ಗದಗ: ಗೋವಾ ರಾಜ್ಯದ ಬಸ್ ಹಾಗೂ ಖಾಸಗಿ ಕಾರ ನಡುವೆ ಅಪಘಾತ ಸಂಭವಿಸಿ ಮೂರು ಜನ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.
ಗದಗ ತಾಲೂಕಿನ ಹರ್ಲಾಪೂರ ಕ್ರಾಸ್ ಬಳಿ ಘಟನೆ ನಡೆದಿದ್ದು ಮೃತರು ಹಾವೇರಿ ಜಿಲ್ಲೆ ಬಂಕಾಪೂರ ತಾಲೂಕಿನ ಹುನಗುಂದ ನಿವಾಸಿಯಾಗಿದ್ದ ಹಾವೇರಿ ಜಿಲ್ಲೆಯಲ್ಲಿ ಜಿಲ್ಲಾ ಪೊಲೀಸ್ ಕಂಟ್ರೋಲ್ ರೂಮ್ ನಲ್ಲಿ ಪೇದೆಯಾಗಿದ್ದ ಅರ್ಜುನ್ ನೆಲ್ಲೂರು(34) ಸಹೋದರ ಸಂಬಂಧಿ ರವಿ ನೆಲ್ಲೂರು(35) ಹಾಗೂ ಈರಣ್ಣ ಉಪ್ಪಾರ (38) ಎಂದು ಮೃತ ದುರ್ದೈವಿಯನ್ನು ಗುರುತಿಸಲಾಗಿದೆ.
ಗೋವಾ, ಹುಬ್ಬಳ್ಳಿ, ಗದಗ ಮಾರ್ಗವಾಗಿ ಹೊಸಪೇಟೆ ಹೊರಟಿದ್ದ ಖಾಸಗಿ ಬಸ್ ಇದಾಗಿದ್ದು ಕೊಪ್ಪಳ ಕಡೆಯಿಂದ ಗದಗ ಮಾರ್ಗವಾಗಿ ಬಂಕಾಪೂರ ಕಡೆಗೆ ಹೊರಟಿದ್ದ ಕಾರ ಡಿವೈಡರ್ ದಾಟಿಕೊಂಡು ಎದುರು ಬರುವ ಬಸ್ ಗೆ ಡಿಕ್ಕಿ ಹೊಡೆದು ಅಪಘಾತ ಸಂಭವಿಸಿದೆ.
ಸ್ಥಳಕ್ಕೆ ಗದಗ ಗ್ರಾಮೀಣ ಪೊಲೀಸರು ಭೇಟಿ ನೀಡಿದ್ದು ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

