ಗದಗ : ನಗರದ ಶಾಂತದುರ್ಗಾ ಜ್ಯುವೆಲೆರಿ ಶಾಪ್ ನಲ್ಲಿ ಬುಧವಾರ ಬೆಳಗಿನ ಜಾವ ಸುಮಾರು 80.21ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳ್ಳತನ ಮಾಡಿ ಮಹಾರಾಷ್ಟ್ರಕ್ಕೆ ಪರಾರಿಯಾಗಿದ್ದ ಖತರ್ನಾಕ ಕಳ್ಳನನ್ನು ಸಿನೀಮಿಯ ರೀತಿಯಲ್ಲಿ 24 ಗಂಟೆ ಒಳಗಾಗಿ ಪೊಲೀಸರು ಬಂಧಿಸಿದ್ದಾರೆ ಪೋಲಿಸರ್ ಈ ಬೃಹತ್ ಕಾರ್ಯಾಚರಣೆಗೆ ನಾಗರಿಕರು ಪ್ರಶಂಸೆ ವ್ಯಕ್ತಪಡಿಸಿದ್ದಾರೆ.
ಗುಜುರಾತಿನ ಅಹ್ಮದಾಬಾದ್ನ ನಿವಾಸಿ ಆಗಿರುವ ಮಹ್ಮದ ಸಿದ್ದಿಕಿ(43) ಬಂದಿತ ಆರೋಪಿ ಆಗಿದ್ದು ಮಹರಾಷ್ಟ್ರ ರಾಜ್ಯದ ಸೊಲ್ಲಾಪುರ ಎಸ್ ಪಿ ಸಹಾಯದಿಂದ ಸೊಲ್ಲಾಪುರ ಜಿಲ್ಲೆಯ ಕಿನ್ನಿ ಟೋಲ್ ಗೇಟ್ ನಲ್ಲಿ ಆರೋಪಿಯನ್ನು ಬಂಧಿಸಿ ರಾಜ್ಯಕ್ಕೆ ಕರೆತಂದಿದ್ದಾರೆ.
ಈ ಕಾರ್ಯಾಚರಣೆಯಲ್ಲಿ ಸಾರಿಗೆ ಇಲಾಖೆ ಮತ್ತು ಸೊಲ್ಲಾಪುರ, ಸಾಂಗ್ಲಿ ಜಿಲ್ಲೆಗಳ ಪೊಲಿಸ್ ವರಿಷ್ಠಾಧಿಕಾರಿಗಳು ಸಹಕಾರ ನೀಡಿದ್ದಾರೆ ಎಂದು ಗದಗ ಜಿಲ್ಲಾ ಪೊಲಿಸ್ ವರಿಷ್ಠಾಧಿಕಾರಿ ರೋಹನ್ ಜಗದೀಶ ಈ ಕುರಿತು ಸುದ್ದಿಗೋಷ್ಠಿ ನಡೆಸಿ ಮಾಹಿತಿ ನೀಡಿದ್ದಾರೆ.
ಘಟನೆ ಹಿನ್ನೆಲೆ:
ನಗರದ ಸ್ಟೇಷನ್ ರಸ್ತೆಯಲ್ಲಿ ಇರುವ ಶಾಂತಾದುರ್ಗಾ ಜ್ಯುವೆಲಿರಿ ಶಾಪ್ ನಲ್ಲಿ ಬುಧವಾರ ಬೆಳಗ್ಗೆ 10 ಗಂಟೆಗೆ ಚಿನ್ನಾಭರಣಗಳು ಕಳ್ಳತನವಾಗಿದ್ದು ಅಂಗಡಿ ಮಾಲೀಕರು ಬೆಳಗ್ಗೆ ಬಂದಾಗ ಕಳ್ಳತನವಾಗಿರುವುದು ಗಮನಕ್ಕೆ ಬಂದಿತ್ತು ಈ ಕುರಿತು ಮಾಲಿಕ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದರು ಸ್ಥಳಕ್ಕೆ ಆಗಮಿಸಿದ್ದ ಡಿಎಸ್ ಪಿ ಮುರ್ತುಜಾ ಖಾದ್ರಿ ಹಾಗೂ ಸಿಪಿಐ ಎಲ್.ಕೆ. ಜೂಲಕಟ್ಟಿ ಅವರು ತನಿಖೆ ಕೈಗೊಂಡು ಜ್ಯುವೆಲರಿ ಶಾಪ್ ಹಿಂಬದಿ ಇರುವ ಲಾಡ್ಜ್ ಮೂಲಕ ಶಾಪ್ ಗೆ ಬಂದ ಆರೋಪಿ ಅತ್ಯಾಧುನಿಕ ಉಪಕರಣ ಬಳಸಿ ಕಬ್ಬಿಣದ ಕಿಟಕಿಗಳನ್ನು ಒಡೆದು ಒಳಗೆ ಬಂದು ಕಳ್ಳತನ ಮಾಡಿರುವುವು ಬೆಳಕಿಗೆ ಬಂದಿದೆ ಪ್ರಕರಣ ಗಂಭೀರತೆ ಅರಿತ ಎಸ್ಪಿ ರೋಹನ್ ಜಗದೀಶ ನೇತೃತ್ವದಲ್ಲಿ ಜಿಲ್ಲಾ ಪೊಲೀಸ್ ತಂಡ ರಚನೆಮಾಡಿ ಆರೋಪಿ ಸುಳಿವಿಗಾಗಿ ಹುಡಕಾಟ ನಡೆಸಿ ಆರೋಪಿ ಬಂಧಿಸುವಲ್ಲಿ ಯಶಸ್ವಿ ಆಗಿದ್ದಾರೆ.
