ರಾಷ್ಟ್ರಮಟ್ಟದ ಎಮ್ ಟಿ ಬಿ ಸೈಕ್ಲಿಂಗ್ ಸ್ಪರ್ಧೆಗೆ ಜಿಲ್ಲೆಯ ಸೈಕ್ಲಿಂಗ್ ಕ್ರೀಡಾಪಟುಗಳು ಆಯ್ಕೆ

Samagraphrabha
1 Min Read

ಗದಗ : ಕರ್ನಾಟಕ ಅಮೆಚೂರ್ ಸೈಕ್ಲಿಂಗ್ ಅಸೋಸಿಯೇಷನ್ ಹಾಗೂ ಬಾಗಲಕೋಟೆ ಜಿಲ್ಲಾ ಸಂಸ್ಥೆ ಹಾಗೂ ಕ್ರೀಡಾ ಸಂಘ (ರಿ) ಬಿಳಗಿ ಇವರ ಸಹಯೋಗದಲ್ಲಿ 20ನೇ ರಾಜ್ಯಮಟ್ಟದ ಮೌಂಟನ್ ಬೈಕ್ ಸೈಕ್ಲಿಂಗ್ ಚಾಂಪಿಯನಶಿಪ್ ದಲ್ಲಿ ಗದಗಿನ ಯುವ ಸಬಲೀಕರಣ ಹಾಗೂ ಕ್ರೀಡಾ ಇಲಾಖೆಯ ಕ್ರೀಡಾವಸತಿ ನಿಲಯದ ಕ್ರೀಡಾಪಟುಗಳಾದ ಕುಮಾರಿ ಪ್ರಿಯಾಂಕಾ ಲಮಾಣಿ 14 ವರ್ಷದ ಒಳಗಿನ ವಯೋಮಿತಿಯ ಇಂಡಿವಿಜ್ಯುವಲ್ ಟೈಂ ಟ್ರಯಲ್(Individual Time Trail ) ನಲ್ಲಿ ಒಂದು ಬೆಳ್ಳಿ ಪದಕ, ಮಾಸ್ ಸ್ಟಾರ್ಟ (Mass Start)ನಲ್ಲಿ ಒಂದು ಬೆಳ್ಳಿ ಪದಕ, ಕುಮಾರಿ ಭಾಗ್ಯ ಮೇಲ್ಮನಿ 14 ವರ್ಷದ ಒಳಗಿನ ವಯೋಮಿತಿಯ ಇಂಡಿವಿಜ್ಯುವಲ್ ಟೈಂ ಟ್ರಯಲ್ ( Individual Time Trail )ನಲ್ಲಿ ಒಂದು ಕಂಚಿನ ಪದಕ, ಮಾಸ್ ಸ್ಟಾರ್ಟ (Mass Start) ನಲ್ಲಿ ಒಂದು ಕಂಚಿನ ಪದಕ, ಕುಮಾರಿ ಪಲ್ಲವಿ ಕುರಿ U/16 ವರ್ಷದ ಒಳಗಿನ ವಯೋಮಿತಿಯ ಇಂಡಿವಿಜ್ಯುವಲ್ ಟೈಂ ಟ್ರಯಲ್(Individual Time Trail) ನಲ್ಲಿ ಒಂದು ಕಂಚಿನ ಪದಕ, ಮಾಸ್ ಸ್ಟಾರ್ಟ (Mass Start) ನಲ್ಲಿ ಒಂದು ಬೆಳ್ಳಿ ಪದಕ, ಹಾಗೂ ಕುಮಾರಿ ಸೌಂದರ್ಯ ಅಂತಾಪುರ U/16 ವರ್ಷದ ಒಳಗಿನ ವಯೋಮಿತಿಯ ಇಂಡಿವಿಜ್ಯುವಲ್ ಟೈಂ ಟ್ರಯಲ್ (Individual Time Trail) ನಲ್ಲಿ ಒಂದು ಬೆಳ್ಳಿ ಪದಕ ಪಡೆದುಕೊಂಡಿರುತ್ತಾರೆ. ಹಾಗೂ ಅರುಣಾಚಲ ಪ್ರದೇಶದಲ್ಲಿ ನಡೆಯುವ ರಾಷ್ಟ್ರಮಟ್ಟದ ಎಮ್ ಟಿ ಬಿ ಸ್ಪರ್ಧೆಗೆ ಆಯ್ಕೆಯಾಗಿರುತ್ತಾರೆ. ಪದಕ ವಿಜೇತರಿಗೆ ಹಾಗೂ ತರಬೇತುದಾರರಾದ ವಿದ್ಯಾ ಕುಲಕರ್ಣಿ ಅವರಿಗೆ ಸನ್ಮಾನ್ಯ ಡಾ.ಎಚ್ ಕೆ ಪಾಟೀಲ
ಮಾನ್ಯ ಕಾನೂನು, ನ್ಯಾಯ, ಮಾನವ ಹಕ್ಕುಗಳು, ಸಂಸದೀಯ ವ್ಯವಹಾರಗಳು ಮತ್ತು ಶಾಸನ ರಚನೆ ಹಾಗೂ ಪ್ರವಾಸೋದ್ಯಮ ಸಚಿವರು ಮತ್ತು ಗದಗ ಜಿಲ್ಲಾ ಉಸ್ತುವಾರಿ ಸಚಿವರು ಪ್ರೋತ್ಸಾಹಿಸಿ ಅಭಿನಂದಿಸಿದ್ದಾರೆ.

Share this Article