ಗಣೇಶೋತ್ಸವದ ಅಂಗವಾಗಿ ಬುಧವಾರ ಅನ್ನಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ

Samagraphrabha
1 Min Read

ಗದಗ : 2025 ನೇ ಸಾಲಿನ ಗಣೇಶೋತ್ಸವದ ಅಂಗವಾಗಿ ಬೆಟಗೇರಿ ಗಜಪತಿ ಮಹರಾಜ ಮಿತ್ರ ಮಂಡಳ ಬಸವನಗುಡಿ ಬಡಾವಣೆ
ಗಜಾನನೋತ್ಸವ ಸಮಿತಿ ವತಿಯಿಂದ 17 ನೇ ವರ್ಷದ ಗಣೇಶೋತ್ಸವದ ಪ್ರಯುಕ್ತ ಅನ್ನ ಸಂತರ್ಪಣೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.

ದಿನಾಂಕ 03-09-25 ಬುಧವಾರ ಮಧ್ಯಾಹ್ನ ಮಹಾ ಅನ್ನಸಂತರ್ಪಣೆ ಹಾಗೂ ಸಾಯಂಕಾಲ 5 ಗಂಟೆಯಿಂದ ಚಿಕ್ಕ ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಂತರ 121 ಉಡುಗೊರೆಗಳನ್ನು ಸವಾಲಿನ ಬದಲಿಗೆ ಕೃಪಾಶೀರ್ವಾದ(ಡ್ರಾ) ರೂಪದಲ್ಲಿ 9 ದಿನಗಳ ಪೂಜಿಸಿದ ಆಭೂಷಣಗಳ ಡ್ರಾ ನಡೆಯುವುದು,ಕಳೆದ ನಾಲ್ಕೈದು ದಿನಗಳಿಂದ ನಡೆದ ಎಲ್ಲಾ ಸ್ಪರ್ಧೆಗಳಲ್ಲಿ ಭಾಗವಹಿಸಿ ವಿಜೇತರಾದ ಸ್ಪರ್ಧಾಳುಗಳಿಗೆ ಬಹುಮಾನ ವಿತರಣೆ ಹಿರಿಯರಿಗೆ (ಗಣ್ಯರಿಗೆ) ದಾನಿಗಳಿಗೆ, ಅತಿಥಿಗಳಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗಜಪತಿ ಮಹರಾಜ ಮಿತ್ರ ಮಂಡಳಿ ಸದಸ್ಯರು ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Share this Article