ಹನ್ನೆರಡನೆ ಶತಮಾನದ ಇತಿಹಾಸದಲ್ಲಿಯೇ ಪ್ರಪ್ರಥಮವಾಗಿ ದುಡಿಯುವ ವರ್ಗದ ಅಸ್ಮೀತೆಯ ಪ್ರತಿಕವಾಗಿ ಹುಟ್ಟಿಕೊಂಡಿರುವದೆ ಶರಣ ಚಳುವಳಿ, ಈ ಚಳುವಳಿಯಲ್ಲಿ ಶತಮಾನಗಳಿಂದ ಜಾತಿಯ ಹೆಸರಿನಲ್ಲಿ ಶೋಷಣೆ ಅವಮಾನಕ್ಕೆ ಒಳಗಾಗಿ ಕಷ್ಠ ಸಹಿಷ್ಣಗಳನ್ನು ಶ್ರಮಜೀವಿಗಳೆಲ್ಲರೂ ಒಂದಾಗಿ ಚಾತುರ್ವರ್ಣ ವ್ಯವಸ್ಥೆಯ ವಿರುದ್ದ ನಿಂತರು,ಜಾತಿ,ವರ್ಣ,ಲಿಂಗ,ಆದರಿಸಿ ಅಸಮಾನೆತೆಯಿಂದ ನಿರ್ಮಾಣಗೊಂಡಿದ್ದ ಸಮಾಜವನ್ನು ಧಿಕ್ಕರಿಸಿ, ಪ್ರತಿಯಾಗಿ ಸಹಬಾಳ್ವೆ,ಸಮಾನತೆ,ಸಹಕಾರ,ಕಾಯಕ ,ಮೂಲಕ ಅಚಾರ ವಿಚಾರ ಅರಿವು ನಡೆ ನುಡಿ ಸಿದ್ದಾಂತಗಳ ಆದಾರದಲ್ಲಿ ನಿಜಸುಖ ಕಂಡವರು ಅನೇಕ ಶರಣರ ಸಾಲಿನಲ್ಲಿ ನೆಲೆಯಾಗಿ ನಿಂತು ೧೨ ನೇ ಶತಮಾನದ ಸರ್ವಶ್ರೇಷ್ಠ ಶರಣ,ಕಾಯಕ ನಿಷ್ಠೆ ತತ್ವ ಸೇವೆ ಇವುಗಳ ಮೂಲಕ ಬಿದ್ದವರನ್ನು ಮೆಲೆತ್ತಿ ಅವರ ಕಾಯಕದ ಮಹತ್ವ ತಿಳಿಸಿ ಜನಮಾಸದಲ್ಲಿ ಉಳಿದಿರುವ ಭಕ್ತಿಬಂಡಾರಿ ಬಸವಣ್ಣವರ ಬಲಗೈ ಬಂಟ ಹಾಗೂ ಬಸವ ಪ್ರೀಯ ಎಂದು ಖ್ಯಾತಿ ಗಳಿಸಿ ಅದರಂತೆ ನಡೆದವರು ಹಡಪದ ಅಪ್ಪಣ್ಣವರು,
ಹಡಪದ ಸಮಾಜದವರಾಗಿದ್ದು ಹಡಪದ ಎನ್ನುವ ಪದ ಎಲೆ ಅಡಿಕೆ ಇಡುವ ಚಿಲ ಹಾಗೂ ಕ್ಷೌರಿಕ ಇಡುವ ಚಿಲ ಎಂದು ವಾಡಿಕೆ,
ವಿಶ್ವದ ಪ್ರಥಮ ಪ್ರಜಾಪ್ರಭುತ್ವ ಎಂದು ಹೆಸರಾಗಿದ್ದ ಅನುಭವ ಮಂಟಪದ ಬಸವಣ್ಣವರ ಪ್ರಧಾನ ಕಾರ್ಯದರ್ಶಿಗಳಾಗಿ ಸೇವೆ ಮಾಡುತ್ತಿದ್ದರು, ಬಸವಣ್ಣವರು ಕೂಡ ಯಾವುದೇ ಕಾರ್ಯ ಇರಲಿ ಮೊದಲು ಬಸವಣ್ಣವರನ್ನು ಮುಂದೆ ಬಿಡುತ್ತಿದ್ದರು ಯಾಕಂದರೆ ಆಗಿನ ಶರಣರಲ್ಲಿ ಹಡಪದ ಅಪ್ಪಣ್ಣವರ ಬಗ್ಗೆ ಬಹಳ ಕಿಳರಿಮೆ ಇತ್ತು,ಈ ಸಮಾಜದವರನ್ನು ಬೆಳಗ್ಗೆ ಯಾರಾದರೂ ನೋಡಿದರೆ ಏನಾದರೂ ಆಗುತ್ತದೆ ಎಂದು ಮೂಡನಂಬಿಕೆಯನ್ನು ನಂಬಿದ್ದರು, ಅದನ್ನು ಮನಗಂಡ ಬಸವಣ್ಣವರು ತಮ್ಮನ್ನು ಬೇಟಿ ಆಗಲು