ಹಾವೇರಿ : ಹಿರೇಕೆರೂರು ತಾಲೂಕಿನ ಚಿಕ್ಕೇರೂರ ಗ್ರಾಮದ ಶ್ರೀ ದುರ್ಗಾದೇವಿ ದೇವಸ್ಥಾನದ ಆವರಣದಲ್ಲಿ ವಿಶೇಷ ಪೂಜಾ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳು ಸೆ.22 ರಿಂದ ಅ.2 ವರೆಗೂ ವಿಜಯದಶಮಿ ಅಂಗವಾಗಿ ಶ್ರೀ ದುರ್ಗಾದೇವಿಗೆ ಪ್ರತಿದಿನ ಬೆಳಗ್ಗೆ ಬ್ರಾಹ್ಮೀ ಮುಹೂರ್ತದಲ್ಲಿ ಪಂಚಾಮೃತ ಅಭಿಷೇಕ ಕುಂಕುಮಾರ್ಚನೆ ಅಲಂಕಾರ ದೊಂದಿಗೆ 2ನೇ ವರ್ಷದ ದಸರಾ ಉತ್ಸವ ನಡೆಯಲಿದೆ.
ಸೆ.22 ರಂದು ಬೆಳಿಗ್ಗೆ 9 ಘಂಟೆಗೆ ಗಂಗಾ ಪೂಜೆಯೊಂದಿಗೆ ಉತ್ಸವದ ನೂತನವಾಗಿ ಪ್ರತಿಷ್ಠಾಪಿಸಿದ ದೇವಿಯ ಮೂರ್ತಿಗೆ ವಿಶೇಷ ಮಹಾಪೂಜೆ ವಿಜ್ರಂಭಣೆಯಿಂದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಜರುಗಿತು. ಸಂಜೆ 6.30ಕ್ಕೆ ಪ್ರಾರ್ಥನೆಯೊಂದಿಗೆ ಶ್ರೀ ದೇವಿಯನ್ನು ಮಂಟಪಕ್ಕೆ ಕರೆ ತಂದು ಧ್ವಜಾರೋಹಣ ನೆರವೇರಿಸಿದರು. ಕಾರ್ಯಕ್ರಮದ ಉದ್ಘಾಟನೆಯನ್ನುಗ್ರಾಮದ ಗಣ್ಯರಿಂದ ನೆರವೇರಿಸಲಾಯಿತು.ನಂತರ ಬ್ರಾಹ್ಮಣ ಸಮಾಜದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.
ಸೆ.23ಕ್ಕೆ ಆರ್ಯವೈಶ್ಯ ಸಮಾಜ, ಸೆ.24ಕ್ಕೆ ಗ್ರಾಮದ ತಳವಾರ ಓಣಿ ಹನುಮಾನ್ ನಗರ ಹಾಗೂ ಯಲ್ಲಾಪುರ ಗ್ರಾಮದ ಶ್ರೀ ದುರ್ಗಾದೇವಿ ಭಕ್ತವೃಂದವ, ಸೆ.25ಕ್ಕೆ ಭಾವಸಾರ ಕ್ಷತ್ರಿಯ ಸಮಾಜ,ಸೆ.26ಕ್ಕೆ ಬನ್ನಿ ಮಹಾಕಾಳಿ ಮತ್ತು ವಿಘ್ನೇಶ್ವರ ಸಂಘ, ಸೆ.27ಕ್ಕೆ ಬೇಡ ಜಂಗಮ ಸಮಾಜ, ಸೆ.28ಕ್ಕೆ ಹಿಂದೂ ಮಹಾಕೋಟೆ ಸಮಾಜ, ಸೆ.29ಕ್ಕೆ ವೀರಶೈವ ಲಿಂಗಾಯತ ಸಮಾಜ, ಸೆ.30ಕ್ಕೆ ಹಿಂದೂ ಮಹಾ ಕೋಟೆ ಸಮಾಜ, ಅ.1ಕ್ಕೆ ವಿಶ್ವಕರ್ಮ ಸಮಾಜದವರಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿವೆ ಅ.2ಕ್ಕೆ ಗ್ರಾಮದಲ್ಲಿ ಬನ್ನಿ ಮುಡಿಯುವ ಕಾರ್ಯಕ್ರಮ ಜರುಗುವುದು.
