ಗದಗ::ಕ್ಷುಲ್ಲಕ ಕಾರಣಕ್ಕೆ ಟಾವರ್ ಏರಿರುವ ಘಟನೆ ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಕೋರ್ಲಹಳ್ಳಿ ಗ್ರಾಮದಲ್ಲಿ ನಡೆದಿದೆ. ಗ್ರಾಮದ ನಜೀರ್ ಸಾಬ್ ಎಂಬ ವ್ಯಕ್ತಿ ಮನೆಯಲ್ಲಿ ನಡೆದ ಗಂಡ ಹೆಂಡತಿ ಜಗಳ ದಿಂದಾಗಿ ಪತಿ ನಜೀರ್ ಸಾಬ್ ಕೊರ್ಲಹಳ್ಳಿಯಲ್ಲಿರುವ ಟಾವರ್ ಏರಿದ್ದಾನೆ. ಯಾಕೆಂದರೆ ಕುಡಿದ ಮತ್ತಿನಲ್ಲಿ ಮನೆಗೆ ಹೋದ ಸಮಯದಲ್ಲಿ ಮನೆಯಲ್ಲಿ ಜಗಳವಾಗಿದೆ. ತಕ್ಷಣ ಬೇಸತ ಪತ್ನಿ ತವರು ಮನೆಗೆ ಹೋಗಿದ್ದಾಳೆ. ಇಂದ್ರಿಂದ ಮನನೊಂದ ನಜೀರ ಸಾಬ್ ಟಾವರ್ ಎರಿದ್ದಾನೆಂದ ಮಾಹಿತಿ ಪೊಲೀಸ್ ಇಲಾಖೆಯ ಮೂಲಗಳಿಂದ ತಿಳಿದು ಬಂದಿದೆ. ತಕ್ಷಣ ಸ್ಥಳಕ್ಜೆ ಆಗಮಿಸಿದ ಮುಂಡರಗಿ ಪೊಲೀಸರು ನಜೀರ್ ಸಾಬ್ ಮನವೊಲಿಸಿ ಕೆಳಗೆ ಇಳಿಸಿದ್ದಾರೆ.. ಅದೇನೆ ಇರಲಿ ಮನೆಯ ಜಗಳ ಬೀದಿಗೆ ತಂದು ಟಾವರ್ ಏರಿ ಜೀವದ ಜೊತೆಗೆ ಜಲ್ಲಾಟವಾಡಿದ್ದು ಮಾತ್ರ ವಿಪರ್ಯಾಸ.
