ದಾನಗಳಲ್ಲಿ ಶ್ರೆಷ್ಠರಾದ ಲಿಂಗರಾಜರ ಸೇವೆ ಅವಿಸ್ಮರಣೀಯವಾದದ್ದು – ಡಾ. ಬಿ ಜಿ ಜವಳಿ

Samagraphrabha
2 Min Read

ಮುಂಡರಗಿ
ಶಿರಸಂಗಿ ಲಿಂಗರಾಜರು ಶಿಕ್ಷಣ,ಕೃಷಿಗೆ ಅಪಾರವಾದ ಕೊಡುಗೆ ನೀಡಿ ಅಸಂಖ್ಯಾತ ಮಕ್ಕಳಿಗೆ ಬೆಳಕಾದವರು ಎಂದು ಡಾ.ಬಿ ಜಿ ಜವಳಿ ಹೆಳಿದರು.

ಅವರು ಕನ್ನಡ ಸಾಹಿತ್ಯ ಪರಿಷತ್ತು ತಾಲೂಕ ಘಟಕ ಮುಂಡರಗಿ,ಜ ಅ ಪದವಿ ಪೂರ್ವ ಕಾಲೇಜ್ ಮುಂಡರಗಿ,ತ್ಯಾಗವೀರ ಶಿರಸಂಗಿ ಲಿಂಗರಾಜ್ ಸಂಸ್ಥೆ ಮುಂಡರಗಿ ಇವುಗಳ ಆಶ್ರಯದಲ್ಲಿ ನಡೆದ ಶಿರಸಂಗಿ ಲಿಂಗರಾಜರ ಜೀವನ ಸಾಧನೆ ಕುರಿತು ನಡೆದ ದತ್ತಿ ಉಪನ್ಯಾಸ ಕಾರ್ಯಕ್ರಮ ಉಧ್ಘಾಟಿಸಿದ ವಿದ್ಯಾ ಸಮಿತಿ ಆಡಳಿತಾಧಿಕಾರಿ ಡಾ.ಬಿ ಜಿ ಜವಳಿ ಮಾತನಾಡಿ ಶಿರಸಂಗಿ ಲಿಂಗರಾಜರ ಮಾಡಿದ ಸೇವೆ ಎಲ್ಲಾ ರಂಗಗಳಲ್ಲಿ ಇಂದಿಗೂ ಹೆಸರಾಗಿವೆ,
ಕರ್ನಾಟಕ ಲಿಂಗಾಯತ ಸಂಸ್ಥೆ ಕಟ್ಟಿದವರು, ಅಖಿಲ ಭಾರತ ವೀರಶೈವ ಮಹಾಸಭಾ ಮೊದಲ ಎರಡನೆ ಅಧ್ಯಕ್ಷರಾಗಿ ಸೇವೆ ಮಾಡಿದ್ದಾರೆ ಎಂದರು.

ಲಿಂಗರಾಜ ದೇಸಾಯಿ ರವರ ಕುರಿತು ಉಪನ್ಯಾಸ ನಿಡಿದ ಆರ್ ಆರ್ ಇನಾಂದಾರ ಮಾತನಾಡಿ ೧೯ ನೇ ಶತಮಾನದಲ್ಲಿ ತಮ್ಮ ಸಕಲ ಆಸ್ತಿಯನ್ನು ದಾನ ಮಾಡಿ ತ್ಯಾಗವೀರ ಏನಿಸಿಕೊಂಡ ಏಕೈಕ ವ್ಯಕ್ತಿ ಲಿಂಗರಾಜರು, ದತ್ತಕ ಪುತ್ರನಾಗಿ ಮುಂದೆ ನವಲಗುಂದ ಲಿಂಗರಾಜ ಸಂಸ್ಥಾನ ಜವಾಬ್ದಾರಿ ವಹಿಸಿ ಸಂಸ್ಥಾನದ ೨೭ ನೇ ವಾರಸುದಾರರಾದವರು, ಜನಮೆಚ್ಚುವ ಹಾಗೆ ಆಡಳಿತ ನಡೆಸಿದವರು, ದೇಶದ ಅತ್ಯುನ್ನತ ಕೆ ಎಲ್ ಇ ಸಂಸ್ಥೆ ಕಟ್ಟಿದವರು, ಇವರ ಜೀವನದೂದ್ದಕ್ಕೂ ಸೇವೆ ಸಂಸ್ಕಾರಯುತ ಜೀವನ ನಡೆಸಿದವರು ತಮ್ಮ ಮೃತ್ಯು ಪತ್ರದಲ್ಲಿ ತಮ್ಮ ಸಂಪೂರ್ಣ ಆಸ್ತಿಯನ್ನು ಲಿಂಗಾಯತ ಸಂಸ್ಥೆಗೆ ನಿಡಿ ಅವರ ಬಾಳಿಗೆ ಇಂದಿಗೂ ಬೆಳಕಾದವರು ಲಿಂಗರಾಜರು ಎಂದರು.