ಬರುವವರನ್ನು ಮೊದಲಿಗೆ ಅವರನ್ನು ಕರೆತರಲು ಅಪ್ಪಣ್ಣವರನ್ನು ಕಳಿಸುತ್ತಿದ್ದರು,ಆದರೆ ಹಡಪದ ಅಪ್ಪಣ್ಣವರು ಬಸವಣ್ಣರ ಇಚ್ಚೆಗೆ ಅವರ ಕಾಯಕಕ್ಕೆ ಒಂದಿಚ್ಚು ಯಾವತ್ತು ಚ್ಯೂತಿ ಬರದ ಹಾಗೆ ಕಾಯಕ ಮಾಡಿ ಬೆಷ್ ಏನಿಸಿಕೊಂಡವರು,
ಹಡಪದ ಅಪ್ಪಣ್ಣವರು ವಿಜಯಪೂರ ಜಿಲ್ಲೆಯ ಬಸವನ ಬಾಗೇವಾಡಿ ತಾಲ್ಲೂಕಿನ ಮಸಬಿನಾಳ ಗ್ರಾಮದ ಶರಣ ಚೆನ್ನವವೀರಪ್ಪ ಹಾಗೂ ದೇವಕ್ಕಮಮ್ಮನವರ ಪ್ರೀತಿಯ ಮಗನಾಗಿ ಬೆಳದವರು, ಹಡಪದ ಅಪ್ಪಣ್ಣವರ ಇವರು ಕೂಡ ಬಸವ ಪ್ರೀಯ ಚೆನ್ನಬಸವಣ್ಣ ಎಂಬ ಅಂಕಿತನಾಮದಿಂದ ಸುಮಾರು ೨೫೫ ಕ್ಕಿಂತ ಹೆಚ್ಚು ವಚನಗಳನ್ನು ಬರೆದು ಅವರ ವಚನಗಳಲ್ಲಿ ಅಂದಕಾರ ಮೂಡನಂಬಿಕೆ ಹೋಗಲಾಡಿಸುವದು,ಸದ್ವಿಚಾರ ಮೂಡಿಸುವ ಹಾಗೆ ವಚನಗಳು ಇದ್ದವು . ಇವರ ಹೆಂಡತಿ ಶರಣೆ ಲಿಂಗಮ್ಮ ಅಪ್ಪಣ್ಣಪ್ರೀಯ ಚೆನ್ನಬಸವಣ್ಣ ಅಂಕಿತದಲ್ಲಿ ಸುಮಾರು ೧೧೪ ವಚನಗಳನ್ನು ಬರೆದಿದ್ದಾರೆ.
ಲೇಸೆನಿಸಿಕೊಂಡು ಐದು ದಿನ ಬದುಕಿದರೇನು ?
ಲೇಸೆನಿಸಿಕೊಂಡು ನಾಲ್ಕು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಮೂರು ದಿನ ಬದುಕಿದರೇನು ?
ಲೇಸೆನಿಸಿಕೊಂಡು ಎರಡು ದಿನ ಬದುಕಿದರೇನು ?
ಕೂಡಲಸಂಗನ ಶರಣರ ವಚನದಲ್ಲಿ
ಲೇಸೆನಿಸಿಕೊಂಡು ಒಂದು ದಿನ ಬದುಕಿದರೆ ಸಾಕು ಎನ್ನುವ ಬಸವಣ್ಣವರ ವಚನದಂತೆ ಲೇಸು ಏನಿಸಿಕೊಂಡು ನೂರು ವರ್ಷಗಳ ಕಾಲ ಬಾಳುವದಕ್ಕಿಂತ, ಭಕ್ತಿ ಕಾಯಕ ದಾಸೋಹ ಸನ್ನಡತೆಯಿಂದ ಒಂದು ದಿನ ಬದುಕಬೇಕು ಎನ್ನುವ ಹಾಗೆ ಹಡಪದ ಅಪ್ಪಣ್ಣವರ ಬದುಕಾಗಿತ್ತು, ಇವರು ವಿಜಯಪೂರದಲ್ಲಿ ಶಿಕ್ಷಣವನ್ನು ಪಡೆದ ಇವರು ತಮ್ಮ ಗುರುಗಳೊಂದಿಗೆ ಕೂಡಲಸಂಗಮದಲ್ಲಿ ನೆಲೆಸಿದ್ದರು ಅಲ್ಲಿ ಬಸವಣ್ಣವರ ಬೇಟಿ ಆಗಿ ಇವರಿಬ್ಬರ ನಡುವೆ ಬಾಂಧವ್ಯ ಬೆಳೆಯುತ್ತದೆ ಅಲ್ಲಿಂದ ಕಲ್ಯಾಣಕ್ಕೆ ಬರುತ್ತಾರೆ.
