ಸಾಮಾಜಿಕ ಕಾರ್ಯಕ್ರಮ ಆಯೋಜನೆಯಿಂದ ಉತ್ತಮ ಕಾರ್ಯ ನಿರ್ವಹಿಸುತ್ತಿರುವದು ಶ್ಲಾಘನೀಯ : ಶುಭಂ ಶುಕ್ಲಾ ಸಮಗ್ರ ಪ್ರಭ ಸುದ್ದಿ ಚಂದ್ರಶೇಖರ ಅಕ್ಕಿ
ಹಾವೇರಿ : ಸವಣೂರ ಪಟ್ಟಣದ ತಾಲೂಕು ಕ್ರೀಡಾಂಗಣದಲ್ಲಿ ಮಂಗಳವಾರ ಜೆಸಿಐ ಸಪ್ತಾಹಕ್ಕೆ ಚಾಲನಾ ಕಾರ್ಯಕ್ರಮ ನಡೆಯಿತು.
ಜೆಸಿಐ ಸ್ಥಳೀಯ ಘಟಕ ನಿರಂತರ ಸಾಮಾಜಿಕ ಕಾರ್ಯಕ್ರಮ ಆಯೋಜನೆಯೊಂದಿಗೆ ಉತ್ತಮ ಕಾರ್ಯ ನಿರ್ವಹಿಸುತ್ತಿರುವದು ಶ್ಲಾಘನೀಯವಾಗಿದೆ ಎಂದು ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ ಹೇಳಿದರು.
ಜೆಸಿಐ ಧ್ವಜಾರೋಹಣ ಮಾಡುವ ಮೂಲಕ ಜೆಸಿಐ ಸಪ್ತಾಹಕ್ಕೆ ಚಾಲನೆ ನೀಡಿ ಮಾತನಾಡಿದರು.
೨೦೨೫ರ ಅವಧಿಯಲ್ಲಿ ವಿಧವಾ ಸಹೋದರಿಯರಿಗೆ ಉಚಿತ ಆರೀವರ್ಕ್ ತರಬೇತಿ ಶಿಬಿರ, ವಿದ್ಯಾರ್ಥಿಗಳಿಗೆ ಪರೀಕ್ಷಾ ಪೂರ್ವ ಸಿದ್ಧತೆ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಸೇರಿದಂತೆ ಸಾಮಾನ್ಯ ಜನರಿಗೆ ಅತ್ಯಂತ ಅವಶ್ಯವಾಗಿರುವ ಕಾರ್ಯವನ್ನು ಕೈಗೊಳ್ಳುತ್ತಿರುವದು ಸಂತಸ ತಂದಿದೆ ಎಂದು ಹೇಳಿದರು.
ಜೆಸಿಐ ಸಪ್ತಾಹದ ಅಂಗವಾಗಿ ಮುಂದಿನ ಒಂದು ವಾರಗಳ ಕಾಲ ಕೈಗೊಳ್ಳುತ್ತಿರುವ ವಿವಿಧ ಸಾಮಾಜಿಕ ಕಾರ್ಯ ಯಶಸ್ವಿಯಾಗಲಿ ಎಂದು ಶುಭ ಹಾರೈಸಿದರು.

ತಹಸೀಲ್ದಾರ್ ರವಿಕುಮಾರ ಕೊರವರ ಸನ್ಮಾನ ಸ್ವೀಕರಿಸಿ ಮಾತನಾಡಿ, ಜೆಸಿಐ ಅತ್ಯಂತ ಕ್ರೀಯಾಶೀಲ ಸಂಸ್ಥೆಯಾಗಿರುವದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಬಿಇಒ ಎಂ.ಎಫ್.ಬಾರ್ಕಿ ಮಾತನಾಡಿ, ಕಳೆದ ಸಾಲಿನಲ್ಲಿ ಸವಣೂರ ತಾಲೂಕು ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜಿಲ್ಲೆಗೆ ಎರಡನೇ ಸ್ಥಾನ ಬರುವಲ್ಲಿ ಜೆಸಿಐ ಸಂಸ್ಥೆಯ ಪಾತ್ರ ಪ್ರಮುಖವಾಗಿದೆ ವಿದ್ಯಾರ್ಥಿಗಳಿಗೆ ನಿರಂತರ ತರಬೇತಿ ಕೈಗೊಂಡಿದ್ದನ್ನು ನೆನೆದರು.
