ಸವಣೂರ ಪಟ್ಟಣದ ಡಾ. ವಿ.ಕೃ.ಗೋಕಾಕ ಸಭಾ ಭವನದಲ್ಲಿ ಮಂಗಳವಾರ ಏರ್ಪಡಿಸಿದ್ದ ಪೋಷಣ ಭಿ ಪಡಾಯಿ ಭಿ ಕಾರ್ಯಕ್ರಮ ಜರುಗಿತು.
ಮಕ್ಕಳಲ್ಲಿನ ಅಪೌಷ್ಠಿಕತೆ ಹೋಗಲಾಡಿಸಿ ಸರ್ಕಾರದ ಯೋಜನೆಗಳನ್ನು ಪ್ರತಿ ಪಲಾನುಭಗಳಿಗೆ ತಲುಪಿಸುವ ಮೂಲಕ ಸ್ವಾಥ್ಯ ಸಮಾಜ ನಿರ್ಮಾಣ ಹೊಣೆ ನಮ್ಮ-ನಿಮ್ಮೇಲ್ಲರ ಮೇಲಿದೆ ಎಂದು ಮಕ್ಕಳ ಅಭಿವೃದ್ಧಿ ಇಲಾಖೆ ಉಪ ನಿರ್ದೇಶಕಿ ರೇವತಿ ಹೊಸಮಠ ತಿಳಿಸಿದರು.
ಜಿಲ್ಲಾಡಳಿತ, ಜಿಪಂ, ತಾಪಂ, ತಾಲೂಕು ಆಡಳಿತ, ಮಕ್ಕಳ ಅಭಿವೃದ್ಧಿ ಇಲಾಖೆ ಹಾಗೂ ಶಿಶು ಅಭಿವೃದ್ಧಿ ಯೋಜನೆಯಡಿ ಮೂರು ದಿನಗಳ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಪ್ರತಿ ಹಂತದ ತರಬೇತಿ ತರಬೇತಿಯನ್ನು ಉತ್ತಮ ರೀತಿಯಲ್ಲಿ ಪಡೆದಲ್ಲಿ ಮಾತ್ರ ಯೋಜನೆಗಳನ್ನು ಅತ್ಯುಮವಾಗಿ ಅನುಷ್ಠಾನಗೊಳಿಸಲು ಸಾಧ್ಯವಾಗಲಿದೆ. ಆದ್ದರಿಂದ, ಅಂಗನವಾಡಿ ಕಾರ್ಯಕರ್ತೆಯರು ಗರ್ಬಿಣಿ, ಬಾಣಂತಿ ನಂತರ ಮಗುವಿನ ಆರೈಕೆ ಕುರಿತು ಜಾಗೃತಿ ಮೂಡಿಸುವದು ಅವಶ್ಯವಾಗಿದೆ ಎಂದರು.
ಮಕ್ಕಳ ಅಭಿವೃದ್ಧಿ ಇಲಾಖೆ ಜಿಲ್ಲಾ ನಿರೂಪಣಾಧಿಕಾರಿ ಶೈಲಾ ಕುರಹಟ್ಟಿ ಸನ್ಮಾನ ಸ್ವೀಕರಿಸಿ ಮಾತನಾಡಿ, ತರಬೇತಿಯಲ್ಲಿ ಕಲಿಸುವ ಪ್ರತಿ ಮಗುವಿನ ಆರೈಕೆ ಹಾಗೂ ವಿವಿಧ ಕಲಾತ್ಮಕ ಅಳವಡಿಕೆಯನ್ನು ಅಂಗನವಾಡಿ ಕಾರ್ಯಕರ್ತೆಯರು ಕರಗತ ಮಾಡಿಕೊಂಡಲ್ಲಿ ಮಾತ್ರ ತಮ್ಮ ಸೇವೆ ಸುಲಭಗೊಳ್ಳಲು ಸಾಧ್ಯವಾಗಲಿದೆ ಎಂದರು.
ಸಿಡಿಪಿಒ ಉಮಾ ಕೆ.ಎಸ್., ಅಧ್ಯಕ್ಷತೆ ವಹಿಸಿ ಮಾತನಾಡಿ, ಅಂಗನವಾಡಿ ಕಾರ್ಯಕರ್ತೆಯರು ಕೈಗೊಳ್ಳುವ ಕಾರ್ಯ ನಿಜಕ್ಕೂ ಶ್ಲಾಘನೀಯವಾಗಿದೆ. ಗರ್ಬಿಣಿ, ಬಾಣಂತಿ, ಮಗುವಿನ ಆರೈಕೆಯೊಂದಿಗೆ ವಯೋವೃದ್ಧರ ಕಾಳಜಿ ಸೇರಿದಂತೆ ವಿವಿಧ ಜವಾಬ್ದಾರಿಯನ್ನು ವಹಿಸಿದ್ದಾರೆ ಎಂದರು.
ಪೋಷಣ ಅಭಿಯಾನ ತಾಲೂಕು ಸಂಯೋಜಕಿ ರೇಷ್ಮಾ ನೀರಲಗಿ ನೇತೃತ್ವ ವಹಿಸಿದ್ದರು.
ಅಂಗನವಾಡಿ ಮೇಲ್ವೀಚಾರಕಿಯರಾದ ಗೀತಾ ಕಿರೇಸೂರ, ಸುಜಾತಾ ಬೇಟಗೇರಿ, ಪೈರೋಜಾ ನದಾಫ, ಎಫ್‌ಡಿಎ ಎಸ್.ಎಸ್.ಹಿರೇಗೌಡ್ರ, ಎಫ್‌ಡಿಎ ಶೆಟ್ಟೆಪ್ಪ ವಡ್ಡರ, ವಿಜಯಕುಮಾರ ಹಣ್ಣಿರ ಹಾಗೂ ಇತರರು ಪಾಲ್ಗೊಂಡಿದ್ದರು. ಅಂಗನವಾಡಿ ಮೇಲ್ವಿಚಾರಕಿಯರಾದ ತೇಜಸ್ವಿನಿ ಕೊಂಡಿ, ಮಾಲಾ ಬಳಿಗಾರ, ಸುಪ್ರೀಯಾ ಗುತ್ತಲ ಹಾಗೂ ಕಾರ್ಯಕರ್ತೆ ಪುಷ್ಪಾ ಬತ್ತಿ ಕಾರ್ಯಕ್ರಮ ನಿರ್ವಹಿಸಿದರು. ನಂತರ, ತರಬೇತಿ ಪಡೆದ ಅಂಗನವಾಡಿ ಮೇಲ್ವೀಚಾರಕಿಯರು ಕಾರ್ಯಕರ್ತೆಯರಿಗೆ ತರಬೇತಿ ನೀಡಿದರು.
