ನವಲಗುಂದ ಇಂದಿರಾ ಕ್ಯಾಂಟೀನ್‌ನಲ್ಲಿ ಅವ್ಯವಸ್ಥೆ

Samagraphrabha
1 Min Read

ನವಲಗುಂದ: ಪಟ್ಟಣದಲ್ಲಿ ಇತ್ತೀಚೆಗೆ ಉದ್ಘಾಟನೆಗೊಂಡ ಇಂದಿರಾ ಕ್ಯಾಂಟೀನ್ ಕೇವಲ ನಾಲ್ಕು ದಿನಗಳಲ್ಲಿ ಜನರ ಅಸಮಾಧಾನಕ್ಕೆ ಗುರಿಯಾಗಿದೆ.

ಬಡವರ ಹಾಗೂ ಸಾಮಾನ್ಯ ಜನರ ಹೊಟ್ಟೆ ತುಂಬಿಸುವ ಉದ್ದೇಶದಿಂದ ಆರಂಭವಾದ ಈ ಕ್ಯಾಂಟೀನ್‌ನಲ್ಲಿ ಈಗಾಗಲೇ ಅಡುಗೆಯಲ್ಲಿ ಗುಣಮಟ್ಟವಿಲ್ಲ, ಅವ್ಯವಸ್ಥೆ, ಬಿಲ್‌ ನೀಡದಿರುವ ದೂರುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.

ಸ್ಥಳೀಯರ ಪ್ರಕಾರ, ಕ್ಯಾಂಟೀನ್‌ನಲ್ಲಿ ಅಡುಗೆ ಸರಿಯಾಗಿ ಸಿಗುತ್ತಿಲ್ಲ. ಕೆಲವೊಮ್ಮೆ ಊಟದ ಗುಣಮಟ್ಟ ತೀರಾ ಕಳಪೆ ಆಗಿದ್ದು, ತಡವಾಗಿ ನೀಡಲಾಗುತ್ತಿದೆ. ಅಲ್ಲದೆ, ಹಣ ಪಡೆದರೂ ಗ್ರಾಹಕರಿಗೆ ಬಿಲ್ ನೀಡದಿರುವುದು ಪಾರದರ್ಶಕತೆಯ ಕೊರತೆಯಾಗಿದೆ ಎಂದು ಆರೋಪಿಸುತ್ತಿದ್ದಾರೆ ಇನ್ನಾದರೂ ಸಂಬಂಧ ಪಟ್ಟ ಅಧಿಕಾರಿಗಳು ಕ್ರಮ ಜರುಗಿಸುತ್ತಾರಾ ಕಾದು ನೋಡೋಣ.

ರಾಜ್ಯ ಸರ್ಕಾರ ಪ್ರಾರಂಭಿಸಿದ ಈ ಇಂದಿರಾ ಕ್ಯಾಂಟಿನ್ ನಲ್ಲಿ ನಾವು ಅಂದುಕೊಂದಷ್ಟು ಉತ್ತಮ ಗುಣ ಮಟ್ಟದ ಆಹಾರ ಒದಗಿಸುತ್ತಿಲ್ಲ, ಇಲ್ಲಿ ಹಸಿ ಬಿಸಿಯಾಗಿ ಬೆಂದಿರುವಂತಹ ರೊಟ್ಟಿ, ಅಣ್ಣ ನೀಡುತ್ತಿದ್ದಾರೆ,
ಕುಡಿಯಲು ಫಿಲ್ಟ್ ರ ನೀರಿನ ವ್ಯವಸ್ಥೆಯಿಲ್ಲ, ಇದು ಬಡವರಿಗೆ ಕಡಿಮೆ ದರದಲ್ಲಿ ಊಟ ಕೊಡುವ ಯೋಜನೆಯಾ ಅಥವಾ ಹಣ ಹೊಡೆಯಲು ಮಾಡಿರುವಂತ ಯೋಜನೆಯಾ ಎನ್ನುವುದು ಅರ್ಥ ಆಗತಿಲ್ಲ..

- Advertisement -
Ad image

ಮಾಬುಸಾಬ ಯರಗುಪ್ಪಿ
ಸಾಮಾಜಿಕ ಕಾರ್ಯಕರ್ತ, ನವಲಗುಂದ

“ಇಂದಿರಾ ಕ್ಯಾಂಟೀನ್ ಬಡವರ ಊಟಕ್ಕೆ ಆಧಾರವಾಗಬೇಕಿತ್ತು, ಆದರೆ ಆರಂಭದಲ್ಲಿಯೇ ಇಷ್ಟು ಅವ್ಯವಸ್ಥೆ ಇದ್ದರೆ ಮುಂದೆ ಹೇಗೆ? ಇಲ್ಲಿ ಊಟಕ್ಕೆ ಬಂದ್ರೆ ಕಳಪೆ ಊಟ ನೀಡುತ್ತಾ ಇದ್ದಾರೆ, ಸಂಬಂಧಪಟ್ಟ ಅಧಿಕಾರಿಗಳು ಇತ್ತ ಗಮನಹರಿಸಬೇಕು,” ಉತ್ತಮ ಗುಣ ಮಟ್ಟದ ಆಹಾರ ನೀಡಬೇಕು.

ಸಿರಾಜುದ್ದೀನ ಧಾರವಾಡ
ಅಧ್ಯಕ್ಷರು,
ಕರ್ನಾಟಕ ರಕ್ಷಣಾ ವೇದಿಕೆ ನವಲಗುಂದ ವಿಧಾನಸಭಾ..

Share this Article