ಆಗಿನ ಕಾಲದಲ್ಲಿಯೂ ಕೂಡ ಮೆಲ್ಜಾತಿ ಕೆಳಜಾತಿಯ ಕೆಟ್ಟ ಸಂಪ್ರದಾಯ ಮುಡನಂಬಿಕೆ ಬೇರುರಿತ್ತು ಅಪ್ಪಣ್ಣವರು ತಮ್ಮ ವಚನಗಳ ಮೂಲಕ ಅಂದಕಾರವನ್ನು ಹೋಗಲಾಡಿಸಲೂ ಶ್ರಮಿಸಿದರು.
ಅಂಗವ ಮರೆದು ಲಿಂಗವ ಕೂಡಿ,
ಸಂಗವ ಮರೆದು ಜಂಗಮವ ಕೂಡಿ,
ಗುಣವ ಮರೆದು ಗುರುವ ಕೂಡಿ,
ಪರವ ಮರೆದು ಪ್ರಸಾದವ ಕೂಡಿ,
ಹರುಷವ ಮರೆದು ಹರನ ಕೂಡಿ,
ಬೆರಸಿ ಬೇರಿಲ್ಲದಿಹ ನಿಜಶರಣಂಗೆ ನಮೋ ನಮೋ ಎಂಬೆ,ಬಸವಪ್ರಿಯ ಕೂಡಲಚೆನ್ನಬಸವಣ್ಣಾ.
ಈ ಮೇಲಿನ ವಚನವು ಬಹಳ ಅರ್ಥಪೂರ್ಣವಾಗಿದೆ
ಅಂಗ ಅಂದರೆ ದೇಹ,ಸಂಗ ಅಂದರೆ ಸಂಸಾರ,ಗುಣ ಇತರರ ಸಂತೋಷವನ್ನು ಮರೆತು ಲಿಂಗ,ಜಂಗಮ,ಗುರು, ಪ್ರಸಾದ ಮತ್ತು ಕಾಯಕದ ಮೂಲಕ ಐಕ್ಯನಾಗುದೇ ನೀಜವಾದ ಶರಣರ ತತ್ವ ,ಹಿಗೆ ಎಲ್ಲವನ್ನು ಮರೆತು ಒಂದಾಗಿ ಬಾಳುವವನೇ ಶರಣ ಎಂದು ಹೆಳುವ ಮೂಲಕ ಶ್ರೇಷ್ಠತೆಗೆ ಹೆಸರಾದವರು ಹಡಪದ ಅಪ್ಪಣ್ಣವರು.
ಬಸವಣ್ಣವರ ಬಗ್ಗೆ ಅಪಾರ ಗೌರವ,ಭಕ್ತಿ ಹೊಂದಿದ್ದ ಅಪ್ಪಣ್ಣವರು ಕಾಯಾ ವಾಚಾ ಮನಸ್ಸಿನಿಂದ ಅವರು ನಡೆದ ದಾರಿಯಲ್ಲಿ ಬೆಳದವರು, ಅವರ ನಡೆ ನುಡಿ ಕಾಯಕ ಅರಿತ ಕಲ್ಯಾಣದ ಶರಣರೆಲ್ಲರೂ ಪ್ರೀತಿಯಿಂದ ನೀಜಸುಖಿ ಶರಣ ಎಂದು ಕರೆಯುತ್ತಿದ್ದರು, ಹಲವಾರು ಶರಣರು ಬರೆದ ವಚನಗಳ ಸಾಲಿನಲ್ಲಿ ಅಪ್ಪಣ್ಣವರ ವಚನಗಳು ಸೆರುತ್ತವೇ ದಾಸೋಹ ನಿಷ್ಠೆ,ಭಕ್ತಿ,ವೈರಾಗ್ಯ,ಆಚಾರ ವಿಚಾರಗಳನ್ನು ಮೈಗೂಡಿಸಿಕೊಂಡು ಕಿಳಾಗಿ ಕಾಣುತ್ತಿದ್ದ ವರ್ಗಕ್ಕೆ ತಮ್ಮ ವಚನಗಳ ಮೂಲಕ ಚಾಟಿ ಬಿಸುತ್ತಿದ್ದರು.