ಕಳೆದ ಕೆಲವು ದಿನಗಳ ಹಿಂದೆಯೇ ಜ್ಯುವೇಲರಿ ಶಾಪ್ ಹಿಂದುಗಡೆ ಖಾಸಗಿ ಲಾಡ್ಡನಲ್ಲಿ ಆರೋಪಿ ಕಳೆದ ಹಲವು ದಿನಗಳಿಂದ ತಂಗಿದ್ದನ್ನು ಎಂಬುದನ್ನು ಸಿಸಿ ಕೆಮಾರಾ ಆಧರಿಸಿ ಪೊಲೀಸರಿಗೆ ಖಚಿತ ಮಾಹಿತಿ ಲಭ್ಯವಾಗಿದೆ ಮಾಹಿತಿ ದೊರತೆ ಕೂಡಲೇ ಕಾರ್ಯಪ್ರವೃತ್ತರಾದ ಪೋಲಿಸರು ನಗರದಲ್ಲಿರುವ ಸಿ.ಸಿ. ಕ್ಯಾಮೆರಾ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿ ಬೆನ್ನಿಗೆ ಬಿದ್ದು ಕಳ್ಳತನದ ಚಿನ್ನಾಭಾರಣಗಳೊಂದಿಗೆ ಆರೋಪಿಯು ನಗರದ ಹೊಸ ಬಸ್ ನಿಲ್ದಾಣದಿಂದ ಪುಣೆ ಬಸ್ ಮೂಲಕ ಮಹಾರಾಷ್ಟ್ರ ಕಡೆಗೆ ತೆರಳುತ್ತಿರುವುದು ಪೊಲೀಸರಿಗೆ ತಿಳಿದು ಬಂದಿದೆ ಕೂಲೇ ಜಿಲ್ಲಾ ಪೊಲೀಸ್ ಇಲಾಖೆಯು ಮಹಾರಾಷ್ಟ್ರ ರಾಜ್ಯದ ಸೊಲ್ಲಾಪುರ ಮತ್ತು ಸಾಂಗ್ಲಿ ಜಿಲ್ಲೆಯ ಪೋಲಿಸ್ ವರಿಷ್ಠಾಧಿಕಾರಿಗಳಿಗೆ ಮಾಹಿತಿ ತಿಳಿಸಿದ್ದಾರೆ. ಸೊಲ್ಲಾಪುರ ಜಿಲ್ಲೆಯ ವಡಗಾಂ ಪೊಲೀಸ್ ಠಾಣೆ ವ್ಯಾಪ್ತಿಯ ಕಿನ್ನಿ ಟೋಲ್ ಬಳಿ ಬಸ್ನಲ್ಲಿ ಸಂಚರಿಸುತ್ತಿದ್ದ ಆರೋಪಿಯನ್ನು ವಡಗಾಂ ಪೊಲೀಸರು ಬಂಧಿಸಿ ಪಂಚನಾಮೆಗೆ ಒಳಪಡಿಸಿದ್ದಾರೆ. ಆರೋಪಿತನಿಂದ ಕದ್ದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ. ಅಷ್ಟರೊಳಗಾಗಿ ಗದಗ ಜಿಲ್ಲಾ ಪೊಲೀಸ್ ಸಿಬ್ಬಂದಿಯು ಅಲ್ಲಿಗೆ ತೆರಳಿ ಚಿನ್ನಾಭರಣದೊಂದಿಗೆ ಆರೋಪಿಯನ್ನು ವಶಕ್ಕೆ ಪಡೆದು ನಗರಕ್ಕೆ ಕರೆತಂದಿದ್ದಾರೆ.

