ಟ್ರಾಕ್ಟರ್ ಹಾಗೂ ಬೈಕ್ ಮಧ್ಯೆ ಅಪಘಾತ : ಕೊಲೆ ಶಂಕೆ..? ಮರಳು ಮಾಫಿಯಾ ಕೈವಾಡ ಶಂಕೆ..?

Samagraphrabha
1 Min Read

ಗದಗ: ನಿನ್ನೆ ರಾತ್ರಿ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರ ಗ್ರಾಮದ ಗ್ರಾಮ ಸಹಾಯಕ(ವಾಲಿಕರ) ಅವರ ಬೈಕು ಟ್ರಾಕ್ಟರ್ ನಡುವೇ ನಡೆದ ಅಪಘಾತದಲ್ಲಿ ಸ್ಥಳದಲ್ಲೇ
ಬೈಕ್ ಸವಾರ ಮಹ್ಮದರಫಿ ಹುಸೇನಸಾಬ ನದಾಫ ಮೃತನಾಗಿದ್ದಾನೆ.

ಮೃತ ಮಹ್ಮದರಫಿ ತಾಲೂಕಿನ ಹುಲ್ಲೂರ ಗ್ರಾಮ ಸಹಾಯಕ (ವಾಲಿಕಾರ)ಆಗಿ ಕಾರ್ಯ ನಿರ್ವಹಿಸುತ್ತಿದ್ದನು.

ಲಕ್ಷ್ಮೇಶ್ವರ ತಾಲೂಕಿನ ಹುಲ್ಲೂರು-ಅಮರಾಪುರ ಗ್ರಾಮದ ಮಧ್ಯೆ ಘಟನೆ ನಡೆದಿದ್ದು ಅಪಘಾತಕ್ಕೆ ಮರಳು ಮಾಫಿಯಾ ಕೈವಾಡ ಶಂಕೆಯು ಕೇಳಿಬರುತ್ತಿದೆ.

- Advertisement -
Ad image

ಈ ಅಪಘಾತದ ಕುರಿತು
ಲಕ್ಷ್ಮೇಶ್ವರ ತಾಲೂಕು ಗ್ರಾಮ ಸಹಾಯಕರ ಸಂಘದಿಂದ ತಹಶೀಲ್ದಾರಗೆ ಮನವಿ ಸಲ್ಲಿಸಿದ ಸದಸ್ಯರು ಇದು ಅಪಘಾತವಲ್ಲ ಇದರ ಹಿಂದೆ ಮರಳು ಮಾಪಿಯಾದ ಕೈವಾಡವಿದ್ದು ಇದನ್ನು ಸೂಕ್ತ ರೀತಿಯಲ್ಲಿ ತನಿಖೆ ಮಾಡಿ ಸರ್ಕಾರಕ್ಕೆ ವರದಿ ಸಲ್ಲಿಸಿ ಮೃತ ಹೊಂದಿದ ವಾಲಿಕಾರನ ಕುಟುಂಬಕ್ಕೆ ಪರಿಹಾರ ನೀಡಲು ಕ್ರಮ ಕೈಗೊಳ್ಳಬೇಕು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಗ್ರಾಮ ಸಹಾಯಕ ಸಂಘದವರು ಲಕ್ಷ್ಮೇಶ್ವರ ತಹಶೀಲ್ದಾರರಿಗೆ ಮನವಿ ನೀಡಿದ್ದಾರೆ.

ಲಕ್ಷ್ಮೇಶ್ವರ ತಾಲೂಕಿನಲ್ಲಿ ನಡೆತಿದಿಯಾ ಅಕ್ರಮ ಮರಳು ದಂದೆ:

ಒಬ್ಬ ವಾಲಿಕರನ ಅಪಘಾತದ ಹಿಂದೆ ಮರಳು ಮಾಫಿಯಾ ಕೈವಾಡ ಶಂಕೆಯನ್ನು ತಾಲೂಕಿನ ಗ್ರಾಮ ಸಹಾಯಕರೆ ಶಂಕೆ ವ್ಯಕ್ತಪಡಿಸಿ ತಹಶೀಲ್ದಾರಗೆ ಮನವಿ ನೀಡಿದ್ದಾರೆ ಎಂದರೆ ಎಷ್ಟರ ಮಟ್ಟಿಗೆ ಇಲ್ಲಿ ಅಕ್ರಮ ಮರಳು ಮಾಫಿಯಾ ನಡೆಯುತ್ತಿದೆ ಎಲ್ಲಾ ಕಣ್ಣಮುಂದೆ ನಡೆಯುತ್ತಿದ್ದರು ಏನು ಗೋತಿಲ್ಲದೆ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳು, ಪೋಲಿಸ್ ಅಧಿಕಾರಿಗಳು,ಲೋಕಪಯೋಗಿ ಸೇರಿದಂತೆ ಸ್ವತಃ ಸ್ಥಳೀರೆ ಆಗಿರುವ ಶಾಸಕ ಚಂದ್ರು ಲಮಾಣಿ ಅವರಿಗೆ ಈ ವಿಷಯ ಗೋತಿಲ್ಲವಾ ಅಥವಾ ಎಲ್ಲಾ ಗೋತಿದ್ದು ಸುಮ್ಮನೆ ಇದ್ದಾರೋ.. ಹೇಗೆ ಎಂಬ ಅನುಮಾನ ಈ ಸಾವಿನ ಸುತ್ತ ಸುತ್ತುತಿದೆ ಏನೆ ಆಗಲಿ
ಅಪಘಾತ ಸಂಬಂಧ ಲಕ್ಷ್ಮೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸೂಕ್ತ ರೀತಿಯಲ್ಲಿ ತನಿಖೆ ಮಾಡಿ ಸಾವಿಗೆ ನ್ಯಾಯ ಕೊಡಸಿ ಮರಳು ಮಾಫಿಯಾ ಮಾಡುವವರ ವಿರುದ್ಧ ಕ್ರಮ ಕೈಗೊಳಬೇಕಿದೆ.

Share this Article