ಗದಗ: ನಗರದ ತೋಂಟದಾರ್ಯ ಮಠದ ಜಾತ್ರೆಯಲ್ಲಿ ಮೇ 3 ರ ರಾತ್ರಿ ಜಾತ್ರೆಯಲ್ಲಿ ಹಾಕಿದ ಡ್ಯಾನ್ಸಿಂಗ್ ಫ್ಲೈ ಜೋಕಾಲಿ ಆಡುತ್ತಿದ್ದ ವೇಳೆ ಏಕಾಏಕಿ ವೀಲ್ ಕಟ್ಟಾಗಿ ಸುಮಾರು 10 ಕ್ಕೂ ಹೆಚ್ಚು ತೊಟ್ಟಿಲುಗಳು ಕಳಚಿ ಬಿದ್ದ ಪರಿಣಾಮ ಡ್ಯಾನ್ಸಿಂಗ್ ಫ್ಲೈ ಆಡುತ್ತಿದ್ದ ಮಹಿಳೆಯರು ಮಕ್ಕಳು ಸೇರಿದಂತೆ ಸುಮಾರು 18 ಜನರಿಗೆ ಗಾಯಗಳಗಿದ್ದವು ಗಾಯ ಗೊಂಡವರು ನಗರದ ಜಿಮ್ಸ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.
ಇಂದು ಗದಗ ಜಿಲ್ಲಾಸ್ಪತ್ರೆ ಇಂದು ಗಾಯಾಳುಗಳ ಆರೋಗ್ಯ ವಿಚಾರಿಸಿದ ಸಚಿವ ಎಚ್ ಕೆ ಪಾಟೀಲ್
ಗಾಯಗೊಂಡಿದ್ದ ಜನರಿಗೆ ಭೇಟಿಯಾಗಿ ಧೈರ್ಯ ಹೇಳಿದರು.
ಗಾಯಾಳುಗಳ ಸ್ಥಿತಿಗತಿ ಬಗ್ಗೆ ಸಚಿವ ಎಚ್ ಕೆ ಪಾಟೀಲ ಮಾಹಿತಿ ಪಡೆದರು
16 ಜನರು ಬಹುತೇಕ ಗುಣಮುಖರಾಗಿದ್ದಾರೆ, ಇಬ್ಬರಿಗೆ ಹೆಚ್ಚಿನ ಆರೈಕೆ ಬೇಕಿದೆ
ಆಸ್ಪತ್ರೆಯಲ್ಲಿರುವ 13 ಜನರು ಆದಷ್ಟು ಬೇಗ ಡಿಷ್ಚಾರ್ಜ್ ಆಗಿಲಿದ್ದಾರೆ ಎಂದು ತಜ್ಞ ವೈದ್ಯರು ಸಚಿವರುಗೆ ತಿಳಿಸಿದರು.

ಈ ಸಂದರ್ಭದಲ್ಲಿ ಮಾತನಾಡಿದ ಸಚಿವ ಎಚ್ ಕೆ ಪಾಟೀಲ ಜಾತ್ರೆಯಲ್ಲಿ ನಡೆದ ಅವಘಡ ಬಗ್ಗೆ ಮುಖ್ಯಮಂತ್ರಿಗಳ ಗಮನಕ್ಕೆ ತಂದಿದ್ದು ಗಾಯಾಳುಗಳಿಗೆ ಮುಖ್ಯಮಂತ್ರಿ ಪರಿಹಾರ ನಿಧಿಯಲ್ಲಿ ಗಾಯಗೊಂಡ ಪ್ರತಿಯೊಬ್ಬರಿಗೂ ತಲಾ 50 ಸಾವಿರ ರೂಪಾಯಿ ಪರಿಹಾರ ಘೋಷಣೆ ಮಾಡಿದ್ದಾರೆ ಎಂದು ಹೇಳಿದರು.

