ಸಾಧನೆ ಗೈಯಲು ಯುವ ಜನತೆಗೆ ತರಬೇತಿ ಅವಶ್ಯ : ಜೆಸಿಐ ಅಧ್ಯಕ್ಷೆ ತೇಜಸ್ವಿನಿ ಕೊಂಡಿ

Samagraphrabha
1 Min Read

ಸವಣೂರ : ಪಟ್ಟಣದ ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ಪದವಿ ಕಾಲೇಜಿನಲ್ಲಿ ಜೆಸಿಐ ಸಪ್ತಾಹದ ಅಂಗವಾಗಿ ಜೆಸಿಐ ನಮ್ಮ ಸವಣೂರು ವತಿಯಿಂದ ಬುಧವಾರ ಏರ್ಪಡಿಸಿದ್ದ ಪದವಿ ವಿದ್ಯಾರ್ಥಿಗಳಿಗೆ ಮತ್ತು ಯುವ ಜನತೆಗೆ ಆರ್ಥಿಕ ಸ್ವಾತಂತ್ರ್ಯ ಹಾಗೂ ಗ್ರಾಹಕ ಹಕ್ಕುಗಳ ಕುರಿತು ತರಬೇತಿ ಕಾರ್ಯಾಗಾರ ನಡೆಯಿತು.

ಆದಾಯ ಹೆಚ್ಚಿಸಿ ಉತ್ತಮ ಜೀವನ ನಿರ್ವಹಣೆಯೊಂದಿಗೆ ಉನ್ನತ ಸಾಧನೆಗೈಯಲು ಪ್ರತಿಯೊಬ್ಬರಿಗೂ ತರಬೇತಿ ಅವಶ್ಯವಾಗಿದೆ ಅಂತಹ ತರಬೇತಿಯನ್ನು ಜೆಸಿಐ ಸಂಸ್ಥೆ ಉಚಿತವಾಗಿ ವಿದ್ಯಾರ್ಥಿಗಳಿಗೆ ನೀಡುತ್ತಿದೆ ಎಂದು ಜೆಸಿಐ ನಮ್ಮ ಸವಣೂರು ಘಟಕದ ಅಧ್ಯಕ್ಷೆ ತೇಜಸ್ವಿನಿ ಕೊಂಡಿ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿ ಜೀವನದಲ್ಲಿ ದೊರೆಯುವ ಅವಕಾಶಗಳನ್ನು ಬಳಸಿಕೊಂಡು, ಆರ್ಥಿಕತೆ ಕುರಿತು ಹೆಚ್ಚಿನ ಜಾಗೃತಿ ಹೊಂದಿದಲ್ಲಿ ಮಾತ್ರ ಇಂದಿನ ಒತ್ತಡ ಜೀವನ ನಿರ್ವಹಣೆ ಸುಲಭವಾಗಲಿದೆ ಎಂದರು.
ಲಲಿತಾದೇವಿ ಗುರುಸಿದ್ದಪ್ಪ ಸಿಂಧೂರ ಪದವಿ ಕಾಲೇಜ್ ಪ್ರಾಚಾರ್ಯ ಡಾ. ಪ್ರವೀಣ ಆನಂದಕಂದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ, ಜೆಸಿಐ ಸಂಸ್ಥೆ ಕಾರ್ಯಕ್ರಮಗಳು ಅತ್ಯಂತ ಶ್ಲಾಘನೀಯವಾಗಿವೆ ವಿದ್ಯಾರ್ಥಿಗಳು ತರಬೇತಿ ಪಡೆಯುವ ಮೂಲಕ ಜೀವನದಲ್ಲಿ ಉನ್ನತ ಸಾಧನೆಗೆ ಮುಂದಾಗಿ ಎಂದು ಕರೆ ನೀಡಿದರು.

ಅಮೂಲ್ಯ ಆರ್ಥಿಕ ಸಾಕ್ಷರತಾ ಸಮಾಲೋಚಕ ಜೆಸಿ ಹರೀಶ ಹಿರಳ್ಳಿ ಮಾತನಾಡಿ ತರಬೇತಿ ಪ್ರತಿ ವ್ಯಕ್ತಿಗೆ ಆರ್ಥಿಕ ಸ್ವಾತಂತ್ರ್ಯದಷ್ಟೇ ಅವಶ್ಯವಾಗಿದೆ ಕಾನೂನು ಅರಿವು ಹೊಂದುವ ವ್ಯಕ್ತಿ ಮಾತ್ರ ಆರ್ಥಿಕವಾಗಿ ಸದೃಢ ಹೊಂದಲು ಸಾಧ್ಯವಾಗಲಿದೆ. ಗ್ರಾಹಕ ಹಕ್ಕುಗಳ ಕುರಿತು ಜಾಗೃತಿ ಪಡೆದು ಇತರರಿಗೂ ವಿವರಿಸಲು ವಿದ್ಯಾರ್ಥಿಗಳು ಹಾಗೂ ಯುವಕರು ಮುಂದಾಗಬೇಕು ಎಂದು ಹೇಳಿದರು.

- Advertisement -
Ad image

ಈ ಸಂದರ್ಭದಲ್ಲಿ
ಪ್ರಾಧ್ಯಾಪಕರಾದ ಡಾ. ಎಂ.ಎಚ್.ಹೆಬ್ಬಾಳ, ಎಸ್.ಬಿ.ಪ್ರವೀಣಕುಮಾರ, ಲುಬ್ನಾ ನಾಜ್, ಸವಣೂರ ಕೆನರಾ ಬ್ಯಾಂಕ್ ಸಹಾಯಕ ವ್ಯವಸ್ಥಾಪಕ ಲಕ್ಷ್ಮಪ್ಪ ತಳವಾರ ಪಾಲ್ಗೊಂಡು ಸನ್ಮಾನ ಸ್ವೀಕರಿಸಿ, ಮಾತನಾಡಿದರು. ಪ್ರಾಧ್ಯಾಪಕಿ ಪ್ರಿಯದರ್ಶಿನಿ ಪಾಟೀಲ ಕಾರ್ಯಕ್ರಮ ನಿರೂಪಿಸಿದರು.

Share this Article