ನವಲಗುಂದ: FID ಮಾಡಿಸಿಕೊಳ್ಳದೆ ಬಾಕಿ ಉಳಿದ ರೈತರು ಆದಷ್ಟು ಬೇಗನೆ ಕೃಷಿ ಹಾಗೂ ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಸಂಪರ್ಕಿಸಿ FID ಮಾಡಿಸಿಕೊಳ್ಳಬೇಕೆಂದು ಶಾಸಕ ಎನ್. ಎಚ್ ಕೋನರಡ್ಡಿ ತಿಳಿಸಿದರು..
ಪಟ್ಟಣದಲ್ಲಿ ಅಧಿಕಾರಿಗಳೊಂದಿಗೆ ಸಭೆ ನಡೆಸಿ ಮಾತನಾಡಿದ ಅವರು ಸರ್ಕಾರದ ನಿರ್ದೇಶನದ ಪ್ರಕಾರ ತಂತ್ರಾಂಶದಲ್ಲಿ ದಾಖಲು ಮಾಡುವುದು ಕಡ್ಡಾಯವಾಗಿರುವದರಿಂದ ತಂತ್ರಾಂಶದಲ್ಲಿ ಕೂಡಲೇ ದಾಖಲು ಮಾಡಬೇಕಾಗಿರುತ್ತದೆ, ನವಲಗುಂದ ತಾಲೂಕಿನಲ್ಲಿ ಅಂದಾಜು 5243, ಅಣ್ಣಿಗೇರಿ ತಾಲೂಕಿನಲ್ಲಿ 3935 ಹಾಗೂ ಹುಬ್ಬಳ್ಳಿ ಗ್ರಾಮೀಣ ತಾಲೂಕಿನಲ್ಲಿ 2016 ರೈತರ ಒಟ್ಟು 11194 ಖಾತೆಗಳಿಗೆ FID ಆಗಿರುವುದಿಲ್ಲ, ಅಂತಹ ರೈತರು ಹೆಚ್ಚಿನ ಮಾಹಿತಿಗಾಗಿ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಲ್ಲಿ ಸಂಪರ್ಕಿಸಿ FID ಮಾಡಿಸಿಕೊಂಡರೆ ಮಾತ್ರ ಬೆಳೆ ಪರಿಹಾರ ಬರುತ್ತದೆ. ಆದಕಾರಣ ಎಲ್ಲ ರೈತರು ತಪ್ಪದೆ ಕಡ್ಡಾಯವಾಗಿ FID ಮಾಡಿಸಿಕೊಳ್ಳಬೇಕೆಂದು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಅಪರ ಜಿಲ್ಲಾಧಿಕಾರಿ ಸಿ.ಡಿ. ಗೀತಾ, ತಹಶೀಲ್ದಾರ ಸುಧೀರ ಸಾವಕಾರ, ಹಿರಿಯ ಕೃಷಿ ನಿರ್ದೇಶಕ, ರವಿಂದ್ರಗೌಡ ಪಾಟೀಲ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.
