ನವಲಗುಂದ : ರಾಷ್ಟ್ರಿಯಕೃತ ಬ್ಯಾಂಕಗಳ ಜೊತೆ ವ್ಯವಹಾರಕ್ಕಿಂತ ಸಹಕಾರ ಸಂಘಗಳ ಜೊತೆ ವ್ಯವಹರಿಸಿ ಬೆಳೆಸಬೇಕೆಂದು ಶಿರಹಟ್ಟಿ ಫಕೀರ್ ದಿಂಗಾಲೇಶ್ವರ ಶ್ರೀಗಳು ಕರೆ ನೀಡಿದರು.
ಅವರು ಪಟ್ಟಣದ ಶಿಕ್ಷಕರ ಸಹಕಾರ ಕಲ್ಯಾಣ ಕೇಂದ್ರದಲ್ಲಿ ಶನಿವಾರ ನವಲಗುಂದ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರು ಸಹಕಾರ ಪತ್ತಿನ ಸಂಘ ನಿ, ನವಲಗುಂದ ಶತಮಾನೋತ್ಸವ ಸಂಭ್ರಮ ಹಾಗೂ 101 ಸರ್ವ ಸಾಧಾರಣ ಸಭೆಯ ದಿವ್ಯ ಸಾನಿಧ್ಯವಹಿಸಿ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ರಾಷ್ಟ್ರಿಕೃತ ಬ್ಯಾಂಕಗಳು ಮಾಡದೇ ಇರುವ ಕಾರ್ಯವನ್ನು ಸಹಕಾರಿ ಪತ್ತಿನ ಸಂಘಗಳು ಕಾರ್ಯ ನಿರ್ವಹಿಸುತ್ತಿರುವುದು ಹೆಮ್ಮೆಯ ವಿಷಯ ಹಾಗೇ ನವ ಮನ್ವಂತರದ ಹೆಜ್ಜೆಯೊಂದಿಗೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘ ಅಭಿವೃದ್ಧಿಯತ್ತ ಸಾಗುತ್ತಿದ್ದು, ಸಹಕಾರ ಸಂಘದ ಸದುಪಯೋಗ ಪಡಿಸಿಕೊಳ್ಳಿ, ಈ ಸಂಘವು ಇನ್ನು ಅಭಿವೃದ್ಧಿಯತ್ತ ಸಾಗಲಿ ಎಂದು ಹಾರೈಸಿದರು.
ನಂತರ ಶ್ರೀಗಳನ್ನು ಸಹಕಾರಿ ಪತ್ತಿನ ಸಂಘದ ವತಿಯಿಂದ ಸನ್ಮಾನಿಸಿ ಗೌರವಿಸಿದರು.
-ನ.ತಾ.ಪ್ರಾ.ಶಾ.ಶಿ.ಶಿ. ಸಹಕಾರ ಸಂಘದ ಅಧ್ಯಕ್ಷ ಜಿ. ವಿ. ಹೊಳೆಯಣ್ಣವರ ಮಾತನಾಡಿ ವಾರ್ಷಿಕ ವರದಿ ಮಂಡಿಸಿ
ಈ ವರ್ಷ 2024-25 ನೇ ಸಾಲಿನಲ್ಲಿ ರೂ.6.75 ಕೋಟಿ ವ್ಯವಹಾರ ಮಾಡಿದೆ. ಇದೆಲ್ಲ ಸಾಧ್ಯವಾಗಿರುವುದು ಷೇರುದಾರ ಶಿಕ್ಷಕರ ಸಹಕಾರದಿಂದ ಇನ್ನು ಮುಂದೆ ಷೇರುದಾರ ಶಿಕ್ಷಕರ ಮರಣೋತ್ತರ ನಿಧಿಯನ್ನು 20 ಸಾವಿರಕ್ಕೆ ಹಾಗೂ ಸಾಲ ಸೌಲಭ್ಯವನ್ನು 10 ಲಕ್ಷದಿಂದ 12ಲಕ್ಷ ರೂ.ಗೆ ಹೆಚ್ಚಿಸಲಾಗಿದೆ ಹಾಗೇ ಸಂಘದ ಅಭಿವೃದ್ಧಿಗೆ ಎಲ್ಲರೂ ಸಹಕರಿಸುವುದರ ಜೊತೆಗೆ ಸದುಪಯೋಗ ಪಡೆದಕೊಳ್ಳಿವೆಂದರು.
-ನಂತರ ಸುಳ್ಳ-ಹೂಲಿ ಗ್ರಾಮದ ಹಿರೇಮಠದ ಶಿವ ಸಿದ್ದರಾಮೇಶ್ವರ ಶ್ರೀಗಳು ಮಾತನಾಡಿ ನವಲಗುಂದ ತಾಲೂಕ ಪ್ರಾಥಮಿಕ ಶಾಲಾ ಶಿಕ್ಷಕ-ಶಿಕ್ಷಕಿಯರು ಸಹಕಾರ ಪತ್ತಿನ ಸಂಘದ ಶತಮಾನೋತ್ಸವ ಸಂಭ್ರಮಕ್ಕೆ ಶುಭ ಹಾರೈಸಿ ಆಶೀರ್ವದಿಸಿದರು.
“ಸ್ಮರಣ ಸಂಚಿಕೆ ಬಿಡುಗಡೆ ನಂತರ ಪ್ರತಿಭಾ ಪುರಸ್ಕಾರ, ಸನ್ಮಾನ ಸಮಾರಂಭ ನಡೆಯಿತು”…
ಈ ಸಂದರ್ಭದಲ್ಲಿ ಕ.ರಾ.ಸ.ಪ.ಸಂ. ಮಹಾಮಂಡಳ ನಿ, ಬೆಂಗಳೂರು ನಿರ್ದೇಶಕ ಡಾ:ಸಂಜಯ ಹೊಸಮಠ, ಪ್ರಭಾವತಿ ಶಂಕರ ಪಾಟೀಲ ಮುನೇನಕೊಪ್ಪ, ಎಲ್. ಬಿ. ಕಮತ, ಶ್ರೀದೇವಿ ಕುಲಕರ್ಣಿ, ಎಮ್.ಕೆ. ಕುರಿ, ಜಿ. ವಾಯ್.ಪಡುಸುಣಗಿ, ಬಿ. ಕೆ. ಹಾಲವರ, ವಾಯ್.ಎಚ್. ಮಣಕವಾಡ, ಎಲ್. ಎಮ್.ಗಡ್ಡಿ, ವಿ.ಡಿ.ರಂಗಣ್ಣವರ, ಎಸ್.ಬಿ. ಅಂಗಡಿ, ಎಚ್.ಎಸ್. ಚನ್ನಪ್ಪಗೌಡ್ರ, ಎಸ್. ಎಚ್. ಭಜಂತ್ರಿ, ಡಿ.ಡಿ. ಇನಾಮತಿ, ಎಚ್. ಎಮ್.ನಾಯ್ಕರ, ಈರಣ್ಣ ಬೂದಿಹಾಳ, ಮುಖ್ಯ ಕಾರ್ಯನಿರ್ವಾಹಕ, ವೆಂಕಟೇಶ್ ಭಜಂತ್ರಿ, ಎಚ್ ಎಸ್.ಚನ್ನಪ್ಪಗೌಡ್ರ, ಎನ್. ವಾಯ್. ಕಳಸಾಪುರ, ಆರ್.ಬಿ. ಹಳ್ಳಿಕೇರಿ, ಪಿ.ಸಿ.ಸೂರಪ್ಪನವರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು…

