌಲ್ಯದ ಜ್ಞಾನಾರ್ಜನೆಗೆ ಉಪಯುಕ್ತ, ಐವತ್ತನಾಲ್ಕು ಗ್ರಂಥಗಳು ವಿದ್ಯಾರ್ಥಿಗಳ ಭವಿಷ್ಯದ ಬುನಾದಿಗಳಾಗಿವೆ. ಸಾಮಾಜಿಕ ಜವಾಬುದಾರಿ ಮತ್ತು ಕಾಳಜಿ ಇರುವವರು ಮಾತ್ರ ಇಂತಹ ಕಾರ್ಯ ಮಾಡಲು ಸಾಧ್ಯ ಎಂದು ಅಭಿಪ್ರಾಯಪಟ್ಟರು.
ಮಾಜಿ ಗ್ರಾ.ಪಂ.ಅಧ್ಯಕ್ಷರಾದ ಎಚ್.ಟಿ.ದ್ವಾಸಲ ಮಾತನಾಡಿ ಗ್ರಂಥಾಲಯಗಳು ಸಾರ್ವಜನಿಕರಿಗೆ ಮಾಹಿತಿ ಮತ್ತು ಸಂಪನ್ಮೂಲಗಳನ್ನು ಒದಗಿಸುವ ಮೂಲಕ ಸಮುದಾಯದ ಸೇವೆ ಮಾಡುತ್ತವೆ. ಇದು ಜನರ ಜ್ಞಾನ ಮಟ್ಟವನ್ನು ಹೆಚ್ಚಿಸಲು ಮತ್ತು ಸಮುದಾಯದ ಅಭಿವೃದ್ಧಿಗೆ ಸಹಾಯ ಮಾಡುತ್ತದೆ.ಗ್ರಂಥಾಲಯಗಳು ಜ್ಞಾನ, ಶಿಕ್ಷಣ, ಸಂಶೋಧನೆ, ಮತ್ತು ವೈಯಕ್ತಿಕ ಅಭಿವೃದ್ಧಿಗೆ ಅತ್ಯಂತ ಮಹತ್ವದ ಪಾತ್ರ ವಹಿಸುತ್ತವೆ. ಜ್ಞಾನದ ಭಂಡಾರಗಳಿಗೆ ಜನ್ಮದಿನದಂತಹ ಸಂದರ್ಭದಲ್ಲಿ ಪುಸ್ತಕ ದಾನ ಮಾಡುವ ಮೂಲಕ ಹೊಸ ಸಂಪ್ರದಾಯಕ್ಕೆ ನಾಂದಿ ಹಾಡಿದೆ ಎಂದು ಅಭಿಪ್ರಾಯಪಟ್ಟರು.
ಗ್ರಾ.ಪಂ ಅಧ್ಯಕ್ಷರಾದ ಲಲಿತಾ ರಾಥೋಡ, ಬಸವರಾಜ ಪಲ್ಲೇದ , ಸುರೇಶ ಬಸವರಡ್ಡೇರ, ಎ.ವಿ. ವೀರಾಪೂರ ಮಂಜು ಪಸಾರದ, ಎಂ.ಲೋಹಿತ್, ಮಹದೇವಪ್ಪ ಕಂಬಳಿ, ಜಗದೀಶ ಅವರಡ್ಡಿ, ದುರುಗೇಶ ಬಂಡಿವಡ್ಡರ, ಸಂತು ಕಲ್ಲೇಶ್ಯಾಣಿ, ಆನಂದ ಹಿರೇಮನಿ, ಮಲ್ಲಯ್ಯ ಮಠಪತಿ , ಸಚಿನ್ ಪಾಟೀಲ, ಶಿವಪುತ್ರ ಕೆಂಗಾರ, ರೇಖಾ ಅವರಡ್ಡಿ, ರೇಖಾ ವೀರಾಪೂರ, ಅಕ್ಕಮ್ಮ ಡೊಳ್ಳಿನ ರತ್ನಕ್ಕ ಮಾಳಶೆಟ್ಟಿ, ಚನ್ನಮ್ಮ ತಳವಾರ, ಸಿ.ಆರ್.ಸಿ.ಶರಣಪ್ಪ ಮೂಲಿಮನಿ, ವಿರೇಶ ಶಿದ್ನೆಕೊಪ್ಪ, ವಿಜಯ್ ಕುಮಾರ ಇಟಗಿ, ಪರಶುರಾಮ ಹಡಪದ, ಮುಂತಾದವರು ಉಪಸ್ಥಿತರಿದ್ದರು. ಆರ್.ಡಿ. ರಂಗಣ್ಣವರ ಸ್ವಾಗತಿಸಿದರು, ಡಿ.ಎಚ್. ಪರಂಗಿ ನಿರೂಪಿಸಿದರು.

Share this Article