
ರೋಣ: ಪಟ್ಟಣ ಹೋರ ವಲಯದಲ್ಲಿ ಬೈಕ ನಿಯಂತ್ರಣ ತಪ್ಪಿ ಮರಕ್ಕೆ ಡಿಕ್ಕಿ ಹೊಡೆದ ಪರಿಣಾಮವಾಗಿ ಶುಕ್ರವಾರಮಧ್ಯಾಹ್ನ ಇಬ್ಬರೂ ಬಾಲಕರು ಸ್ಥಳದಲ್ಲಿ ಮೃತಪಟ್ಟಿದ್ದು ಓರ್ವ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದಾನೆ.

ತಾಲೂಕಿನ ಅಬ್ಬಿಗೇರಿ ಗ್ರಾಮದ ಇರುವ ಕಲಾಕಾಶಿ ಸ್ವಿಮ್ಮಿಂಗ್ ಪೂಲನಲ್ಲಿ ಈಜಲು ತೆರಳಿ ಅಬ್ಬಿಗೇರಿ ಗ್ರಾಮದಿಂದ ರೋಣ ಪಟ್ಟಣಕ್ಕೆ ಬರುವ ಮಾರ್ಗದ ಕೆ ಎಸ್ ಆರ್ ಟಿ ಸಿ ಡೀಪೋ ಸಮೀಪ ಈ ಅಪಘಾತ ಸಂಭವಿಸಿದ್ದು ಬೈಕ ಸವಾರರಾದ ಅನುಪ್ಪ ಮುತ್ತಣ್ಣ ಇಟಗಿ(15), ಶ್ರೀಶಾಂತ್ ವಿಶ್ವನಾಥ್ ಗಡಗಿ(15) ಸ್ಥಳದಲ್ಲಿ ಮೃತಪಟ್ಟ ಬಾಲಕರಾಗಿದ್ದಿ ಮನೋಜ್ ನಾಗಪ್ಪ ಕಂಬಾರ್(15) ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಳ್ಳುತ್ತಿದ್ದಾನೆ.
ಬೈಕ್ ಸವಾರರ ನಿಯಂತ್ರಣ ತಪ್ಪಿದ್ದರಿಂದ ಈ ಘಟನೆಗೆ ಕಾರಣ ಎಂದು ಹೇಳಲಾಗಿದೆ ಈ ಕುರಿತು ರೋಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
