ತಾಲೂಕುಮಟ್ಟದ 2ನೇ ಕೆಡಿಪಿ ಸಾಮಾನ್ಯಸಭೆಯಲ್ಲಿ ಕೃಷಿಇಲಾಖೆಯ ಎಡಿ ಗರ್ಜೆಪ್ಪ ಹೇಳಿಕೆ

Samagraphrabha
2 Min Read

ಕುರುಗೋಡು ತಾಲೂಕಿಗೆ 250 ಮೆಟ್ರಿಕ್‍ಟನ್ ಯೂರಿಯಾಬಂದಿದೆ ರೈತರು ಆತಂಕಪಡಬೇಡಿ
ಕುರುಗೋಡು.ಸೆ.11 ಮುಂಗಾರು ಹಂಗಾಮಿನಲ್ಲಿ ರೈತರ ಬೆಳೆಗಳಿಗೆ ಅನುಗುಣವಾಗಿ ಸರ್ಕಾರದಿಂದ ಕುರುಗೋಡು ತಾಲೂಕಿಗೆ 250ಮೆಟ್ರಿಕ್‍ಟನ್ ಯೂರಿಯಾ, ರಸಗೊಬ್ಬರವು ಪೂರೈಕೆಯಾಗಿದ್ದು, ಅದರಲ್ಲೂ ಗೊಬ್ಬರಅಂಗಡಿಗಳಿಗೆ ಮತ್ತು ಸಹಕಾರಸಂಘಗಳ ಮೂಲಕ ರೈತರಿಗೆ ಪೂರೈಕೆಯಾಗುತ್ತಿದೆ. ಇದರಿಂದ ತಾಲೂಕಿನ ಎಲ್ಲಾ ರೈತರು ಯಾವುದೇ ರೀತಿಯ ಆತಂಕ ಪಡಬಾರದು ಎಂದು ಕೃಷಿ ಇಲಾಖೆಯ ಕುರುಗೋಡು ಸಹಾಯಕನಿರ್ದೆಶಕ ಗರ್ಜೆಪ್ಪ ಹೇಳಿದರು.
ಅವರು ಪಟ್ಟಣದ ತಾಲೂಕುಪಂಚಾಯಿತಿ ಕಾರ್ಯಾಲಯದಲ್ಲಿ ಕರೆಯಲಾಗಿದ್ದ ತಾಲೂಕುಮಟ್ಟದ 2ನೇ ಕೆಡಿಪಿ ಸಾಮಾನ್ಯಸಭೆಯಲ್ಲಿ ಮಾತನಾಡಿದ ಅವರು, ತಾಲೂಕಿನ ಎಲ್ಲಾ ಗೊಬ್ಬರಅಂಗಡಿ ಹಾಗು ಸಹಕಾರಸಂಘಗಳಿಗೆ ಪೂರೈಕೆಯಾಗಿದೆ. ರೈತರು ಯೂರಿಯಾಗೊಬ್ಬರವನ್ನು ಪಡೆಯಬೇಕೆಂದು ತಿಳಿಸಿದರು.
ಜಿಲ್ಲಾ ಪಂಚಾಯಿತಿ ಯೋಜನಾಧಿಕಾರಿ ವಾಗೀಶಶಿವಾಚಾರ್ಯರು ಅಧ್ಯಕ್ಷತೆವಹಿಸಿ ಮಾತನಾಡಿದ ಅವರು, ಕುರುಗೋಡು ಕ್ಷೇತ್ರಶಿಕ್ಷಣಾಧಿಕಾರಿಗಳ ವ್ಯಾಪ್ತಿಯಲ್ಲಿ ಶಾಲಾಮಕ್ಕಳಿಗೆ ಶೂ, ಬ್ಯಾಗ್, ಸಮವಸ್ರಬಟ್ಟೆಗಳನ್ನು ನೀಡಿರಿ, ಯಾವುದೇ ರೀತಿಯಲ್ಲಿ ವಿಲಂಬನೀತಿ ತೋರಬಾರದು ಎಂದು ಬಿಇಒ ಅಧಿಕಾರಿಗೆ ಸೂಚನೆ ನೀಡಿದರು.
ಮಹಿಳಾಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಬಳ್ಳಾರಿ ಗ್ರಾಮಾಂತರ ಸಿಡಿಪಿಒ ಮೋಹನಕುಮಾರಿಯರು ಪ್ರಸ್ತಾವಿಕವಾಗಿ ಮಾತನಾಡಿ, ತಾಲೂಕಿನಾಧ್ಯಂತ ಕೆಲವು ಅಂಗನವಾಡಿ ಕೇಂದ್ರಗಳಿಗೆ ಸ್ಥಳದ ಕೊರತೆ ಇದೆ. ಈ ಕೊರತೆಯನ್ನು ಆದಷ್ಟು ಬೇಗ ನಿವಾರಿಸಬೇಕೆಂದು ಸಬೆಯಲ್ಲಿ ಮನವಿಮಾಡಿದರು. ತಾಲೂಕು ಆರೋಗ್ಯಅಧಿಕಾರಿ ಮಂಜುನಾಥಜವಳಿಯವರು ಮಾತನಾಡಿ, ತಾಲೂಕಿನಾಧ್ಯಂತ 2 ಡೆಂಘೆ ಪ್ರಕರಣಗಳು ಸಂಬವಿಸಿದ್ದು, ಅವರು ಚೇತರಿಗೆ ಹಂತದಲ್ಲಿವೆ. ಅಲ್ಲದೆ ವೈರಲ್‍ಪಿವರ್ ಸಂಭವಿಸಿವೆ. ಇದಕ್ಕೆ ಸೂಕ್ತ ಕ್ರಮ ಜರುಗಿಸಲಾಗುವುದು ಎಂದು ಭರವಸೆ ನೀಡಿದರು.
ಜಿಲ್ಲಾಪಂಚಾಯಿತಿ ಯೋಜನಾಧಿಕಾರಿ ವಾಗೀಶ್‍ಶಿವಾಚಾರ್ಯ ಅವರು ಮಾತನಾಡಿ, ತಾಲೂಕಿನಲ್ಲಿರುವ ಅಂಗನವಾಡಿಕೇಂದ್ರಗಳು ಹಾಗು ಶಾಲಾಕಟ್ಟಡಗಳಿಗೆ ಗ್ರಾಮಪಂಚಾಯಿತಿ ಮಟ್ಟದಲ್ಲಿ ಸ್ವಂತ ಕಟ್ಟಡಕ್ಕಾಗಿ ಗ್ರಾಪಂ ಕಛೇರಿಗೆ ತೆರಳಿ ಅರ್ಜಿಸಲ್ಲಿಸಿ ಸ್ವಂತಕಟ್ಟಡಕ್ಕಾಗಿ ನೈನ್‍ಲೆವೆನ್ ಪಾರ್ಮನ್ನು ಮಾಡಿಕೊಳ್ಳಲು ಬಿಇಒ ಮತ್ತು ಸಿಡಿಪಿಒ ಅಧಿಕಾರಿಗಳಿಗೆ ಸೂಚನೆ ನೀಡಿದರು.ಜೊತೆಗೆ ನರೇಗಾ ಯೋಜನೆಅಡಿಯಲ್ಲಿಡ್ರಾಗನ್ ಪುಡ್ ಕಾಮಗಾರಿಗಳನು ಮಾಡಲು ತೋಟಗಾರಿಕೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ನಂತರ ಇತರೆ ಇಲಾಖೆಗಳ ಪ್ರಗತಿವರದಿಯನ್ನು ಆಯಾ ಇಲಾಖೆಗೆ ಸಂಬಂದಿಸಿದ ಅಧಿಕಾರಿಗಳು ಮಂಡಿಸಿದರು.
ಕುರುಗೋಡು ತಾಪಂ ಕಾರ್ಯನಿರ್ವಾಹಕ ಅಧಿಕಾರಿ ನಿರ್ಮಲ, ನರೇಗಾ ಎಡಿ ಶಿವರಾಮರೆಡ್ಡಿ, ತಾಪಂ. ಪಂಚಾಯತ್‍ರಾಜ್ ಸಹಾಯಕನಿರ್ದೆಶಕ ಅನಿಲ್, ಬಸ್‍ಡಿಪೋಮ್ಯಾನೇಜರ್ ತಿರುಮಲೇಶ, ವಸತಿಲಯದ ಮೇಲ್ವಿಚಾರಕಿ ಎ.ಕಾಳಮ್ಮ, ಸೇರಿದಂತೆ ತಾಲೂಕಿನ ಎಲ್ಲಾ ಗ್ರಾಪಂ. ಪಿಡಿಒಗಳು, ವಿವಿದ ಇಲಾಖೆಗಳ ತಾಲೂಕುಮಟ್ಟದ ಅಧಿಕಾರಿಗಳು ಭಾಗವಹಿಸಿದ್ದರು.

Share this Article