ಅಕ್ರಮ ಅನ್ನ ಭಾಗ್ಯ ದಾಳಿ 10 ಕ್ವಿಂಟಲ ಅಕ್ಕಿ ವಶಕ್ಕೆ

graochandan1@gmail.com
1 Min Read

ಗದಗ: ಸರ್ಕಾರದಿಂದ ಬಡವರಿಗೆ ನೀಡುವ ಅನ್ನ ಭಾಗ್ಯ ಅಕ್ಕಿ ಸಂಗ್ರಹಿಸಿ ಮಾರಾಟ ಮಾಡುವ ಉದ್ದೇಶದಿಂದ ಬೆಟಗೇರಿ ಭಾಗದಲ್ಲಿ ಶೇಖರಣೆ ಮಾಡಿದ ಅನ್ನ ಭಾಗ್ಯದ ಅಕ್ಕಿಯ ಕುರಿತು ಖಚಿತ ಮಾಹಿತಿ ಮೇರಿಗೆ ಬೆಟಗೇರಿ ಪೋಲಿಸರು ದಾಳಿ ನಡೆಸಿದ್ದು 10 ಕ್ವಿಂಟಲ್ 60 ಕೆಜಿ ಅನ್ನ ಭಾಗ್ಯ ಅಕ್ಕಿ ದಾಳಿಯಲ್ಲಿ ಸಿಕ್ಕಿದೆ.

ಬೆಟಗೇರಿಯ ಮಂಜುನಾಥ ನಗರದ ನಿವಾಸಿಯಾದ ಮಂಜುನಾಥ್ ರಾಮಾಂಜನೇಯ ಕೆಂಚಿ,ಹಾಗೂ ಗೌರಿ ಗುಡಿ ಓಣಿ ನಿವಾಸಿಯಾದ ಶ್ರೀನಿವಾಸ್ ಗಣಪತಸಾ ಮೆಹರವಾಡೆ ಇವರು ಮನೆಯಲ್ಲಿ ಮಾರಾಟದ ಉದ್ದೇಶಕ್ಕೆ ಸಂಗ್ರಹಿಸಿಟ್ಟ ಅನ್ನ ಭಾಗ್ಯದ ಅಕ್ಕಿ ಇದಾಗಿದ್ದು ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ.

ದಾಳಿಯಲ್ಲಿ ಪಿಎಸ್ ಐ ಲಕ್ಷ್ಮಣ ಆರಿ, ಆಹಾರ ನಿರೀಕ್ಷಕ ಚಿನ್ನಪಗೌಡರ ಸೇರಿದಂತೆ ಪೋಲಿಸ ಸಿಬ್ಬಂದಿ ಹಾಜರಿದ್ದರು ಈ ಕುರಿತು ಬೆಟಗೇರಿ ಪೋಲಿಸ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share this Article