ಗದಗ: ಟಿಪ್ಪರ್ ಹರಿದು ಆರು ವರ್ಷದ ಬಾಲಕ ಸಾವನಪ್ಪಿದ ಘಟನೆ ಗದಗ ತಾಲೂಕಿನ ಹರ್ತಿ ಗ್ರಾಮದಲ್ಲಿ ನಡೆದಿದೆ ಹರ್ತಿ ಗ್ರಾಮದ ಬಸ್ ನಿಲ್ದಾಣದ ಮುಂದೆ ದುರ್ಘಟನೆ ನಡೆದಿದ್ದು ಘಟನೆಯಲ್ಲಿ ಪ್ರೀತಮ್ (6) ಎಂಬ ಬಾಲಕ ಸ್ಥಳದಲ್ಲೇ ಸಾವನಪ್ಪಿದ್ದು ಹರ್ತಿ ಗ್ರಾಮದ ಬಸ್ ನಿಲ್ದಾಣದ ಬಳಿ ವೇಗವಾಗಿ ಬಂದ ಟಿಪ್ಪರ್ ಡಿಕ್ಕಿ ಹೊಡೆದ ಪರಿಣಾಮವಾಗಿ ಬಾಲಕ ಸಾವನ್ನಪ್ಪಿದ್ದಾನೆ ಜಿಲ್ಲೆಯ ಯತ್ನಳ್ಳಿ ಗ್ರಾಮಕ್ಕೆ ಆಗಮಿಸಿದ್ದ ತಾಯಿ ಗೀತಾ ಹಾಗೂ ಬಾಲಕ ಪ್ರೀತಮ್ ಧಾರವಾಡ ಜಿಲ್ಲೆ ಕಲಘಟಗಿ ತಾಲೂಕಿನ ಹಿಂಡಸಗೇರಿ ಗ್ರಾಮದ ಬಾಲಕನಾಗಿದ್ದು ಈ ರಸ್ತೆಯಲ್ಲಿ ಟಿಪ್ಪರಗಳ ಹಾವಳಿ ಮಿತಿ ಮೀರಿದ್ದು ಒವರ್ ಲೋಡ,ಅತಿಯಾದ ವೇಗವೆ ಈ ದುರ್ಗಘಟನೆಗೆ ಕಾರಣವಾಗಿದ್ದು ಟಿಪ್ಪರ ಚಾಲಕ ಪರಾರಿಯಾಗಿದ್ದಾನೆ.
ಘಟನೆ ಕುರಿತು ಆಕ್ರೋಶ ವ್ಯಕ್ತಪಡಿಸಿದ ಹರ್ತಿ ಗ್ರಾಮಸ್ಥರು
ಗದಗ-ಲಕ್ಷ್ಮೇಶ್ವರ ಹೆದ್ದಾರಿ ಬಂದ್ ಮಾಡಿ ಟೈಯರಿಗೆ ಬೆಂಕಿ ಹಚ್ಚಿ
ಆರ್ ಟಿ ಓ ಅಧಿಕಾರಿಗಳ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಗದಗ ಗ್ರಾಮೀಣ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.