ಕಳ್ಳನ ಕೈಚಳಕ:
ಆರೋಪಿಯ ಪ್ರಾಥಮಿಕ ವಿಚಾರಣೆ ನಡೆಸಿದ ವೇಳೆ ಕಳ್ಳತನ ಕುರಿತು ಪೊಲೀಸ್ ಇಲಾಖೆಗೆ ಆರೋಪಿ ವಿವರಿಸಿದ್ದಾರೆ. ಲಾಡ್ಡ ಮೂಲಕ ಜ್ಯುವೆಲರಿ ಶಾಪ್ನ ಎರಡನೇ ಮಹಡಿಗೆ ಬಂದಿದ್ದ ಆರೋಪಿಯು ಗ್ಯಾಸ್ ಕಟರ್ ಯಂತ್ರ, ಹೈಡೋಲಿಕ್ ಕಟರ್ ಯಂತ್ರ, ಕಬ್ಬಿಣ ಸುತ್ತಿಗೆ ಮೂಲಕ ಕಿಟಕಿಯನ್ನು ಕೊರೆದು ಒಳ ನುಗ್ಗಿದ್ದಾನೆ. ಮೊದಲು ಸಿಸಿ ಕೆಮಾರಾ ಡ್ಯಾಮೇಜ್ ಮಾಡಿದ್ದಾನೆ. ಚಿನ್ನದ ಆಭರಣ ಇರುವ ಟ್ರೆಜರಿ ಒಡೆಯಲು ಯತ್ನಿಸಿದ್ದಾನೆ. ಟ್ರೆಜರಿ ಒಡೆಯುವ ಯತ್ನ ವಿಲವಾದಾಗ ಗ್ರಾಹಕರಿಗಾಗಿ ಅಂಗಡಿಗಳಲ್ಲಿ ಪ್ರದರ್ಶನಕ್ಕೆ ಇಟ್ಟ ಆಭರಣಗಳನ್ನು ಕಳ್ಳತನ ಮಾಡಿ ಮತ್ತೆ ಲಾಡ್ಜಗೆ ಮರಳಿ
ಅದೇ ದಿನ ಪುಣೆ ಬಸ್ ಮೂಲಕ ತೆರಳಿದ್ದಾನೆ ಎಂದು ಎಸ್ಪಿ ಮಾಹಿತಿ ನೀಡಿದರು.
ವಶಪಡಿಸಿಕೊಂಡ ಆಭರಣಗಳು:
10,16,200 ರೂ ಮೌಲ್ಯದ 76.80 ಗ್ರಾ ಬಂಗಾರದ ಆಭರಣಗಳು, 61,09,828 ರೂ. ಮೌಲ್ಯದಬೆಳ್ಳಿಯ ಆಭರಣಗಳು, 8,95,000 ರೂ. ಮೌಲ್ಯದ ಜೆಮ್ ಸ್ಟೋನ್ಗಳು ಹಾಗೂ 26000 ರೂ. ನಗದು ಸೇರಿ ಒಟ್ಟು 80,21,0258 ಮೌಲ್ಯದ ಆಭರಣಗಳನ್ನು ವಶಪಡಿಸಿಕೊಳ್ಳಲಾಗಿದೆ.
ಸುದ್ದಿಗೋಷ್ಠಿಯಲ್ಲಿ ಪೊಲೀಸ್ ಅಧಿಕಾರಿಗಳಾದ ಮಹಾಂತೇಶ ಸಜ್ಜನ, ಎಲ್.ಕೆ. ಜೂಲಕಟ್ಟಿ, ಮುರ್ತುಜಾ ಖಾದ್ರಿ, ಧೀರಜ್ ಸಿಂಧೆ, ಸಿದ್ರಾಮೇಶ್ವರ ಗಡದ, ಆರ್.ಆರ್. ಮುಂಡೆವಾಡಗಿ, ಜಿ.ಟಿ. ಜಕ್ಕಲಿ, ಮಾರುತಿ ಜೋಗದಂಡಕರ, ಎಂ. ಬಿ. ವಡ್ಡಟ್ಟಿ, ಸಂತೋಷ ಗುಬ್ಬಿ, ವಿ. ಎಸ್. ಶೆಟ್ಟಣ್ಣವರ, ಯು.ವ್. ಸುನಗಾರ, ಎಸ್. ಎಚ್. ನಾಗೇಂದ್ರಗಡ, ಕೆ.ವಿ. ತಿಗರಿ, ಎಚ್.ಐ. ಯಡಿಯಾಪೂರ, ಅಣ್ಣಪ್ಪ ಕವಲೂರು, ವೈ.ಬಿ. ಪಾಟೀಲ, ಎಸ್.ಎಸ್. ಮಾವಿನಕಾಯಿ, ಎ.ವ್. ಹನಜಿ, ಪಿ.ಎಚ್. ಗುಬ್ಬಿ, ವಿಜಯಕುಮಾರ ವಾಲಿ, ನೆಹರು ನಾಯಕ, ಬಸವರಾಜ ಗುಡ್ಲಾನೂರು, ಪ್ರಕಾಶ ಗಾಣಿಗೇರ ಇತರರು ಇದ್ದರು.

