ಗದಗ : ರಾಜ್ಯದ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಅತೀ ಹೆಚ್ಚು ಬಜೆಟ್ಗಳನ್ನು ಮಂಡಿಸಿದ ಹೆಗ್ಗಳಿಕೆಗೆ ಪಾತ್ರರಾಗಿರಬಹುದು ಆದರೆ ಈ ವರ್ಷದ ಬಜೆಟ್ಟಿನಲ್ಲಿ ಯಾವುದೇ ರೀತಿಯ ಹೊಸತನ ಇಲ್ಲದೇ ನಿರಾಶಾದಾಯಕವಾಗಿದೆ.
ಮುಖ್ಯಮಂತ್ರಿಗಳು ಕೇವಲ ಮತ ಬ್ಯಾಂಕಿಗಾಗಿ ಕೆಲವು ವರ್ಗಗಳ ಓಲೈಕೆಗಾಗಿ ಸಿಮೀತವಾದ್ದಂತೆ ಇದೆ. ರಾಜ್ಯದಲ್ಲಿ ಯಾವುದೇ ಮೂಲಭೂತ ಅಭಿವೃದ್ಧಿ ಹಣ ನೀಡದೇ ಪ್ರಚಾರ ಸಮಾವೇಶ ಜಾಹೀರಾತುಗಳಿಗೆ ಹೆಚ್ಚು ಹೆಚ್ಚು ಹಣ ನೀಡಿ ಜನರಿಗೆ ದಾರಿ ತಪ್ಪಿಸುವ ಪ್ರಯತ್ನ ರಾಜ್ಯ ಕಾಂಗ್ರೆಸ್ ಸರ್ಕಾರದ್ದಾಗಿದೆ.
ಬಜೆಟ್ ಎಂದರೆ ಆ ವರ್ಷದಲ್ಲಿ ಎಲ್ಲ ವರ್ಗ ಎಲ್ಲ ಕ್ಷೇತ್ರ ಎಲ್ಲ ಸಮುದಾಯ ಪ್ರತಿ ಒಂದರಲ್ಲಿ ಸರ್ವಾಂಗೀಣ ಅಭಿವೃದ್ಧಿ ಮಂತ್ರವನ್ನು ಹೊಂದಿರಬೇಕು. ಆದರೆ ಈ ಬಜೆಟ್ ನಲ್ಲಿ ಗದಗ ಜಿಲ್ಲೆಗೆ ಯಾವುದೇ ವಿಶೇಷ ಅನುದಾನ ಘೋಷಣೆ ಆಗಿಲ್ಲ ಗದಗ ಬೆಟಗೇರಿ ಅವಳಿ ನಗರದ ಜ್ವಲಂತ ಸಮಸ್ಯೆಯಾದ ಕುಡಿಯುವ ನೀರಿನ ಪೈಪ್ ಲೈನ್ ಹಾಗೂ ಇತರೆ ತಾಂತ್ರಿಕ ಕಾಮಗಾರಿಗಳಿಗಾಗಿ ಯಾವುದೇ ವಿಶೇಷ ಅನುದಾನ ನೀಡದೇ ನಿರಾಸೆ ಮೂಡಿಸಿದೆ. ಗದಗ ರಿಂಗ್ ರೋಡಗೆ ಭೂ ಸ್ವಾಧೀನದ ಬಗ್ಗೆ ಯಾವುದೇ ಕಾಳಜಿ ನೀಡಿಲ್ಲ. ಜಿಲ್ಲೆಗೆ ಯಾವುದೇ ಕೈಗಾರಿಕಾ ಘಟಕಗಳ ಸ್ಥಾಪನೆ ಬಗ್ಗೆ ಪ್ರಸ್ತಾಪವೂ ಇಲ್ಲ ಅದಕ್ಕೆ ಅನುದಾನವೂ ಇಲ್ಲ ಇದರಿಂದಾಗಿ ಉದ್ಯೋಗಾವಕಾಶಗಳಿಗೆ ತಣ್ಣೀರು ಹಾಕಿದ್ದಂತಾಗದೆ.
ರಾಜ್ಯದಲ್ಲಿ ಗ್ಯಾರಂಟಿ ಯೋಜನೆಗಳಿಗೆ ಆರ್ಥಿಕ ವ್ಯವಸ್ಥೆ ಸಂಪೂರ್ಣ ದಿವಾಳಿ ಆಗಿದೆ ಎಂಬುವದಕ್ಕೆ ಈ ಸಾಲಿನ ಬಜೆಟ್ ನಿದರ್ಶನವಾಗಿದೆ ಎಂದು ನಗರ ಸಭಾ ಸದಸ್ಯ ರಾಘವೇಂದ್ರ ಯಳವತ್ತಿ ಟೀಕಿಸಿದರು.

