ಗದಗ: ಪೊಲೀಸ್ ಠಾಣೆಯಲ್ಲೇ 10 ಸಾವಿರ ರೂ. ಲಂಚ ಪಡೆಯುತ್ತಿದ್ದ ಸಂಧರ್ಭದಲ್ಲಿ ಶಹರ ಪೊಲೀಸ್ ಠಾಣೆಯ ಎಎಸ್‌ಐ ಸಿ. ವಿ. ಇಂಗಳಹಳ್ಳಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ಬುಧವಾರ ಬಂಧಿಸಿದ್ದಾರೆ.
ಖಾಸಗಿ ದೂರಿನಲ್ಲಿನ ಅರ್ಜಿಯೊಂದಕ್ಕೆ ಸಂಭಂದಿಸಿದಂತೆ ಹೆಸರು ವಜಾ ಮಾಡಲು ಎಎಸ್ಐ ಸಿ ವ್ಹಿ ಇಂಗಳಹಳ್ಳಿ 13 ಸಾವಿರ ರೂ. ಗೆ ಬೇಡಿಕೆ ಇಟ್ಟಿದ್ದರು ಕೊನೆಗೆ 13 ಸಾವಿರ ಕೊಡಲು ಆಗುವುದಿಲ್ಲ ಎಂದಾಗ 10,000 ರೂಪಾಯಿ ಕೊಡಲು ಹೇಳಿದ್ದರು ಎಂದು ದೂರುದಾರರ ಗದಗ ಲೋಕಾಯುಕ್ತರಗೆ ನೀಡಿದ ದೂರು ಆಧರಿಸಿ ಬುಧವಾರ ಲಂಚ ಪಡೆಯುತ್ತಿದ್ದ ವೇಳೆ ದಾಳಿ ನಡೆಸಿದ ಲೋಕಾ ಅಧಿಕಾರಿಗಳು ಎಎಸ್ಐ ಇಂಗಳಹಳ್ಳಿ ಅವರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದ್ದಾರೆ.
ನಗರದ ಹುಡೋ ಕಾಲನಿಯ ನಿವಾಸಿ ವಿರೇಶ ಪೂಜಾರ ಬುಧವಾರ ದೂರು ಸಲ್ಲಿಸಿದ್ದರು. ವಿರೇಶ ಅವರ ತಾಯಿಯ ಹೆಸರಿನಲ್ಲಿ ಅರ್ಜಿಯೊಂದ ಪೊಲೀಸ್ ಠಾಣೆಗೆ ಸಲ್ಲಿಸಲಾಗಿತ್ತು. ಈ ಅಜಿರ್ಯನ್ನು ವಜಾ ಮಾಡಬೇಕು ಎಂದು ವಿರೇಶ ಮನವಿ ಮಾಡಿದ್ದರು. ವಜಾ ಮಾಡಲು ಎಎಸ್‌ಐ ಇಂಗಳಹಳ್ಳಿ ಅವರು 13 ಸಾವಿರ ರೂ. ಬೇಡಿಕೆ ಇಟ್ಟಿದ್ದರು. ಕೊನೆಗೆ 10 ಸಾವಿರ ರೂ. ಲಂಚದ ವ್ಯವಹಾರ ಕುದರಿತ್ತು. ಈ ಬಗ್ಗೆ ವಿರೇಶ ಗದಗ ಲೋಕಾಯುಕ್ತ ಕಚೇರಿಗೆ ದೂರು ಸಲ್ಲಿಸಿದ್ದರು 10 ಸಾವಿರ ರೂ. ಲಂಚ ನೀಡುವ ವೇಳೆ ಎಎಸ್‌ಐ ಇಂಗಳಹಳ್ಳಿ ಲೋಕಾಯುಕ್ತರ ಬಲೆಗೆ ಬಿದ್ದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಲೋಕಾಯುಕ್ತ ಅಧಿಕಾರಿಗಳಾದ ವಿಜಯ ಬಿರಾದಾರ, ಪರಮೇಶ ಕವಟಗಿ, ಎಸ್.ಎಸ್. ತೇಲಿ, ಯು ಎನ್ ಸಂಗನಾಳ,ಎಂ. ಎಂ. ಅಯ್ಯನಗೌಡ್ರ,ಎಂ ಆರ್ ಹಿರೇಮಠ ಸೇರಿದಂತೆ ಇತರರು ಹಾಜರಿದ್ದರು.

