ಬೆಂಗಳೂರು: ರಾಜ್ಯದಲ್ಲಿ ಹನಿಟ್ರ್ಯಾಪ್ ಸುದ್ದಿಗಳು ಜೋರಾಗಿ ಸದ್ದು ಮಾಡುತ್ತಿರುವ ಹೊತ್ತಲ್ಲಿ ಪೊಲೀಸರು ಗ್ಯಾಂಗ್ ಒಂದನ್ನು ಅರೆಸ್ಟ್ ಮಾಡಿದ್ದು, ಖಾಸಗಿ ಪ್ರೀಸ್ಕೂಲ್ನ ಟೀಚರ್ ಸೇರಿ ಮೂವರನ್ನು ಬಂಧಿಸಿದ್ದಾರೆ.
ಪ್ರಕರಣದ ಹಿನ್ನೆಲೆ:
2023ರಲ್ಲಿ ಪ್ಲೇ ಹೋಮ್ಗೆ ಬರುತ್ತಿದ್ದ ಮಗುವಿನ ಪೋಷಕರಾದ ಉದ್ಯಮಿಯನ್ನು ಟೀಚರಮ್ಮ ಪರಿಚಯ ಮಾಡಿಕೊಂಡಿದ್ದಳು ಬಳಿಕ ಅವರಿಂದ ಶಾಲೆ ನಿರ್ವಹಣೆ ಸಲುವಾಗಿ 2 ಲಕ್ಷ ರೂ.ಯನ್ನು ಸಾಲ ಪಡೆದು 2024ರಲ್ಲಿ ವಾಪಸ್ ಕೊಡುವುದಾಗಿ ತಿಳಿಸಿದ್ದಳು ಶಾಲೆ ಉದ್ದಾರಕ್ಕಾಗಿ ಹಣ ನೀಡಿದನ್ನು ಮರಳಿ ಕೇಳಿದಾಗ ಶಾಲೆಗೆ ಪಾರ್ಟ್ನರ್ ಆಗು ಎಂದಿದ್ದಳು.ಬಳಿಕ ಇಬ್ಬರ ನಡುವೆ ಸಲುಗೆ ಬೆಳೆದು ಸುತ್ತಾಟ ತುಂಟಾಟ ಆರಂಭವಾಗಿತ್ತು.
ಟೀಚರಮ್ಮನ ಜೊತೆ ಮಾತನಾಡಲು ಉದ್ಯಮಿ ಹೊಸ ಸಿಮ್ ಹಾಗೂ ಪೋನ್ ಅನ್ನು ಖರೀದಿಸಿದ್ದರು.
ಜನವರಿ ಮೊದಲ ವಾರದಲ್ಲಿ ಉದ್ಯಮಿ ಆರೋಪಿತೆ ಬಳಿ ಹಣ ವಾಪಸ್ ಕೇಳಿದ್ದಕ್ಕೆ ನಿನಗೆ ಏನು ಬೇಕು ಕೇಳು ಕೊಡುತ್ತೇನೆ. ಹಣಕಾಸಿನ ವ್ಯವಹಾರ ಒಂದೇ ಸಲ ಮುಗಿಸಿಬಿಡೋಣ ಎಂದಿದ್ದಳು. ಬಳಿಕ ಒಂದು ದಿನ ಉದ್ಯಮಿ ಮನೆಗೆ ತೆರಳಿದ ಟೀಚರಮ್ಮ ಒಂದು ಮುತ್ತು ಕೊಟ್ಟು 50 ಸಾವಿರ ರೂ.ಯನ್ನು ಪಡೆದಿದ್ದಳು. ಜೊತೆಗೆ ನಿನ್ನ ಜೊತೆ ರಿಲೇಷನ್ ಶಿಪ್ನಲ್ಲಿ ಇರುತ್ತೇನೆ ಎಂದು ಆಫರ್ ನೀಡಿ 15 ಲಕ್ಷ ರೂ.ಗೆ ಡಿಮ್ಯಾಂಡ್ ಇಟ್ಟಿದ್ದಳು.
ಪದೇ ಪದೇ ಹಣಕ್ಕೆ ಡಿಮ್ಯಾಂಡ್ ಮಾಡುತ್ತಿದ್ದರಿಂದ ರೋಸಿ ಹೋಗಿದ್ದ ಉದ್ಯಮಿ ಸಿಮ್ ಮುರಿದು ಅಂತರ ಕಾಯ್ದುಕೊಂಡಿದ್ದರು.
ಮೂವರು ಕೂಡಿಕೊಂಡು ಬ್ಲಾಕ್ ಮೇಲ್ :
ಮಾ.12 ರಂದು ಉದ್ಯಮಿ ಪತ್ನಿಗೆ ಟೀಚರಮ್ಮ ಕರೆ ಮಾಡಿ ಮಕ್ಕಳ ಸ್ಕೂಲ್ ಟಿಸಿ ಕೊಡುತ್ತೇನೆ ನಿಮ್ಮ ಪತಿಯನ್ನ ಕಳಿಸಿ ಎಂದಿದ್ದಳು. ಅದರಂತೆ ಪ್ರೀಸ್ಕೂಲ್ಗೆ ಉದ್ಯಮಿ ತೆರಳಿದ್ದರು. ಪ್ರೀಸ್ಕೂಲ್ನಲ್ಲಿ ಆರೋಪಿತೆ ಜೊತೆ ಸಾಗರ್ ಮೋರೆ ಹಾಗೂ ಗಣೇಶ್ ಕಾಳೆ ಹಾಜರಿದ್ದರು. ಸಾಗರ್ನನ್ನು ಉದ್ಯಮಿಗೆ ತೋರಿಸಿ ಟೀಚರಮ್ಮ ಆವಾಜ್ ಹಾಕಿದ್ದರು. ಸಾಗರ್ ಜೊತೆ ಆರೋಪಿತೆಗೆ ಎಂಗೇಜ್ಮೆಂಟ್ ಆಗಿದೆ. ಆದರೆ ನೀನು ಆಕೆ ಜೊತೆ ಮಜಾ ಮಾಡ್ತಿದ್ದೀಯ? ಈ ವಿಚಾರವನ್ನ ತಂದೆ ಹಾಗೂ ನಿನ್ನ ಹೆಂಡತಿಗೆ ತಿಳಿಸುತ್ತೇನೆ ಎಂದು ಉದ್ಯಮಿಗೆ ಬ್ಲ್ಯಾಕ್ಮೇಲ್ ಮಾಡಿದ್ದರು.
