ಅಂಬುಲೆನ್ಸ ನಲ್ಲೇ ಮಗುವಿಗೆ ಜನ್ಮ ನೀಡಿದ ತಾಯಿ

Samagraphrabha
1 Min Read

ಮುಂಡರಗಿ : ತೀವ್ರ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಅಂಬುಲೆನ್ಸ್ ನಲ್ಲೇ ಮಗುವಿಗೆ ಜನ್ಮ ನೀಡಿದ್ದಾಳೆ ತಾಯಿ.

ಗದಗ ಜಿಲ್ಲೆ ಮುಂಡರಗಿ ತಾಲೂಕಿನ ದಿಂಡೂರ ತಾಂಡಾದ ನಿವಾಸಿಯಾದ ಸಾವಿತ್ರಿ ಲಮಾಣಿ (25) ಹೆರಿಗೆ ನೋವಿನಿಂದ ಬಳಲುತ್ತಿದ್ದಳು ಕೂಡಲೇ 108 ಅಂಬುಲೆನ್ಸ್ ಗೆ ಕರೆ ಮಾಡಿದ್ದಾರೆ

ಜಿಮ್ಸ್ ಆಸ್ಪತ್ರೆ ಬರುವ ಮಾರ್ಗ ಮಧ್ಯದಲ್ಲಿ ಹೆರಿಗೆ ನೋವು ಜಾಸ್ತಿಯಾಗಿದೆ ಹೀಗಾಗಿ ಅಂಬುಲೆನ್ಸ್ ನಲ್ಲೆ ಸುರಕ್ಷಿತವಾಗಿ ಹೆರಿಗೆ ಮಾಡಿದ್ದಾರೆ ಅಂಬುಲೆನ್ಸ ಸಿಬ್ಬಂದಿ.

ಗಂಡು ಮಗುವಿಗೆ ಜನ್ಮ ನೀಡಿದ ತಾಯಿ ಸಾವಿತ್ರಿ ಲಮಾಣಿ ಸದ್ಯ ಸುರಕ್ಷಿತವಾಗಿರೊ ತಾಯಿ ಮತ್ತು ಮಗು ಗದಗ ಜಿಮ್ಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

- Advertisement -
Ad image

108 ಸಿಬ್ಬಂದಿ ರವಿ ಬಡಿಗೇರ ಹಾಗೂ ಮಹೇಶ ರಾಮಣ್ಣವರ ಅಂಬುಲೆನ್ಸ್ ಸಿಬ್ಬಂದಿಗೆ ಸಾರ್ವಕನಿಕರಿಂದ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Share this Article