ಜೆಸಿಐ ವಲಯ ರಿಜನ್-ಎ ಉಪಾಧ್ಯಕ್ಷ ಜೆಎಫ್‌ಡಿ ಮಧುಸೂದನ ನಾವಡಾ ಮಾತನಾಡಿ, ವಲಯದಲ್ಲಿ ಜೆಸಿಐ ನಮ್ಮ ಸವಣೂರು ಘಟಕದ ಉತ್ತಮ ಸ್ಥಾನವನ್ನು ಹೊಂದುವ ಮೂಲಕ ಜನರಿಗೆ ಉಪಯುಕ್ತ ಕಾರ್ಯಕ್ರಮ ನೀಡುತ್ತಿದೆ ಎಂದರು.
ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷೆ ತೇಜಸ್ವಿನಿ ಕೊಂಡಿ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಜೆಸಿಐ ಸಪ್ತಾಹ ಕಾರ್ಯಕ್ರಮ ಚಾಲನೆ ಸಮಾರಂಭದಲ್ಲಿ ಉಪ ವಿಭಾಗಾಧಿಕಾರಿ ಶುಭಂ ಶುಕ್ಲಾ, ತಹಸೀಲ್ದಾರ್ ರವಿಕುಮಾರ ಕೊರವರ, ಬಿಇಒ ಎಂ.ಎಫ್.ಬಾರ್ಕಿ, ಜೆಸಿಐ ವಲಯ ರಿಜನ್-ಎ ಉಪಾಧ್ಯಕ್ಷ ಜೆಎಫ್‌ಡಿ ಮಧುಸೂದನ ನಾವಡಾ, ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಸುಭಾಸ ಮಜ್ಜಗಿ, ಪುರಸಭೆ ಮುಖ್ಯಾಧಿಕಾರಿ ಎನ್.ಎಂ.ಹಾದಿಮನಿ, ಪಿಇಒ ಎಸ್. ವಿ. ಬಳಿಗಾರ, ಲಲಿತಾದೇವಿ ಸಿಂಧೂರ ಸರ್ಕಾರಿ ಪದವಿ ಕಾಲೇಜ್ ಪ್ರಾಚಾರ್ಯ ಡಾ. ಪ್ರವೀಣ ಆನಂದಕಂದ, ದೈಹಿಕ ಶಿಕ್ಷಣ ಶಿಕ್ಷಕ ಐ.ಎಸ್.ಮುದಗಲ್ ಅವರನ್ನು ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ
ತಾಲೂಕು ಗ್ಯಾರಂಟಿ ಯೋಜನಾ ಸಮಿತಿ ಅಧ್ಯಕ್ಷ ಸುಭಾಸ ಮಜ್ಜಗಿ, ಪುರಸಭೆ ಮುಖ್ಯಾಧಿಕಾರಿ ಎನ್.ಎಂ.ಹಾದಿಮನಿ, ಪಿಇಒ ಎಸ್. ವಿ. ಬಳಿಗಾರ, ಲಲಿತಾದೇವಿ ಸಿಂಧೂರ ಸರ್ಕಾರಿ ಪದವಿ ಕಾಲೇಜ್ ಪ್ರಾಚಾರ್ಯ ಡಾ. ಪ್ರವೀಣ ಆನಂದಕಂದ, ಎನ್‌ಎಸ್‌ಎಸ್ ಘಟಕಾಧಿಕಾರಿ ರವಿಶಂಕರ ಗಡೆಪ್ಪನವರ, ದೈಹಿಕ ಶಿಕ್ಷಣ ಶಿಕ್ಷಕ ಐ.ಎಸ್.ಮುದಗಲ್, ಜೆಸಿಐ ಪದಾಧಿಕಾರಿಗಳಾದ ಯೋಗೇಂದ್ರ ಜಂಬಗಿ, ಬಸವರಾಜ ಚಳ್ಳಾಳ, ವಿದ್ಯಾಧರ ಕುತನಿ, ರಮೇಶ ಅರಗೋಳ, ಡಾ. ಪರಶುರಾಮ ಹೊಳಲ, ಸುನಂದಾ ಚಿನ್ನಾಪೂರ, ಶ್ರೀಪಾದಗೌಡ ಪಾಟೀಲ, ಬಸವನಗೌಡ ಪಾಟೀಲ, ಮಧುಕರ ಜಾಲಿಹಾಳ, ಶಂಕ್ರಯ್ಯ ಹಿರೇಮಠ ಹಾಗೂ ಇತರರು ಪಾಲ್ಗೊಂಡಿದ್ದರು. ಕಾರ್ಯದರ್ಶಿಗಳಾದ ಹರೀಶ ಹಿರಳ್ಳಿ, ಪ್ರೇಮಾ ಹುಲ್ಲತ್ತಿ, ಪುಷ್ಪಾ ಬತ್ತಿ ಹಾಗೂ ಆನಂದ ಮತ್ತಿಗಟ್ಟಿ ಉಪಸ್ಥಿತಿತರಿದ್ದರು.

