ವಿಶೇಷ ಅಭಿಯಾನದ ಫಲ ಜಿಲ್ಲೆಯ ಗ್ರಾಮ ಪಂಚಾಯತಗಳಲ್ಲಿ ದಶಕಗಳ ನಂತರ 100% ರಷ್ಟು ತೆರಿಗೆ ಸಂಗ್ರಹಣೆ

graochandan1@gmail.com
2 Min Read

ವಿಶೇಷ ಅಭಿಯಾನದ ಫಲ : ಶೇಕಡಾ 100.61 ರಷ್ಟು ತೆರಿಗೆ ವಸೂಲಿಯಲ್ಲಿ ಜಿಲ್ಲೆಯ ಸಾಧನೆ

ಗದಗ: ಜಿಲ್ಲೆಯ 122 ಗ್ರಾಮ ಪಂಚಾಯತಿಗಳಲ್ಲಿ ತೆರಿಗೆ ವಸೂಲಾತಿಯ ವಿಶೇಷ ಅಭಿಯಾನದ ಫಲವಾಗಿ 90 ಗ್ರಾಪಂಗಳು ಶೇ. 100ರಷ್ಟು ಸಾಧನೆ ಮಾಡಿದ್ದು ಪ್ರಸಕ್ತ ಶೇ.100.61 ಸಾಧನೆ ಮಾಡಿ ರಾಜ್ಯದಲ್ಲಿ 7 ಸ್ಥಾನದಲ್ಲಿದೆ ಎಂದು ಜಿಲ್ಲಾ ಪಂಚಾಯತಿ ಸಿ.ಇ.ಒ ಭರತ್‌ ಎಸ್‌ ರವರು ಹೇಳಿದರು.

ಈ ಕುರಿತು ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿಗಳು, ಜಿಲ್ಲಾ ಪಂಚಾಯಶಸ್ವಿಗೋಳಿಸಿದ್ದಾರೆ ಜಿಲ್ಲೆಗೆ ಸವಾಲಾಗಿದ್ದ ಗ್ರಾಮ ಪಂಚಾಯತಿ ತೆರಿಗೆ ಬಾಕಿ ವಸೂಲಾತಿ ಪ್ರಮಾಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಜಿಲ್ಲೆಯ 7 ತಾಲೂಕುಗಳಲ್ಲಿ ತೆರಿಗೆ ವಸೂಲಿಯಲ್ಲಿ ಶೇ. 100.61 ರಷ್ಟು ಸಾಧನೆ ಮಾಡಿ ಎಂಬುದು ಹೆಮ್ಮೆಯ ಸಂಗತಿಯಾಗಿದೆ.
ಪ್ರಸಕ್ತ ಸಾಲಿನ ಗುರಿ 1387.54 ಲಕ್ಷ ಇದ್ದು, 1395.95 ಲಕ್ಷ ಸಂಗ್ರಹವಾಗಿದೆ ಎಂದು ಹೇಳಿದರು.

ಅಭಿಯಾನದ ಫಲಶೃತಿ :

- Advertisement -
Ad image

ಸಾಮಾನ್ಯವಾಗಿ ಹಲವಾರು ವರ್ಷಗಳಿಂದ ಗ್ರಾಪಂ ತೆರಿಗೆ ವಸೂಲಾತಿ ತೀವ್ರ ಮಂದಗತಿಯಲ್ಲಿ ಸಾಗಿತ್ತು. ಇದನ್ನರಿತು ಜಿಲ್ಲೆಯಲ್ಲಿ ಆಂದೋಲನೊಪಾಧಿಯಲ್ಲಿ ಹಮ್ಮಿಕೊಂಡ ವಿಶೇಷ ಅಭಿಯಾನದ ಫಲವಾಗಿ ಈ ಸಾಧನೆ ಸಾಧ್ಯವಾಗಿದೆ, ವಿವಿಧ ಹಂತಗಳಲ್ಲಿ ನಡೆದ ವಿಶೇಷ ಅಭಿಯಾನದಲ್ಲಿ ತಾಲ್ಲೂಕು ಪಂಚಾಯತಿ /ಗ್ರಾಮ ಪಂಚಾಯತಿ ಅಧಿಕಾರಿಗಳು/ ಸಿಬ್ಬಂದಿ ಹಾಗೂ ಜನಪ್ರತಿನಿಧಿಗಳು ಜನರ ಮನವೊಲಿಸಿ ತೆರಿಗೆ ವಸೂಲಿ ಮಾಡಿದ್ದಾರೆ, ಇದರಿಂದಾಗಿ ಗ್ರಾಮ ಪಂಚಾಯತಿಗಳ ಆರ್ಥಿಕ ಬಲ ಹೆಚ್ಚಾದಂತಾಗಿದೆ.

