ಮನವಿಗೆ ಕ್ಯಾರೇ ಎನ್ನದ ಪುಸಭೆಗೆ ಆಕ್ರೋಶ ವ್ಯಕ್ತಪಡಿಸಿದ ಸ್ಥಳೀಯ ನಿವಾಸಿಗಳು

Samagraphrabha
1 Min Read

ನವಲಗುಂದ: ಪಟ್ಟಣದ ಧಾರವಾಡದವರ ಪ್ಲಾಟಿನ 5 ಮತ್ತು 6 ನೇ ವಾರ್ಡಿನ ಮುಖ್ಯ ರಸ್ತೆ ಸರಿಪಡಿಸುವಂತೆ ಈ ಹಿಂದೆಯೇ ಪುರಸಭೆಯ ಮುಖ್ಯಾಧಿಕಾರಿಗಳಿಗೆ ಮನವಿ ನೀಡಿದರು ಸ್ಪಂದಿಸಿಲ್ಲ ಎಂದು ವಾರ್ಡ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು.

ಈ ಹಿಂದೆಯೇ ಶಾಸಕರಿಗೆ ಹಾಗೂ
ಪುರಸಭೆಯ ಮುಖ್ಯಾಧಿಕಾರಿಗಳಿಗೆ ಕೆಸರು ಗದ್ದೆಯಂತಾದ ರಸ್ತೆ ಸರಿಪಡಿಸುವಂತೆ ಮನವಿ ನೀಡಿದರು ಇಲ್ಲಿಯವರೆಗೆ ಕ್ರಮ ಜರುಗಿಸದಿರುವುದು ಹಲವಾರು ಅನುಮಾನಗಳಿಗೆ ಎಡೆ ಮಾಡಿಕೊಟ್ಟಿದೆ ಎಂದು ಸ್ಥಳಿಯ ನಿವಾಸಿಗಳು ಆಕ್ರೋಶ ವ್ಯಕ್ತಪಡಿಸಿದರು, ಇದಕ್ಕೆ ಪರಿಹಾರ ಇನ್ನಾದರೂ ಸಿಗುವುದೇ ಕಾದು ನೋಡೋಣ.

ಸತತವಾಗಿ ಸುರಿದ ಮಳೆಗೆ ರಸ್ತೆಗೆ ಹದಗೆಟ್ಟಿದ್ದು ಮಕ್ಕಳು, ವಯಸ್ಕರು, ನಡೆದಾಡದ ಸ್ಥಿತಿ ನಿರ್ಮಾಣವಾಗಿದ್ದು ಶಾಲಾ ವಾಹನವು ಬರದಂತೆ ಆಗಿದೆ, ಈ ಕುರಿತು ಶಾಸಕರಿಗೆ ಮನವಿ ಸಲ್ಲಿಸಿದರು ಯಾವುದೇ ಪ್ರಯೋಜನವಾಗಿಲ್ಲ, ಇನ್ನು ನಾನು ಸಾರ್ವಜನಿಕ ವಲಯದಲ್ಲಿ ವೈದ್ಯನಾಗಿ ಸೇವೆ ಸಲ್ಲಿಸುತ್ತಿರುವುದರಿಂದ ನಮ್ಮ ಮನೆಗೆ ಬರುವಂತಹ ರೋಗಿಗಳು ಹರಸಾಹಸ ಪಡುತ್ತಾರೆ, ಆದಷ್ಟು ಬೇಗ ರಸ್ತೆಗೆ ಮೊರಂ ಮಣ್ಣು ಹಾಕಿ ಗಟ್ಟಿ ಮಾಡಿ ಕೊಡಲಿ..

ಡಾ: ಶುಭಾನಿ ನದಾಫ
ಸ್ಥಳೀಯ ನಿವಾಸಿ, ನವಲಗುಂದ

- Advertisement -
Ad image

Share this Article