ದೇವಸ್ಥಾನದ ಅಭಿವೃದ್ಧಿಗೆ ಸಚಿವ ಎಂ.ಬಿ. ಪಾಟೀಲ ಭರವಸೆ

Samagraphrabha
1 Min Read

ನವಲಗುಂದ : ಪಟ್ಟಣದ ಮಹಾದಾನಿ ಲಿಂಗರಾಜ ದೇಸಾಯಿ ಅವರ ಕೈಲಾಸ ಮಂದಿರ ತಡಿಮಠ, ಲಿಂಗರಾಜವಾಡೆ, ಗಣಪತಿ ದೇವಸ್ಥಾನದ ಅಭಿವೃದ್ಧಿಗೆ ಅಭಿವೃದ್ಧಿಗೆ ವೈಯಕ್ತಿಕ ಹಾಗೂ ಸಿ ಎಸ್‌.ಆರ್‌ ನಿಧಿಯಿಂದ ಅನುದಾನ ಒದಗಿಸತ್ತೇನೆಂದು ಟ್ರಸ್ಟ ಧರ್ಮದರ್ಶಿ ಹಾಗೂ ಬೃಹತ್‌ ಮತ್ತು ಮಧ್ಯಮ ಕೈಗಾರಿಕೆ ಹಾಗೂ ಮೂಲಸೌಲಭ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ಭರವಸೆ ನೀಡಿದರು.

ನವಲಗುಂದ ನಗರದಲ್ಲಿರುವ ಲಿಂಗರಾಜ ಟ್ರಸ್ಟನ ಆದೀನದಲ್ಲಿರುವ ಆಸ್ತಿಗಳ ಬಗ್ಗೆ ಹಾಗೂ ಅಭಿವೃದ್ಧಿ ಕುರಿತು ಪರಿಶೀಲನೆ ನಡೆಸಿ ಮಾತನಾಡಿದ ಅವರು ನವಲಗುಂದ ನಗರದಲ್ಲಿರುವ ಟ್ರಸ್ಟಿನ ಆಸ್ತಿಗಳಾದ ಲಿಂಗರಾಜ ವಾಡೆ, ಪ್ರಸಿದ್ಧ ತಡಿಮಠ, ಗಣಪತಿ ದೇವಸ್ಥಾನ, ಮುಂತಾದ ಟ್ರಸ್ಟಿಗೆ ಸಂಬಂಧವಿರುವ ಆಸ್ತಿಗಳ ಬಗ್ಗೆ ಪರಿಶೀಲನೆ ಮಾಡಿ ಅವುಗಳ ಸಂರಕ್ಷಣೆ ಹಾಗೂ ಅಭಿವೃದ್ಧಿ ಪಡೆಸಲು ಕ್ರಮ ತೆಗೆದುಕೊಳ್ಳಬೇಕೆಂದು ಲಿಂಗರಾಜ್‌ ಸರ್ಕಲ್‌ ನಲ್ಲಿರುವ ಲಿಂಗರಾಜ ದೇಸಾಯಿ ಅವರ ಮೂರ್ತಿಗೆ ಮಾಲಾರ್ಪಣೆ ಆಸಾರ ದರ್ಗಾಕ್ಕೆ ಭೇಟಿ ನೀಡಿದರು ಸಾರ್ವಜನಿಕರ ಮನವಿಗೆ ಸ್ಪಂಧಿಸಿ ಅಭವೃದ್ಧಿಗೆ ವಿಶೇಷ ಆಸಕ್ತಿವಹಿಸಿ ಕ್ರಮ ಕೈಗೊಳ್ಳುವುದಾಗಿ ಪಾಟೀಲ ಅವರು ಭರವಸೆ ನೀಡಿದರು.

ಈಗಾಗಲೇ ತಡಿಮಠದ ಅಭಿವೃದ್ಧಿಗೆ 50 ಲಕ್ಷ ಸಚಿವ ಎಂ.ಬಿ ಪಾಟೀಲ ಅವರ ಕುಟುಂಬದಿಂದ ಹಣ ನೀಡಲು ಒಪ್ಪಿದ್ದಕ್ಕೆ ಹೆಚ್ಚಿಗೆ ಬೇಕಾದಲ್ಲಿ ಮತ್ತೆ ಕೊಡುತ್ತೇನೆ ಎಂದು ಭರವಸೆ ನೀಡಿ ನವಲಗುಂದ ಕ್ಕೆ ಭೇಟಿ ನೀಡಿದ ಸಚಿವ ಎಮ್.ಬಿ. ಪಾಟೀಲ ಅವರಿಗೆ ಶಾಸಕ ಎನ್.ಹೆಚ್. ಕೋನರಡ್ಡಿ ಸನ್ಮಾನಿಸಿದರು.

ಈ ಸಂದರ್ಭದಲ್ಲಿ ಬೆಳಗಾವಿ ಜಿಲ್ಲಾಧಿಕಾರಿ ಹಾಗೂ ಟ್ರಸ್ಟನ ಅಧ್ಯಕ್ಷರಾದ ಮಹಮ್ಮದ ರೋಷನ್, ಟ್ರಸ್ಟ ಧರ್ಮದರ್ಶಿಗಳಾದ ಎಲ್.ಎಸ್. ಸರದೇಸಾಯಿ, ಸೋಮನಾಥ ಪಾಟೀಲ,ಬಿ.ಬಿ. ಪಾಟೀಲ, ನವಲಗುಂದ ತಾಲ್ಲೂಕು ಕೂಡುವಕ್ಕಲಿಗ ಸಮಾಜದ ಅಧ್ಯಕ್ಷ ನಿಂಗಪ್ಪ ಹಳ್ಳದ, ಧಾರವಾಡ ಜಿಲ್ಲಾ ಗ್ರಾಮೀಣ ಅಧ್ಯಕ್ಷ ಅನೀಲಕುಮಾರ ಪಾಟೀಲ, ಬಸವರಾಜ ಹರಿವಾಳದ, ಪುರಸಭೆ ಅಧ್ಯಕ್ಷ ಶಿವಾನಂದ ತಡಸಿ, ಸದಸ್ಯರಾದ ಪ್ರಕಾಶ ಸಿಗ್ಲಿ, ಅಪ್ಪಣ್ಣ ಹಳ್ಳದ, ಜೀವನ ಪವಾರ, ಲಕ್ಷಣ ಹಳ್ಳದ, ನಾಗಪ್ಪ ಸಂಗಟಿ, ಲಕ್ಷ್ಮಣ ಜವಳಗಿ, ಅಡಿವೆಪ್ಪ ಶಿರಸಂಗಿ, ಗಂಗಾಧರ ಹಳ್ಳದ, ವಿಜಯಮಹಾಂತೇಶ ಬಾಗಿ, ರವಿ ಹಳ್ಳದ, ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.

- Advertisement -
Ad image

Share this Article