ಲಕ್ಷ್ಮೇಶ್ವರ : ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರ ಎಲ್ಲೆಲ್ಲೂ ಇದೆ ಎಲ್ಲಂದರಲ್ಲೂ ಲಂಚ ಲಂಚ ಅಂತ ಬೊಬ್ಬೆ ಹೊಡೆಯುತ್ತಿದ್ದ ಬಿಜೆಪಿ ಶಾಸಕರ ಪೈಕಿ ಇಂದು ಬಿಜೆಪಿಯ ಶಾಸಕ ಸ್ವತಃ ತಾನೇ ಲಂಚ ತೆಗೆದುಕೊಳ್ಳುತ್ತಿರುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ರಸ್ತೆ ಕಾಮಗಾರಿಗೆ ಸಂಭದಪಟ್ಟಂತೆ 11 ಲಕ್ಷಕ್ಕೆ ಡಿಲ್ ಮುಗಿಸಿ ಇಂದು ಮುಂಗಡ ಹಣ 5 ಲಕ್ಷ ಪಡೆಯುವಾಗ ಶಿರಹಟ್ಟಿ ಮತಕ್ಷೇತ್ರದ ಹಾಲಿ ಶಾಸಕ ಡಾ|| ಚಂದ್ರು ಲಮಾಣಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.
ಲಕ್ಷ್ಮೇಶ್ವರ ಪಟ್ಟಣದ ಶಾಸಕ ಚಂದ್ರು ಲಮಾಣಿ ಒಡೆತನದ ಬಾಲಾಜಿ ಆಸ್ಪತ್ರೆಯಲ್ಲಿ ಲಂಚ ಪಡೆಯುವಾಗ ಮೇಲೆ ಲೋಕಾಯುಕ್ತ ಅಧಿಕಾರಿಗಳು ದಾಳಿ ನಡೆಸಿದ್ದಾರೆ.

ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಗುತ್ತಿಗೆದಾರ ವಿಜಯ ಪೂಜಾರ ಎನ್ನುವವರಿಂದ 5 ಲಕ್ಷ ಹಣ ಪಡೆಯುವಾಗ ದಾಳಿ ನಡೆಸಿದ್ದಾರೆ ರಸ್ತೆ ಕಾಮಗಾರಿ ಸಂಬಂಧಿಸಿದಂತೆ, 11 ಲಕ್ಷ ರೂಪಾಯಿ ಡಿಲ್ ಆಗಿದ್ದು
ಇಂದು 5 ಲಕ್ಷ ರೂಪಾಯಿ ಹಣ ಪಡೆಯುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ ಶಾಸಕ ಚಂದ್ರು ಲಮಾಣಿ.
ಇವರೊಂದಿಗೆ ಶಾಸಕರ ಸರ್ಕಾರಿ ಪಿಎ ಮಂಜುನಾಥ ವಾಲ್ಮೀಕಿ, ಮತ್ತು ಖಾಸಗಿ ಪಿಎ ಗುರು ಲಮಾಣಿ ಇವರುಗಳು ವಿಚಾರಣೆಯನ್ನು ಲೋಕಾಯುಕ್ತ ಅಧಿಕಾರಿಗಳು ನಡೆಸಿದ್ದಾರೆ.
ಧಾರವಾಡ ಲೋಕಾಯುಕ್ತ ಎಸ್ಪಿ ಸಿದ್ದಲಿಂಗಪ್ಪ ಅವರ ನೇತೃತ್ವದಲ್ಲಿ ದಾಳಿ ನಡೆದಿದೆ.

