ನವಲಗುಂದ: ನಿರಂತರವಾಗಿ ಸುರಿದ ಮಳೆಗೆ ಬೆಳೆ ಮೊಳಕೆ ಒಡೆದಿದ್ದು ಸದ್ಯ ರೈತರ ಪರಿಸ್ಥಿತಿ ಚಿಂತಾಜನಕವಾಗಿದೆ, ಬಿತ್ತಿದ ಬೆಳೆಯು ಕೈ-ಸೇರುವ ಮೊದಲೇ ನೆಲಕಚ್ಚಿದ್ದು ರೈತರ ಖಾತೆಗೆ ಪ್ರತಿ ಹೆಕ್ಟೇರಗೆ ಐವತ್ತು ಸಾವಿರ ರೂಪಾಯಿ ಬೆಳೆಹಾನಿ ಪರಿಹಾರ ನೀಡಬೇಕೆಂದು ರೈತ ಮುಖಂಡ ಮೆಹಬೂಬಅಲಿ ತಾಸೇದ ಆಗ್ರಹ ಮಾಡಿದರು.
ಈ ಕುರಿತು ಸಾರ್ವಜನಿಕರೊಂದಿಗೆ ತಹಶೀಲ್ದಾರ ಕಚೇರಿಯ ಶಿರಸ್ತೆದಾರ ಕೃಷ್ಣ ಆರೇರ ಅವರ ಮೂಲಕ ಮುಖ್ಯ ಮಂತ್ರಿಗಳಿಗೆ ಮನವಿ ನೀಡಿ ಮಾತನಾಡಿದ ಅವರು ಈ ಮುಂಗಾರು ಹಂಗಾಮಿನ ಹೆಸರು ಕಾಳು ಗಿಡದಲ್ಲಿಯೇ ಮೊಳಕೆ ಒಡೆದು ಬಿತ್ತನೆಗೆ ಖರ್ಚು ಮಾಡಿದಷ್ಟು ಹಣ ಸಹ ಮರಳಿ ಬರದೇ ಇರುವುದರಿಂದ ರೈತರು ಕಂಗಾಲಾಗಿ ಹೋಗಿದ್ದಾರೆ ಈ ಕೂಡಲೇ ಬೆಳೆಹಾನಿ ಪರಿಹಾರ ವಿತರಣೆ ಮಾಡಬೇಕೆಂದು ಮನವಿಯಲ್ಲಿ ಒತ್ತಾಯ ಮಾಡಿದರು.
ಬಶೀರಅಹ್ಮದ ಹುನಗುಂದ ಮಾತನಾಡಿ ರೈತರೇ ಈ ದೇಶದ ಬೆನ್ನೆಲಬು ಅಂತಾ ಹೇಳುವಂತಹ ಸರ್ಕಾರ ರೈತರನ್ನು ಉಳಿಸುವಂತಹ ಕೆಲಸ ಮಾಡಬೇಕಾಗಿದೆ, ವರುಣನ ಆರ್ಭಟಕ್ಕೇ ಬಂದಂತಹ ಬೆಳೆ ಹಾನಿಯಾಗಿದೆ, ಫಸಲು ಮನೆಗೆ ಬರುವ ಮುಂಚೆ ಮಳೆಗೆ ಸಿಲುಕಿ ಹಾಳಾಗಿದ್ದು ಈ ಕೂಡಲೇ ರೈತ ಕುಟುಂಬಕ್ಕೇ ಬೆಳೆಹಾನಿ ಪರಿಹಾರ ಮತ್ತು ಮನೆ ಬಿದ್ದು ಸೂರು ಕಳೆದುಕೊಂಡವರಿಗೆ ಶಾಶ್ವತ ಸೂರು ಕಲ್ಪಿಸಲು ಐದು ಲಕ್ಷ ರೂಪಾಯಿ ಪರಿಹಾರ ವಿತರಣೆ ಮಾಡಬೇಕೆಂದು ಸರ್ಕಾರಕ್ಕೇ ಆಗ್ರಹ ಮಾಡಿದರು.
ಈ ಸಂದರ್ಭದಲ್ಲಿ ಮಹಮ್ಮದಲಿ ಮಿರ್ಜಿ, ನಿಂಗಪ್ಪ ಕುಂಬಾರ, ಮಾಬುಸಾಬ ಯರಗುಪ್ಪಿ ಉಪಸ್ಥಿತರಿದ್ದರು….

