ಬ್ಯಾಂಕಗಳಲ್ಲಿ ಕನ್ನಡ ಭಾಷೆ ಬಳಕೆಗೆ ಒತ್ತಾಯಿಸಿ ಕರವೇ ಮನವಿ

Samagraphrabha
1 Min Read

ನವಲಗುಂದ: ಪಟ್ಟಣದಲ್ಲಿರುವಂತಹ ಸರ್ಕಾರಿ ಬ್ಯಾಂಕ್‌ಗಳಲ್ಲಿ ಕಾರ್ಯ ನಿರ್ವಹಿಸುವಂತಹ ನೌಕರರು ಗ್ರಾಹಕರೊಂದಿಗೆ ಕನ್ನಡ ಭಾಷೆಯಲ್ಲಿಯೇ ವ್ಯವಹರಿಸುವಂತೆ ಆದೇಶಿಸಬೇಕೆಂದು ಕರ್ನಾಟಕ ರಕ್ಷಣಾ ವೇದಿಕೆಯ ನವಲಗುಂದ ವಿಧಾನಸಭಾ ಅಧ್ಯಕ್ಷ ಸಿರಾಜುದ್ದಿನ ಧಾರವಾಡ ಒತ್ತಾಯಿಸಿದರು.

ಈ ಕುರಿತು ತಹಶೀಲ್ದಾರ ಸುಧೀರ ಸಾಹುಕಾರ ಅವರಿಗೆ ಮನವಿ ನೀಡಿ ಮಾತನಾಡಿದ ಅವರು ನವಲಗುಂದ ಪಟ್ಟಣದಲ್ಲಿರುವಂತಹ ಸರ್ಕಾರಿ ಬ್ಯಾಂಕ್‌ಗಳಲ್ಲಿ ಕರ್ತವ್ಯ ನಿರ್ವಹಿಸುತ್ತಿರುವಂತಹ ನೌಕರರಲ್ಲಿ ಕೆಲವರು ಕನ್ನಡ ಭಾಷೆಯಲ್ಲಿ ವ್ಯವಹರಿಸುತ್ತಿಲ್ಲ, ಇವರು ಹಿಂದಿ ಬಿಟ್ಟರೆ ಇಂಗ್ಲಿಷ್ ಭಾಷೆಯಲ್ಲಿ ಮಾತನಾಡುತ್ತಾರೆ, ಇದರಿಂದ ಹಳ್ಳಿವಾರುಗಳಿಂದ ಬರುವಂತಹ ಮುಗ್ಧ ರೈತರು, ಸಾಮಾನ್ಯ ಜನರು ಭಾಷೆ ಅರ್ಥವಾಗದೇ ಪರಿತಪಿಸುತ್ತಿದ್ದಾರೆ, ಇದು ಕರ್ನಾಟಕ ಇಲ್ಲಿಯ ನೆಲ ಜಲ ಭಾಷೆ ಕನ್ನಡದ್ದು ಹಾಗಾಗಿ ಬ್ಯಾಂಕ್‌ಗಳಲ್ಲಿ ಕರ್ತವ್ಯ ನಿರ್ವಹಿಸುವಂತಹ ಸಿಬ್ಬಂಧಿಗಳು ಗ್ರಾಹಕರೊಂದಿಗೆ ಕನ್ನಡದಲ್ಲಿಯೇ ವ್ಯವಹರಿಸಬೇಕು ಜೊತೆಗೆ, ಬ್ಯಾಂಕುಗಳಲ್ಲಿ ಹಣ ಪಡೆಯಲು, ಖಾತೆ ತೆರೆಯಲು ಕನ್ನಡ ಭಾಷೆ ಹೂಂದಿರುವಂತಹ ಸ್ಲಿಪಗಳನ್ನು ನೀಡುವಂತಹ ವ್ಯವಸ್ಥೆಯಾಗಬೇಕು, ತಪ್ಪಿದ್ದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ಪ್ರತಿಭಟನೆಯ ಮೂಲಕ ಗ್ರಾಹಕರ ಹಕ್ಕನ್ನು ಕೊಡಿಸುವಂತಹ ಕೆಲಸ ಮಾಡುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಿದರು..

ಈ ಸಂದರ್ಭದಲ್ಲಿ ಯಲ್ಲಪ್ಪ ಬೆಳಹಾರ, ಶಿವಾನಂದ ಹೆಬ್ಬಾಳ, ದ್ಯಾಮಣ್ಣ ಗುಡಿ, ಸಮಾಜ ಸೇವಕ ಮಾಬುಸಾಬ ಯರಗುಪ್ಪಿ, ವೆಂಕಟೇಶ್ ಕುರ್ತಕೋಟಿ, ಮಂಜು ಜಾಲಗಾರ್,ಶೌಕತ್ ಗುಡಿಸಾಗರ್, ರಿಯಾಜಅಹ್ಮದ ನಾಶಿಪುಡಿ, ರಾಜು ರಾಠಿಮನಿ, ರಫಿಕಸಾಬ ಮುಲ್ಲಾ, ಧಾರವಾಡ, ಬಶೀರಅಹ್ಮದ ಹುನಗುಂದ, ನೂರಅಹ್ಮದ್ ಶಿಂದಗಿ ಹುಲಕೋಟಿ, ಕಮಾಲಸಾಬ ಗದಗ, ಇಮಾಮಸಾಬ್ ಮಾಷಾಯಕ್, ಯಲ್ಲಪ್ಪ ಬೆಳಹಾರ, ಶಿವಾನಂದ ಚೆರ್ಮನ್, ವೆಂಕಟೇಶ್,ರಾಜು ರೋಟಿಮನಿ, ಮಾರುತಿ ಪೂಜಾರ್,ದ್ಯಾಮಣ್ಣ ಗುಡಿ, ಬುದ್ನೇಸಾಬ್, ಉಮೇಶ್, ಜಂಗ್ಲಿಸಾಬ್, ಶರೀಪ ಗುತ್ತಲ, ಇಮ್ರಾನ ಮಸಾಹಿರ, ಹಸನ ಮಕಾಂದಾರ, ಅಬ್ದುಲ್ ರಾಮದುರ್ಗ,ಶರೀಫ್ ಆಡಿನ, ಸೈಯ್ಯದ್ ಮನ್ಸೂರಿ, ಶೌಕತಅಲಿ ಗುಡಿಸಾಗರ, ಸಮೀರ ತೋಟದ, ಸಾಹಿಲ್ ದಪೆದಾರ, ಸೈಯ್ಯದ ನವಲಗುಂದ, ಸಮೀರ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು….

Share this Article