ಶಿಕ್ಷಕರಿಗೆ ಜಾತಿ ಗಣತಿ ಕಿಟ್ ವಿತರಿಸಿದ ಶಾಸಕ: ಜಿ ಎಸ್ ಪಾಟೀಲ್

Samagraphrabha
1 Min Read

ರೋಣ: ನಮ್ಮ ಸರ್ಕಾರದ ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆ ಮೇಲೆ ಯಾರಿಗೂ ಸಂಶಯ ಬೇಡ. ಇದು ಜಾತಿಗಳ ಸಮೀಕ್ಷೆಯಲ್ಲ. ಇದು ಪ್ರತಿಯೊಬ್ಬರಿಗೂ ಸಾಮಾಜಿಕ ನ್ಯಾಯ ಒದಗಿಸುವ ಗಣತಿಯಾಗಿದೆ. ಪ್ರತಿಯೊಬ್ಬರೂ ಇದರಲ್ಲಿ ಭಾಗವಹಿಸಿ ಯಶಸ್ವಿಗೊಳಿಸಬೇಕು ಎಂದು ಶಾಸಕ ಜಿ.ಎಸ್. ಪಾಟೀಲ ಹೇಳಿದರು.

ಪಟ್ಟಣದ ಗುರು ಭವನದಲ್ಲಿ ಸೋಮವಾರ ಸಾಮಾಜಿಕ, ಶೈಕ್ಷಣಿಕ ಗಣತಿಗೆ ಚಾಲನೆ ನೀಡಿ, ನಂತರ ಗಣತಿದಾರರಿಗೆ ಕಿಟ್ ವಿತರಿಸಿ ಅವರು ಮಾತನಾಡಿದರು.
ಹಿಂದುಳಿದ ವರ್ಗದ ನೇತೃತ್ವದಲ್ಲಿ ಗಣತಿ ನಡೆಯಲಿದ್ದು, ಆ ಜವಾಬ್ದಾರಿಯನ್ನು ಶಿಕ್ಷಕರಿಗೆ ನೀಡಲಾಗಿದೆ. ರೋಣ ತಾಲೂಕಿನ ತಹಸೀಲ್ದಾರ್ ಅಧ್ಯಕ್ಷತೆಯಲ್ಲಿ ೨೧ ಸುಪರ್‌ವೈಸರ್‌ಗಳು, ೩೫೩ ಗಣತಿದಾರರು ಇದರಲ್ಲಿ ಭಾಗಿಯಾಗಲಿದ್ದಾರೆ. ಗಣತಿದಾರರು ಮನೆ ಬಾಗಿಲಿಗೆ ಬಂದಾಗ ಪ್ರತಿಯೊಬ್ಬರೂ ಸಂಪೂರ್ಣ ಮಾಹಿತಿ ನೀಡಿ ಸಹಕರಿಸಬೇಕು ಎಂದು ತಿಳಿಸಿದರು.
ಗಣತಿಯಲ್ಲಿ ಜನ ಸಮುದಾಯಗಳ ಅಂಕಿ-ಅoಶಗಳ ಸಂಗ್ರಹ, ಆರ್ಥಿಕ ಬೆಳವಣಿಗೆಯ ಸ್ಥಿತಿಗತಿ ಅರಿಯುವುದು ಈ ಸಮೀಕ್ಷೆಯ ಉದ್ದೇಶವಾಗಿದೆ. ವಿವಿಧ ಜನಸಮುದಾಯಗಳ ಕುಲಕಸುಬು, ಸಾಮಾಜಿಕ ಪರಿವರ್ತನೆಗಳ ಅಧ್ಯಯನ, ನೀರು, ವಸತಿ, ಶೌಚಾಲಯ, ಬೆಳಕು, ಇಂಧನ, ಶಿಕ್ಷಣ, ಆರೋಗ್ಯ ಇವುಗಳ ಸಂಕ್ಷಿಪ್ತ ಮಾಹಿತಿ ಸಂಗ್ರಹ ಮತ್ತಿತರ ಉದ್ದೇಶದೊಂದಿಗೆ ಸಮೀಕ್ಷೆ ನಡೆಸಲಾಗುತ್ತಿದೆ ಎಂದರು.

ನಿಮ್ಮ ಕುಟುಂಬದ ಆಧಾರ್ ಕಾರ್ಡ್, ರೇಷನ್ ಕಾರ್ಡ್ ಮತ್ತು ಮತದಾರರ ಗುರುತಿನ ಚೀಟಿ, ಇನ್ನಿತರೆ ಅಗತ್ಯ ದಾಖಲೆಗಳನ್ನು ಸಮೀಕ್ಷೆದಾರರಿಗೆ ನೀಡಬೇಕು. ಮನೆಯಲ್ಲಿ ಅಂಗವಿಕಲರಿದ್ದಲ್ಲಿ ಅವರಿಗೆ ಇಲಾಖೆ ನೀಡಿರುವ ವಿಶಿಷ್ಟ ಗುರುತಿನ ಚೀಟಿಯನ್ನು ಸಮೀಕ್ಷೆ ಸಂದರ್ಭದಲ್ಲಿ ತೋರಿಸಬೇಕು. ರೇಷನ್ ಕಾರ್ಡ್ನಲ್ಲಿ ಕುಟುಂಬದ ಸದಸ್ಯನ ಹೆಸರಿಲ್ಲದಿದ್ದರೆ ಆ ವ್ಯಕ್ತಿಯ ಆಧಾರ್ ನಂಬರ್ ಮೂಲಕ ಸಮೀಕ್ಷೆಯಲ್ಲಿ ಭಾಗಿಯಾಗಲಿದ್ದಾರೆ.
| ಜಿ.ಎಸ್. ಪಾಟೀಲ, ಶಾಸಕರು

Share this Article