ನವಲಗುಂದ: ರಕ್ತ ಮನುಷ್ಯನ ದೇಹದ ಅಮೂಲ್ಯ ವಸ್ತು, ಅಪಘಾತ, ಅನಾಹುತ, ಶಸ್ತ್ರಚಿಕಿತ್ಸೆ ಮುಂತಾದ ಸಂದರ್ಭದಲ್ಲಿ ರೋಗಿಗಳಿಗೆ ರಕ್ತದ ಅಗತ್ಯ ಇರುತ್ತದೆ. ದಾನಿಗಳಿಂದ ಸಂಗ್ರಹಿಸಿದ ರಕ್ತದಿಂದ ಜೀವ ಉಳಿಸಲು ನೆರವಾಗುತ್ತದೆ. ಪ್ರಧಾನಿ ನರೇಂದ್ರ ಮೋದಿಯವರ ಅರ್ಥಪೂರ್ಣ ಜನ್ಮ ದಿನಾಚರಣೆ ಇದಾಗಿದೆ ಎಂದು ಮಾಜಿ ಸಚಿವ ಶಂಕರಪಾಟೀಲ್ ಮುನೇನಕೊಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.
ಪ್ರಧಾನಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ಭಾರತೀಯ ಜನತಾ ಪಕ್ಷ ಯುವ ಮೋರ್ಚಾ ಘಟಕ ಹಾಗೂ ಶಾ ದಾಮಜಿ ಜಾದವಜಿ ಛೇಡಾ ಸ್ಮಾರಕ ರಾಷ್ಟ್ರೋಸ್ಥಾನ ರಕ್ತ ಕೇಂದ್ರ, ಹುಬ್ಬಳ್ಳಿ ಇವರ ಸಹಯೋಗದೊಂದಿಗೆ ಪಟ್ಟಣದ ಗಣಪತಿ ಗುಡಿಯಲ್ಲಿ ಹಮ್ಮಿಕೊಂಡಿದ್ದ ಬೃಹತ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು
18 ವರ್ಷ ಮೇಲ್ಪಟ್ಟು ಹಾಗೂ 60 ವರ್ಷದ ಒಳಗಿನವರು ರಕ್ತದಾನ ಮಾಡಬಹುದು. ರಕ್ತದಾನ ಎಂಬುದು ಪುಣ್ಯದ ಕೆಲಸ. ಒಬ್ಬರು ರಕ್ತದಾನ ಮಾಡುವುದರಿಂದ 3-4 ಮಂದಿಯ ಜೀವ ಉಳಿಸಬಹುದಾಗಿದೆ ಎಂದರು.
ಬಿಜೆಪಿ ಯುವ ಮೋರ್ಚಾ ಅಧ್ಯಕ್ಷ ಅರುಣ ಮೆಣಸಿನಕಾಯಿ ಮಾತನಾಡಿ ಪ್ರಧಾನಮಂತ್ರಿ ನರೇಂದ್ರ ಮೋದಿಯವರ ಜನ್ಮದಿನದ ಅಂಗವಾಗಿ ನವಲಗುಂದದಲ್ಲಿ ಭಾರೀ ರಕ್ತದಾನ ಶಿಬಿರವನ್ನು ಆಯೋಜಿಸಿದ್ದೇವೆ. ಯುವ ಮೋರ್ಚಾ ಕಾರ್ಯಕರ್ತರು ಹಾಗೂ ನಾಗರಿಕರು ಉತ್ಸಾಹದಿಂದ ಭಾಗವಹಿಸಿದ್ದಾರೆ. ರಕ್ತದಾನವು ಮಹಾದಾನ ಎಂಬ ಸಂದೇಶವನ್ನು ಪ್ರಧಾನಮಂತ್ರಿಯವರ ಸೇವಾ ಚಿಂತನೆಯಿಂದ ಪ್ರೇರಿತರಾಗಿ ಜನತೆಗೆ ತಲುಪಿಸಲು ಈ ಕಾರ್ಯಕ್ರಮ ಹಮ್ಮಿಕೊಂಡಿದ್ದೇವೆ ಎಂದರು..
ಈ ಸಂದರ್ಭದಲ್ಲಿ ಗಂಗಪ್ಪ ಮನವಿ, ನಿಂಗಪ್ಪ ಸುತಗಟ್ಟಿ, ಮಂಜುನಾಥ್ ಗಣಿ, ಸಾಯಿಬಾಬಾ ಆನೆಗುಂದಿ, ಸಿದ್ದನಗೌಡ ಪಾಟೀಲ್, ಶರಣಪ್ಪಗೌಡ ದಾನಪ್ಪಗೌಡ್ರ, ಆನಂದ್ ಚವಡಿ. ಮಲ್ಲಿಕಾರ್ಜುನ ಕಂಗನಗೌಡ, ಐಡಿ ಪ್ರಭುಗೌಡ್ರ, ಅರುಣ್ ಕುಮಾರ್ ಮೆಣಸಿನಕಾಯಿ, ಮಂಜು ಗಡನವರ್, ಸಿದ್ದನಗೌಡ ಎಸ್ ಪಾಟೀಲ್,.ಯುವ ಮೋರ್ಚಾ ಉಪಾಧ್ಯಕ್ಷರಾದ ರಾಮನಗೌಡ ಸಂಕನಗೌಡ್ರು, ಈರಣ್ಣ ಮೆಣಸಿನಕಾಯಿ, .ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿಗಳಾದ ಸುಭಾಷ್ ಕಿತ್ತಲಿ, ರಾಜುಗೌಡ ಗೌಡಪ್ಪಗೌಡ, ಹಸಬಿ ಪ್ರಕಾಶ್ ಬದಾಮಿ, ರವಿಕುಮಾರ ಸವದತ್ತಿ ಸೇರಿದಂತೆ ಇನ್ನಿತರು ಉಪಸ್ಥಿತರಿದ್ದರು.

