ನವಲಗುಂದ: ರಾಜ್ಯ ಸರ್ಕಾರದ ಮಹತ್ವಾಕಾಂಕ್ಷೆ ಯೋಜನೆಯಡಿ 01 ರಿಂದ 10ನೇ ತರಗತಿಯ ವಿದ್ಯಾರ್ಥಿಗಳಿಗೆ ಒಂದು ಜೊತೆ ಶೂ,ಎರಡು ಜೊತೆ ಸಾಕ್ಸಗಳನ್ನು ವಿತರಣೆಗೆ ಸರ್ಕಾರ ಸಮರ್ಪಕ ಅನುದಾನ ಜಮಾ ಮಾಡುತ್ತಿಲ್ಲ ಎಂದು ಆರ್.ಟಿ.ಐ ಕಾರ್ಯಕರ್ತ ಮಾಬುಸಾಬ ಯರಗುಪ್ಪಿ ಆಕ್ರೋಶ ವ್ಯಕ್ತಪಡಿಸಿದರು..
ಈ ಕುರಿತು ತಹಶೀಲ್ದಾರ ಸುಧೀರ ಸಾಹುಕಾರ ಅವರ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿ ಮಾತನಾಡಿದ ಅವರು ಪ್ರತಿ ವರ್ಷ ಹಂಚಿಕೆ ಮಾಡಲು ಆಯಾ ಶಾಲೆಯಲ್ಲಿ ವ್ಯಾಸಾಂಗ ಮಾಡುತ್ತಿರುವಂತಹ ವಿದ್ಯಾರ್ಥಿಗಳಿಗೆ ಶೂ, ಸಾಕ್ಸ್ ವಿತರಣೆಗಾಗಿ ಶಿಕ್ಷಕರ ಮತ್ತು ಎಸ್.ಡಿ.ಎಂ.ಸಿ ಅಧ್ಯಕ್ಷರ ಜಂಟಿ ಖಾತೆಗೆ ಒಂದೇ ಬಾರಿ ಮಕ್ಕಳ ಸಂಖ್ಯೆಯ ಅನುಸಾರ ಅನುದಾನ ಜಮಾ ಮಾಡುತ್ತಿದ್ದರು. ಆದರೆ ಈ 2025-26ನೇ ಸಾಲಿನಲ್ಲಿ ನೇರವಾಗಿ ಸರ್ಕಾರ ಮಟ್ಟದ ಅಧಿಕಾರಿಗಳಿಂದಲೇ ಅನುದಾನ ಜಮಾ ಮಾಡುತ್ತಿದ್ದು ಅದು ಶಾಲೆಯಲ್ಲಿರುವಂತಹ ಮಕ್ಕಳ ಸಂಖ್ಯೆಗೆ ಅನುಸಾರ ಅನುದಾನ ಜಮಾ ಮಾಡುತ್ತಿಲ್ಲ, ಒಮ್ಮೆ 10 ಸಾವಿರ ಮಾಡಿದರೆ ಒಮ್ಮೆ 06 ಸಾವಿರ 09 ಸಾವಿರ ರೂಪಾಯಿ ಹೀಗೆ ತಮಗೆ ಅನಕೂಲ ಆದ ಹಾಗೆ ಅನುದಾನ ಜಮಾ ಮಾಡುತ್ತಿದ್ದು ಇದು ಆಯಾ ಶಾಲೆಯ ಮುಖ್ಯ ಶಿಕ್ಷಕರಿಗೆ ಹಾಗೂ ಎಸ್.ಡಿ.ಎಂಸಿಯವರಿಗೆ ತಲೆನೋವಾಗಿ ಪರಿಣಮಿಸುತ್ತದೆ ಎಂದರು…
ಕರವೇ ಅಧ್ಯಕ್ಷ ಸಿರಾಜುದ್ದಿನ ಧಾರವಾಡ ಮಾತನಾಡಿ ಈ ಶೈಕ್ಷಣಿಕ ವರ್ಷದ ಅರ್ಧ ವರ್ಷ ಮುಗಿದಂತಾಯಿತು, ಇದೇ ತಿಂಗಳು ದಸರಾ ರಜೆ ಬೇರೆ ಕೂಡುತ್ತಾರೆ ಮಕ್ಕಳಿಗೆ ಇನ್ನೂ ಶೂ, ಸಾಕ್ಸ್ ಹಂಚಿಕೆ ಮಾಡಿಲ್ಲಾ ಆ ಮಕ್ಕಳ ಪಾಲಕರಿಗೆ ಉತ್ತರ ಕೂಡಲು ಶಿಕ್ಷಕರಿಗೆ ಬಹಳ ಸಮಸ್ಯೆಯಾಗುತ್ತಿದೆ, ಸರ್ಕಾರಿ ಶಾಲೆಯ ಮಕ್ಕಳಿಗೆ ಸರ್ಕಾರದಿಂದ ಶೂ, ಸಾಕ್ಸ್ಗಾಗಿ ಶಾಲೆಯಲ್ಲಿರುವಂತಹ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಅನುದಾನ ಹಾಕಲು ಆಗುತ್ತಿಲ್ಲ ಎನ್ನುವುದೇ ದುರಂತ, ಈ ಕೂಡಲೇ ಉಳಿದ ಅನುದಾನ ಬಿಡುಗಡೆ ಮಾಡಿ ಪುಣ್ಯ ಕಟ್ಟಿಕೂಳ್ಳಿ ಎಂದರು..
ಈ ಸಂದರ್ಭದಲ್ಲಿ ಮಹಮ್ಮದಲಿ ಮಿರ್ಜಿ, ಬಶೀರಅಹ್ಮದ ಹುನಗುಂದ, ನಿಂಗಪ್ಪ ಕುಂಬಾರ ಉಪಸ್ಥಿತರಿದ್ದರು.

