ಹಾವೇರಿ: ತಾಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ಜಿಲ್ಲಾ ಲೀಡ್ ಬ್ಯಾಂಕ್, ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಶಾಖೆ ಹಾಗೂ ಮದರ ಗ್ರಾಮೀಣ ಅಭಿವೃದ್ದಿ ಸಂಸ್ಥೆ ರೋಣ ಇವರ ಸಹಯೋಗದೊಂದಿಗೆ ತಾಲೂಕಿನ ಕಾಟೇನಹಳ್ಳಿ ಗ್ರಾಮದಲ್ಲಿ ಗ್ರಾಮ ಪಂಚಾಯತಿಯ ಸಹಕಾರದೊಂದಿಗೆ ಜನ ಸುರಕ್ಷಾ ಅಭಿಯಾನ ಕಾರ್ಯಕ್ರಮ ನಡೆಯಿತು.
ಪ್ರಾಸ್ತಾವಿಕವಾಗಿ ಮಾತನಾಡಿದ ಕಾಟೇನಹಳ್ಳಿ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಶಾಖೆಯ ವ್ಯವಸ್ಥಾಪಕ ಸುಧೀಂದ್ರ ಯರೇಶಿಮಿ ಪ್ರಧಾನಮಂತ್ರಿ ಜನಧನ ಯೋಜನೆ, ಪ್ರಧಾನಮಂತ್ರಿ ಸುರಕ್ಷಾ ಯೋಜನೆ, ಪ್ರಧಾನಮಂತ್ರಿ ಭೀಮಾ ಯೋಜನೆ, ಅಟಲ್ ಪಿಂಚಣಿ ಯೋಜನೆಗಳು ಹಾಗೂ ನಿಷ್ಕ್ರೀಯ ಖಾತೆಗಳಿಗಾಗಿ ಕೆವೈಸಿ ದಾಖಲೆಗಳನ್ನು ಮರು ಪರಿಶೀಲಿಸುವ ಗುರಿಯನ್ನು ಈ ಅಭಿಯಾನ ಹೊಂದಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಮದರ ಗ್ರಾಮೀಣ ಸಂಸ್ಥೆ ರೋಣದ ಆರ್ಥಿಕ ಸಮಾಲೋಚಕ ರಮೇಶಗೌಡ ಪಾಟೀಲ ಜನ ಸಾಮಾನ್ಯರು ಕಡ್ಡಾಯವಾಗಿ ಸಾಮಾಜಿಕ ಭದ್ರತಾ ಯೋಜನೆಗಳನ್ನು ಮಾಡಿಸುವುದರ ಮೂಲಕ ಅದರ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ಸಲಹೆ ನೀಡಿದರು. ಮುಖ್ಯವಾಗಿ ಯೋಜನೆಗಳಲ್ಲಿ ಒಂದಾದ ಪ್ರಧಾನಮಂತ್ರಿ ಸುರಕ್ಷಾ ಭೀಮಾ ಯೋಜನೆಯು ಒಂದು ಅಪಘಾತ ಭೀಮಾ ಯೋಜನೆಯಾಗಿದ್ದು, ವಾರ್ಷಿಕ 20 ರೂ ಗಳನ್ನು ಪಾವತಿಸಿ ಈ ಯೋಜನೆ ಮಾಡಿಸಿಕೊಂಡಲ್ಲಿ ಯಾವುದೇ ರೀತಿಯ ಅಪಘಾತ ಸಂಭವಿಸಿದಲ್ಲಿ 2,00,000/-ರೂ ಗಳ ವಿಮಾ ಮೊತ್ತವು ಗ್ರಾಹಕರ ನಾಮಿನಿಗೆ ಸಿಗುವುದಾಗಿ ಮಾಹಿತಿ ನೀಡಿದರು. ವಾರ್ಷಿಕವಾಗಿ 436 ರೂ ಗಳನ್ನು ಪಾವತಿಸಿ ಪ್ರಧಾನಮಂತ್ರಿ ಜೀವನಜ್ಯೋತಿ ವಿಮೆಯನ್ನು ಮಾಡಿಸಿಕೊಂಡಲ್ಲಿ ಯಾವುದೇ ರೀತಿಯಲ್ಲಿ ಮರಣ ಹೊಂದಿದರೆ ಅಂತವರ ನಾಮಿನಿಗೂ ಕೂಡಾ 2,00,000/- ರೂ ಗಳ ವಿಮಾ ಮೊತ್ತ ಸಿಗುವುದಾಗಿ ಎರಡನ್ನು ಮಾಡಿಸಿಕೊಂಡಲ್ಲಿ 4,00,000/- ರೂ ಗಳ ವಿಮಾಮೊತ್ತ ಸಿಗುವುದಾಗಿಯೂ ತಿಳಿಸಿದರು. ಅಲ್ಲದೆ 60 ವಯಸ್ಸು ಆದನಂತರದಲ್ಲಿ ಪಿಂಚಣಿರೂಪದಲ್ಲಿ 1000/-ರೂ ಗಳಿಂದ 5000/- ವರೆಗಿನ ಪಿಂಚಣಿ ಹಣ ಸಿಗಬೇಕಾದರೆ ಈವಾಗಲೇ ಅಟಲ ಪಿಂಚಣಿ ಯೋಜನೆಯನ್ನು ಮಾಡಿಸಿವಂತೆ ತಿಳಿಸಿದರು.