ಅಧ್ಯಕ್ಷತೆ ವಹಿಸಿದ ಎಮ್ ಜಿ ಗಚ್ಚಣ್ಣವರ ಮಾತನಾಡಿ ಲಿಂಗರಾಜರು ತಮ್ಮ ಆಡಳಿತದಲ್ಲಿ ಬಾಲ್ಯವಿವಾಹ,ವೃದ್ಯಾಪ ವಿವಾಹ ವಿರೋದಿಸಿದವರು, ಅವರ ಬಹುದೊಡ್ಡ ಆಸೆ ಎಂದರೆ ಯುವ ಶಕ್ತಿಗೆ ನೀತಿ ಪಾಠ ಇರಬೇಕು ಎಂದು ವೀರಶೈವ ಪಾಠಶಾಲೆ ತೆರದವರು,ಲಿಂಗರಾಜರ ಮಾರ್ಗದರ್ಶನದಲ್ಲಿ ಅನೇಕ ಲಿಂಗಾಯತ ಸಂಸ್ಥೆಗಳು ಹುಟ್ಟಿಕೊಂಡವು, ಕೇರೆಗಳ ನಿರ್ಮಾಣ,ಕೃಷಿಗೆ,ಶಿಕ್ಷಣಕ್ಕೆ ಅಪಾರವಾದ ಸೇವೆ ಮಾಡಿದ್ದಾರೆ, ತಮ್ಮ ಮೃತ್ಯುಪತ್ರವನ್ನು ಡಿ ಸಿ ಯವರಿಗೆ ನಿಡಿದ ವಿಷಯವನ್ನು ತಮ್ಮ ಪ್ರಾಣ ಸ್ನೇಹಿತ ಅರಟಾಳ ರುದ್ರಗೌಡ ರವರಿಗೆ ತಿಳಿಸಿ ನಾನು ಸತ್ತಮೇಲೆ ಆ ವಿಲ್ ನ್ನು ಎಲ್ಲರಿಗೂ ತಿಳಿಸಬೇಕು ಎಂದರು.

- Advertisement -
Ad image

ಪ್ರಾಸ್ತಾವಿಕವಾಗಿ ಕಸಾಪ ಕಾರ್ಯದರ್ಶಿ ಮಂಜುನಾಥ ಮುಧೋಳ ಮಾತನಾಡಿ ಕನ್ನಡ ನಾಡು ನುಡಿಗಾಗಿ ಸೇವೆ ಮಾಡಿದ ಮಹನಿಯರನ್ನು ಇಂದಿನ ಯುವ ಸಮುಹಕ್ಕೆ ಮುಟ್ಟಿಸುವ ಸಲುವಾಗಿ ದತ್ತಿ ಉಪನ್ಯಾಸಗಳನ್ನು ನಿಡುವ ಮೂಲಕ ಅವರ ಆದರ್ಶ ಜೀವನ ತಿಳಿಸುವ ಕಾರ್ಯ ಕಸಾಪ ಮಾಡುತ್ತಿದೆ. ಕಾರ್ಯಕ್ರಮ ನಡೆಯಲು ಸಹಕಾರ ನಿಡಿದ ಜ ಅ ಕಾಲೇಜ್ ಪ್ರಾಚಾರ್ಯರಿಗೆ , ದತ್ತಿ ನಿಡಿದ ತ್ಯಾಗವೀರ ಲಿಂಗರಾಜ ಟ್ರಸ್ಟ್ ತಾಲೂಕ ಘಟಕಕ್ಕೆ ಧನ್ಯವಾದಗಳು ಸಲ್ಲಿಸಿದರು.
ಸರ್ವರನ್ನೂ ಪ್ರಾಚಾರ್ಯ ಪಿ ಎಮ್ ಕಲ್ಲನಗೌಡ ಸ್ವಾಗತಿಸಿದರು.
ಕಸಾಪ ಕಾರ್ಯಕಾರಣಿ ಸದಸ್ಯ ರಮೇಶಗೌಡ ಪಾಟೀಲ ಪ್ರಾರ್ಥಿಸಿದರು.
ಈ ಸಂದರ್ಭದಲ್ಲಿ ಅತಿಥಿಗಳಾಗಿ ಬಿ ಸಿ ನಾಡಗೌಡ, ಕಸಾಪ ನಿಕಟ ಪೂರ್ವ ಅಧ್ಯಕ್ಷ ಎಸ್ ಬಿ ಹಿರೇಮಠ, ಸಿ ಕೆ ಗಣಪ್ಪನವರ, ಕೃಷ್ಣಮೂರ್ತಿ ಸಾವುಕಾರ, ಕಾಲೆಜ್ ಉಪನ್ಯಾಸಕರು ಸಿಬ್ಬಂದಿ ವರ್ಗದವರು,ಕಸಾಪ ಕಾರ್ಯಕಾರಣಿ ಸದಸ್ಯರು ಇದ್ದರು
ಉಪನ್ಯಾಸಕ ಕೆ ಎ ಬೇಲೆರಿ ನಿರೂಪಿಸಿದರು
ಕಸಾಪ ಕಾರ್ಯಕಾರಣಿ ಸದಸ್ಯ ಎಮ್ ಐ ಮುಲ್ಲಾ ವಂದಿಸಿದರು.

Share this Article