ಗದಗ : ನಗರದ ಸರಾಫ್ ಬಜಾರನ ಗ್ರಾಮ ಚವಡಿಯಲ್ಲಿ ಕಂದಾಯ ನಿರೀಕ್ಷಕರು ಸಮಯಕ್ಕೆ ಸರಿಯಾಗಿ ಬಾರದೆ ಇಡುವುದರಿಂದ ಸಾರ್ವಜನಿಕರು ಅಲೆದಾಡುವಂತಾಗಿದೆ ,ದಿನ ನಿತ್ಯ ಸಾರ್ವಜನಿಕರು ಸರ್ಕಾರದ ಒಂದಲ್ಲ ಒಂದು ಕೆಲಸದ ನಿಮಿತ್ಯ ವೃದ್ಧರು, ಅಂಗವಿಕಲರು, ಹಾಗೂ ವಯಸ್ಸಾದವರು, ಗದಗ ಹೋಬಳಿ ವ್ಯಾಪ್ತಿಯ ಕಂದಾಯ ನಿರೀಕ್ಷಕರ ಕಚೇರಿಗೆ ಬರುತ್ತಿದ್ದು ಅಲ್ಲಿಗೆ ಬಂದ ಸಾರ್ವಜನಿಕರಿಗೆ ಬೀಗ ಹಾಕಿದ್ದನ್ನು ನೋಡಿ ಮಧ್ಯಾಹ್ನ ಸಂಜೆ ದಿನ ಪ್ರತಿ ಅಲೆದಾಡುತ್ತಿದ್ದಾರೆ.
ಕಂದಾಯ ನಿರೀಕ್ಷಕರು ಇರುವ ಸಮಯ ಯಾವಾಗ ಏನ್ನುವ ಪ್ರಶ್ನೆ ಸಾರ್ವಜನಿಕರು ಕೇಳುತ್ತಿದ್ದಾರೆ. ಇಲ್ಲಿ ಆಗಮಿಸುವ ಸಾರ್ವಜನಿಕರಿಗೆ ಯಾರು ಕೂಡಾ ಸರಿಯಾದ ಉತ್ತರ ಹೇಳುವ ಸಿಬ್ಬಂದಿಯು ಸಹ ಇರುವುದಿಲ್ಲ.
ಇದನ್ನು ಗಮನಿಸಬೇಕಾದ ಗದಗ ತಹಸೀಲ್ದಾರರು ಕಂದಾಯ ನೀರಿಕ್ಷನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕು ಎಂಬ ಸಾರ್ವಜನಿಕರ ಆಗ್ರಹವಾಗಿದೆ.
ಕಂದಾಯ ನಿರೀಕ್ಷಕರ ಕಾರ್ಯಾಲಯದಲ್ಲಿ ಯಾವುದೇ ಸಿ. ಸಿ. ಟಿವಿ, ಬಯೋಮೆಟ್ರಿಕ್ ಅಂಥಹ ಯಾವ ಉಪಕರಣ ಇಲ್ಲದೆ ಇರುವುದರಿಂದ ಅಧಿಕಾರಿಗಳಿಗೆ ದುರುಪಯೋಗ ಪಡೆಯಲು ಉಪಯೋಗ ಆಗಿದೆ ಎಂಬ ಸಾರ್ವಜನಿಕ ಆರೋಪ ಆಗಿದೆ
ಈ ಹಿಂದಿನ ತಹಸೀಲ್ದಾರರು ಕರ್ತವ್ಯ ಲೋಪ ಆರೋಪದ ಹಿನ್ನೆಲೆಯಲ್ಲಿಯೇ ಇದೆ ಅಧಿಕಾರಿಯನ್ನು ಬದಲಾವಣೆ ಮಾಡಿದ್ದರು ಆದರೂ ಇಂದು ಮತ್ತೆ ಇದೆ ಅಧಿಕಾರಿಯನ್ನು ಕಂದಾಯ ನಿರೀಕ್ಷಕನಾಗಿ ಮತ್ತೆ ನೇಮಕ ಮಾಡಿದ್ದಾರೆ.
ಈಗಿನ ಗ್ರಾಮ ಚವಡಿಯ ಬಗ್ಗೆ ವಾಸ್ತವ ಸ್ಥಿತಿ ಗೊತ್ತಿದ್ದರೂ ತಹಶೀಲ್ದಾರರು
ಇಲ್ಲಿಯ ವರಗೆ ಕ್ರಮ ಕೈಗೊಳ್ಳುದಿರುವುದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣ ಆಗಿದೆ.
