ಗದಗ: ದೇಶಕ್ಕೆ ಆಪತ್ತು,ಪ್ರಕೃತಿ ವಿಕೋಪ,ದೇಶ ಭಕ್ತಿ,ದೇಶ ಸೇವೆಯಲ್ಲಿ ಸದಾ ಮುಂಚೂಣಿಯಲ್ಲಿರುವ ರಾಷ್ಟ್ರೀಯ ಸ್ವಯಂ ಸೇವಕ ಸಂಘ ದೇಶ ಅಲ್ಲದೇ ವಿದೇಶಿದಲ್ಲಿಯೂ ಸ್ವಯಂ ಸೇವಕರಿದ್ದು 100 ವರ್ಷಗಳ ಇತಿಹಾಸ ಇರುವ ಸಂಘವನ್ನು ನಿಷೇಧಮಾಡುತ್ತೇವೆ ಎಂದು ತಮ್ಮ ರಾಜಕೀಯ ಕುರ್ಚಿ ಉಳಿಸಿಕೊಳ್ಳುವ ಸಲುವಾಗಿ ಕಾಂಗ್ರೆಸ್ ಹೈಕಮಾಂಡ್ ಮೆಚ್ಚಿಸಲು ಪ್ರಿಯಾಂಕ ಖರ್ಗೆ ಸೇರಿದಂತೆ ಅನೇಕರು ಮಾತನಾಡಿದ್ದು ಖಂಡನಿಯವಾಗಿದೆ ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿಷೇಧಿಸುವ ಮಾತುಗಳನ್ನು ಆಡಿದ್ದು ಇದು ದೇಶದ ಜನರಿಗೆ ಅಪಮಾನ ಮಾಡಿದಂತೆ ಕೂಡಲೇ ಪ್ರಿಯಾಂಕಾ ಖರ್ಗೆ ದೇಶದ ಜನತೆಯ ಕ್ಷಮೆ ಕೋರಬೇಕು ಎಂದು ಬಿಜೆಪಿ ಯುವ ಮುಖಂಡ ವಸಂತ ಪಡಗದ ಆಗ್ರಹಿಸಿದ್ದಾರೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿದ ಅವರು 1925 ರಲ್ಲಿ ದೇಶ ಸೇವೆಗೆ ಸ್ಥಾಪಿಸಲಾದ ಸಂಘಕ್ಕೆ 10 ದಶಕದ ಇತಿಹಾಸವಿದೆ ಕಾಂಗ್ರೆಸ್ ಪಕ್ಷ ಹಿಂದು ವಿರೋಧಿಯಾಗಿದ್ದು ದೇಶ ರಕ್ಷಣೆಗೆ ನಿಂತ ಸ್ವಯಂ ಸೇವಕರ ಸಂಘದ ನಿಷೇಧ ಯಾರಿಂದಲೂ ಸಾಧ್ಯವಿಲ್ಲ
ಈ ಹಿಂದೆ ನೆಹರು ಇಂದಿರಾಗಾಂಧಿ ಸೇರಿದಂತೆ ಅನೇಕರು ರಾಷ್ಟ್ರೀಯ ಸ್ವಯಂ ಸೇವಕ ಸಂಘ ನಿಷೇಧಿಸುವ ಕುರಿತು ಮಾತನಾಡಿದ್ದರು ನಂತರ ಸಂಘದ ಕಾರ್ಯವನ್ನು ಮೆಚ್ಚಿ ಶಾಖೆಗೆ ಆಗಮಿಸಿ ಮೆಚ್ಚುಗೆ ಪಡಿಸಿ ಹೋಗಿದ್ದನ್ನು ಕಾಂಗ್ರೆಸ್ ಪಕ್ಷ ಮರೆತಂತಿದೆ ಬದಲಾದ ರಾಜಕೀಯ ಬೆಳವಣಿಗೆಯಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಳ್ಳುವ ಆರ್ ಎಸ್ ಎಸ್ ನಿಷೇಧಿಸುವ ಹೇಳಿಕೆ ಕೊಡುತ್ತಿದ್ದು ದೇಶದ ಸಾರ್ವಜನಿಕರಿಗೆ ಮಾಡಿರುವ ಅಪಮಾನವಾಗಿದೆ.
ಇನ್ನು ಕೆಳೆದ ಎರಡು ದಿನಗಳ ಹಿಂದೆ
ರಾಜ್ಯದ ಉಪ ಮುಖ್ಯ ಮಂತ್ರಿ ಡಿ ಕೆ ಶಿವಕುಮಾರ ಬೆಂಗಳೂರು ಶಾಸಕ ಮುನಿರತ್ನ ಅವರಿಗೆ ಗಣವೇಷದಾರಿಯಲ್ಲಿ ಇರುವಾಗಲೇ ಅವರನ್ನು ತುಂಬಿದ ಸಾರ್ವಜನಿಕ ಸಭೆಯಲ್ಲಿ ನಿಂದಿಸಿ ಅವಮಾನ ಮಾಡಿದ್ದಾರೆ ಇದೇ ಡಿಕೆ ಶಿವಕುಮಾರ ವಿಧಾನ ಸಭೆಯಲ್ಲಿ ಸಂಘದ ಗೀತೆ ಹಾಡಿದ್ದನು ಮರೆತಿದ್ದಾರೆ ಸಂಘದ ಕಾರ್ಯ ಮೆಚ್ಚಿ ಇಡೀ ದೇಶವೇ ಜೊತೆಗೆ ನಿಂತಾಗ ಕಾಂಗ್ರೆಸ್ ಪಕ್ಷದ ನಾಯಕರ ಮನಸ್ಥಿತಿಯನ್ನು ತೋರಿಸುತ್ತಿದೆ.
ಕೂಡಲೇ ಕಾಂಗ್ರೆಸ್ ಪಕ್ಷದ ನಾಯಕರು ಆರ್ ಎಸ್ ಎಸ್ ನಿಷೇಧ ಮಾತುಗಳನ್ನು ನಿಲ್ಲಿಸಿ ದೇಶದ ಜನತೆಗೆ ಕ್ಷಮೆ ಕೋರಬೇಕು ಎಂದು ವಸಂತ ಪಡಗದ ಆಗ್ರಹಿಸಿದ್ದಾರೆ.