ತೆರೆಗೆ ವಸೂಲಾತಿಗೆ ವಿಶೇಷ ಅಭಿಯಾನ:

ಜಿಲ್ಲಾ ಪಂಚಾಯತಿಯಿಂದ ತೆರಿಗೆ ವಸೂಲಿಗಾಗಿ *“ತೆರಿಗೆ ಮಾಸಾಚರಣೆ”* ಹಮ್ಮಿಕೊಂಡು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಎಲ್ಲ ಗ್ರಾಮಗಳಲ್ಲಿ ಮನೆ ಮನೆಗೆ ಭೇಟಿ ಮತ್ತು ಜಾಥಾ ಕಾರ್ಯಕ್ರಮ ಮೂಲಕ ಕ್ರಮಕೈಗೊಳ್ಳಲು ನಿರ್ದೇಶನ ನೀಡಲಾಗಿತ್ತು. ಅದರಂತೆ ಕರ ವಸೂಲಿಗಾರರು ಪ್ರತಿದಿನ ಬೆಳಗ್ಗೆ ಮತ್ತು ಸಂಜೆ ಎರಡು ಹಂತಗಳಲ್ಲಿ ಮನೆ ಮನೆಗೆ ತೆರಳಿ ಕರ ವಸೂಲಿ ಮಾಡಿದ್ದರಿಂದ ಈಸಾಧನೆ ಸಾಧ್ಯವಾಗಿದೆ ಸದರಿ ಅಭಿಯಾನದ ಯಶಸ್ಸು ಸಾಧ್ಯವಾಗಿಸಲು ಪ್ರಮುಖ ಕಾರಣ ಸಾರ್ವಜನಿಕರು, ಅವರುಗಳ ಸಹಸ್ಪಂದನೆಯಿಂದ ನಿಗದಿಪಡಿಸಿದ ಗುರಿಗೆ ಶೇ. 100.61% ಸಾಧನೆಯಾಗಿದೆ, ನಮ್ಮ ನಿರಿಕ್ಷೆ ಈಗ ಸಾಕಾರವಾಗಿದೆ ಎನ್ನುತ್ತಾ ಅದಕ್ಕೆ ಕಾರಣರಾದ ಸಾರ್ವಜನಿಕರಿಗೂ ಧನ್ಯವಾದಗಳನ್ನು ತಿಳಿಸಿದ್ದಾರೆ.

ಗ್ರಾಮಸ್ಥರಿಗೆ ಗ್ರಾಪಂ ಕರ ಪರಿಷ್ಕರಣೆ ಬಗ್ಗೆ ಆಗಿಂದ್ದಾಗ್ಗೆ ಪ್ರಕಟಣೆ ಮೂಲಕ ತಿಳಿಯಪಡಿಸಿದ್ದರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಗ್ರಾಮ ಪಂಚಾಯಿತಿ ತೆರಿಗೆ ವಿಧಿಸುವುದು, ತೆರಿಗೆ ಪರಿಷ್ಕರಿಸುವುದು ಮತ್ತು ತೆರಿಗೆ ವಸೂಲಿ ಮಾಡುವ, ಸರ್ಕಾರದ ನಿಯಮ ಹಾಗೂ ಸುತ್ತೋಲೆಗಳ ಬಗ್ಗೆ ಸಾರ್ವಜನಿಕರಿಗೆ ಮನವರಿಕೆಯಿಂದ ತೆರೆಗೆ ವಸುಲಾತಿ ಅಭಿಯಾನ ಯಶಸ್ವಿಗೆ ಸಾಧ್ಯವಾಯಿತು.

  1. ಶೇಕಡಾ. 100 ರಷ್ಟು ಸಾಧನೆ ಮಾಡಿದ ತಾಲ್ಲೂಕು ಪಂಚಾಯತಿಗಳು, ಮುಂಡರಗಿ ಶೇ. 105.28, ನರಗುಂದ ಶೇ. 100.86, ರೋಣ ಶೇ. 104.86, ಶಿರಹಟ್ಟಿ ಶೇ. 102.47, ಗಜೇಂದ್ರಗಡ ಶೇ. 100.60, ಲಕ್ಷ್ಮೇಶ್ವರ ಶೇ. 105.28 ಹಾಗೂ ಗದಗ ತಾಲ್ಲೂಕು ಶೇ. 94.81 ರಷ್ಟು ಪ್ರಗತಿ ಸಾಧಿಸಿದೆ, ಒಟ್ಟಾರೆ ಜಿಲ್ಲೆಯಲ್ಲಿನ 90 ಗ್ರಾಮ ಪಂಚಾಯತಿಗಳು ಪ್ರಸ್ತುತ ವರ್ಷದ ಬೇಡಿಕೆಗೂ ಮೀರಿ ಸಾಧನೆ ಮಾಡಿವೆ.


ಜಿಲ್ಲೆಯಲ್ಲಿನ 122 ಗ್ರಾಪಂಗಳಲ್ಲಿ ಕರ ವಸೂಲಿ ಹೆಚ್ಚಿನ ಮಟ್ಟದಲ್ಲಿ ಪ್ರಗತಿ ಸಾಧಿಸಲು ತಾಲ್ಲೂಕು ಪಂಚಾಯತಿ ಮಟ್ಟದ ಅಧಿಕಾರಿ/ಸಿಬ್ಬಂದಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಮತ್ತು ಕರ ವಸೂಲಿಗಾರರು ಗ್ರಾಪಂಗಳಲ್ಲಿ ಸಭೆ ನಡೆಸಿ, ಶೇ.100 ರಷ್ಟು ಪ್ರಗತಿ ಸಾಧಿಸಲು ವಿಶೇಷ ಶ್ರಮವಹಿಸಿ ಸದರಿ ಅಭಿಯಾನವನ್ನು ಯಶಸ್ವಿಗೋಳಿಸಿದ್ದು ಎಲ್ಲರಿಗೂ ಹೃತ್ಪೂರ್ವಕ ಧನ್ಯವಾದಗಳನ್ನು ಹೇಳಿದ್ದಾರೆ.

– ಭರತ ಎಸ್
ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು, ಜಿಲ್ಲಾ ಪಂಚಾಯತ ಗದಗ

Share this Article