ಯಾರದ್ದೋ ಪೋಟೋ ತೋರಿಸಿ ಪೊಲೀಸ್ ಠಾಣೆಗೆ ಹೋಗೋಣ ಎಂದು ಎಕ್ಸ್ಯುವಿ ಕಾರಿನಲ್ಲಿ ಉದ್ಯಮಿಯನ್ನು ಕರೆದೊಯ್ದಿದ್ದರು. ಮಹಾಲಕ್ಷ್ಮಿ ಲೇಔಟ್ನ ಉದ್ಯಮಿ ಮನೆ ಬಳಿಯೇ ಕರೆದೊಯ್ದು ಒಂದು ಕೋಟಿ ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ನಿನ್ನ ಹೆಂಡತಿಗೆ ವಿಚಾರ ತಿಳಿಸಿ ಅವಳನ್ನು ಕರೆದೊಯ್ಯುತ್ತೇವೆ ಎಂದು ಬೆದರಿಕೆ ಹಾಕಿದ್ದರು.
ಬಳಿಕ ಗೊರಗುಂಟೆಪಾಳ್ಯದ ಕಡೆ ಕಾರು ನಿಲ್ಲಿಸಿ ಹಣಕ್ಕೆ ಬೇಡಿಕೆ ಇಟ್ಟು ಫೈನಲ್ ಸೆಟಲ್ಮೆಂಟ್ ಆಗಿ ಇಪ್ಪತ್ತು ಲಕ್ಷ ಕೊಡು ಎಂದಿದ್ದರು.
ಕಡೆಗೆ 1.90 ಲಕ್ಷ ಹಣವನ್ನ ಪಡೆದು ಗ್ಯಾಂಗ್ ಬಿಟ್ಟು ಕಳಿಸಿತ್ತು. ಮಾ.17 ರಂದು ಮತ್ತೆ ಉದ್ಯಮಿಗೆ ಟೀಚರಮ್ಮ ಕರೆ ಮಾಡಿ ಮತ್ತೆ ಉದ್ಯಮಿಗೆ 15 ಲಕ್ಷ ಹಣ ಕೊಡುವಂತೆ ಡಿಮ್ಯಾಂಡ್ ಮಾಡಿದ್ದರು. ಹಣ ಕೊಟ್ಟರೆ ಅಶ್ಲೀಲ ವೀಡಿಯೋ ಚಾಟಿಂಗ್ ಡಿಲೀಟ್ ಮಾಡುತ್ತೇನೆ ಇಲ್ಲವಾದರೆ ನಿನ್ನ ಪತ್ನಿಗೆ ತೋರಿಸಿ ನಿನ್ನ ಸಂಸಾರವನ್ನೇ ಹಾಳು ಮಾಡುತ್ತೇವೆ ಎಂದು ಬ್ಲ್ಯಾಕ್ಮೇಲ್ ಮಾಡಿದ್ದಳು. ಕಡೆಗೆ ಬೆಂಗಳೂರು ಸಿಸಿಬಿಗೆ ಉದ್ಯಮಿ ದೂರು ನೀಡಿದ್ದರು. ಸದ್ಯ ದೂರಿನನ್ವಯ ಆರೋಪಿತೆ, ಸಾಗರ್ ಮೋರೆ, ಗಣೇಶ್ ಕಾಳೆ ಬಂಧನವಾಗಿದೆ. ಮೂವರನ್ನು ಬಂಧಿಸಿ ಹೆಚ್ಚಿನ ವಿಚಾರಣೆಗೆ ಸಿಸಿಬಿ ಕಸ್ಟಡಿಗೆ ಪಡೆದಿದ್ದಾರೆ. ವಿಚಾರಣೆ ವೇಳೆ ಗಣೇಶ್ ಕಾಳೆ ಬಿಜಾಪುರ ರೌಡಿಶೀಟರ್ ಅನ್ನೋದು ಗೊತ್ತಾಗಿದೆ. ಈತನ ಮೇಲೆ 9 ಪ್ರಕರಣಗಳಿರುವುದನ್ನು ಪೊಲೀಸರು ಪತ್ತೆಹಚ್ಚಿದ್ದಾರೆ.
ಸದ್ಯ ಟೀಚರಮ್ಮನ ಗ್ಯಾಂಗ್ ಬೇರೆ ಯಾರಿಗಾದರೂ ಹನಿಟ್ರ್ಯಾಪ್ ಮಾಡಿದ್ದಾರಾ ಎನ್ನುವುದನ್ನು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.