ಅಪ್ಪಣ್ಣನವರು ಬಸವಣ್ಣನವರ ವಿಚಾರಧಾರೆಗಳನ್ನು ಹರಡುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.ಅವರ ವಚನಗಳು ಸಮಾಜದಲ್ಲಿ ಸಮಾನತೆ, ಭಕ್ತಿ ಮತ್ತು ಕಾಯಕದ ಮಹತ್ವವನ್ನು ಸಾರುತ್ತವೆ.ಅವರ ವಚನಗಳಲ್ಲಿ ಗುರು, ಲಿಂಗ, ಜಂಗಮ, ಮತ್ತು ನಿಷ್ಠೆಗಳ ಅಡಕವಾಗಿವೆ, ಅವರ ವಚನಗಳನ್ನು ಓದುವುದು ಮತ್ತು ಅರಿತುಕೊಳ್ಳುವುದು ಇಂದಿನ ಸಮಾಜಕ್ಕೆ ಬಹಳ ಮುಖ್ಯವಾಗಿದೆ. ಏಕಂದರೆ
ಸಮಾಜದಲ್ಲಿ ಇಂದಿಗೂ ನಾವು ಮೇಲ್ಜಾತಿ ಕಿಳಜಾತಿ ಅತಿಯಾಗಿ ಮೂಡನಂಬಿಕೆಗಳನ್ನು ಕಾಣುತ್ತೆವೆ. ಇದರಿಂದ ಅನೇಕರು ನೊಂದಿದ್ದಾರೆ,ಇದನ್ನು ಹೋಗಲಾಡಿಸಬೇಕು ಎಂದರೆ ಶರಣರ ವಚನಗಳ ಸಾರವನ್ನು ಮನೆ ಮನ ಮುಟ್ಟಿಸುವ ಮೂಲಕ ಅರಿವು ಮೂಡಿಸಬೇಕು, ಹುಟ್ಟು ಆಕಸ್ಮಿಕ ಸಾವು ಖಚಿತ ಇವರೆಡರ ಮದ್ಯೆ ಬದುಕುತ್ತಿರುವ ಸರ್ವರೂ ನಾವೇಲ್ಲರೂ ಸಮಾನರು ಎಂದು ಕಾಣಬೇಕು ಬಸವಣ್ಣವರ ಇಚ್ಚೆಯು ಕೂಡ ಇದೆ ಆಗಿದೆ, ಹಡಪದ ಅಪ್ಪಣ್ಣವರು ಮೂಡನಂಬಿಕೆಗಳನ್ನು ಹೊಗಲಾಡಿಸಲು ಪ್ರಯತ್ನಿಸಿದವರು ಹಡಪದ ಸಮಾಜದವರನ್ನು ಗೌರವದಿಂದ ಕಾಣುವಂತೆ ಮಾಡಿದ ಕಿರ್ತಿ ಅಪ್ಪಣ್ಣವರಿಗೆ ಸಲ್ಲುತ್ತದೆ.
೧೨ ನೇ ಶತಮಾನದಲ್ಲಿ ಅಸಮ ಸಮಾಜದ ಶೊಷಣೆಯನ್ನು ದಿಕ್ಕರಿಸಿ ಸಮ ಸಮಾಜದ ನಿರ್ಮಾಣಕ್ಕೆ ವಚನಗಳ ಮೂಲಕ ಹೋರಾಡಿದ ಬಸವಣ್ಣ,ಅಕ್ಕಮಹಾದೇವಿ,ಮಾದರ ಚೆನ್ನಯ್ಯ,ಮಾಚಿದೇವ,ಮುಂತಾದ ಶರಣರಂತಯೇ ಹಡಪದ ಅಪ್ಪಣ್ಣನವರು ಪೂಜ್ಯನಿಯರಾಗಿದ್ದಾರೆ.
ಅವರ ನಡೆದ ದಾರಿ ಬದುಕು ಆದರ್ಶದ ಜೀವನ ಇಂದಿನ ಪಿಳಿಗೆಗೆ ಅವಶ್ಯಕವಾಗಿದೆ. ಅವರಂತೆಯೇ ನಾವೇಲ್ಲರೂ ನಡಿಯೋಣ .
ಜುಲೈ ೧೦ ಹಡಪದ ಅಪ್ಪಣ್ಣವರ ಜನ್ಮದಿನದ ನಿಮಿತ್ಯವಾಗಿ ಈ ಲೇಖನ.
ಮಂಜುನಾಥ ಕಳಕಪ್ಪ ಮುಧೋಳ
ಸಂಪನ್ಮೂಲ ವ್ಯಕ್ತಿ ಮುಂಡರಗಿ
9741758688