ಎಸ್ಬಿಆಯ್ ಪ್ರಾದೇಶಿಕ ವ್ಯವಸ್ಥಾಪಕ ನಾಗಭೂಷಣ ರೆಡ್ಡಿ ಮಾತನಾಡಿ ಮೊಬೈಲ್ ಪೋನಿನಲ್ಲಿ ಬ್ಯಾಂಕಿನಿಂದ ಅಂತಾ ಹೇಳಿ ಒಟಿಪಿ ಮತ್ತು ಕೆವೈಸಿ ಕೇಳಿ ಬರುವ ಕರೆಗಳು ಸೈಬರ್ ವಂಚಕರ ಜಾಲವಾಗಿದ್ದು, ಗ್ರಾಹಕರು ಪೋನಿನ ಮುಖಾಂತರ ಮಾಹಿತಿ ಹಂಚಿಕೊಳ್ಳಬಾರದು, ಅನಾಮಧೇಯ ಕರೆಗಳು ಲಿಂಕಗಳನ್ನು ಒತ್ತುವ ಮೂಲಕ ಸ್ಪಂದನೆ ನೀಡದಂತೆಯೂ ಸೈಬರ್ ವಂಚಕರ ಬಲೆಯಿಂದ ಎಚ್ಚರವಹಿಸಬೇಕು, ಕಣ್ಣು ತಪ್ಪಿನಿಂದ ಮೋಸ ಜರುಗಿದರೆ ಕೂಡಲೆ 1930 ಗೆ ಕರೆಮಾಡುವ ಮುಖಾಂತರ ಸೈಬರ್ ವಂಚಕರಿಗೆ ಕಡಿವಾಣ ಹಾಕಬೇಕೆಂದು ಮಾಹಿತಿ ನೀಡಿದರು.
ಗ್ರಾ.ಪಂ ಕಾರ್ಯದರ್ಶಿ ವಾಯ್ ಎಫ್ ಅಂಬಿಗೇರ ಮಾತನಾಡಿ ಕಾರ್ಯಕ್ರಮವು ಅತ್ಯಂತ ಉಪಯುಕ್ತವಾಗಿದ್ದು ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಇದರ ಪ್ರಯೋಜನಗಳನ್ನು ಪಡೆದುಕೊಳ್ಳುವಂತೆ ತಿಳಿಸಿದರು. ಬ್ಯಾಂಕ ಆಪ ಬರೋಡಾದ ಆರ್ಥಿಕ ಸಮಾಲೋಚಕ ಮಾಲತೇಶ ಎಸ್ ಎಮ್ ಕಾರ್ಯಕ್ರಮ ನಿರೂಪಿಸಿ ವಂದಿಸಿದರು, ಕಾಟೇನಹಳ್ಳಿ ಸ್ಟೇಟ್ ಬ್ಯಾಂಕ್ ಆಪ್ ಇಂಡಿಯಾ ಶಾಖೆಯ ಸಿಬ್ಬಂದಿಗಳು, ಗ್ರಾ.ಪಂ ಸದಸ್ಯರು ಹಾಗೂ ಸಿಬ್ಬಂದಿ ಹಾಗೂ ಸಾರ್ವಜನಿಕರು ಉಪಸ್ಥಿತರಿರದ್ದರು.
