ಲಕ್ಷ್ಮೇಶ್ವರ; ಪ್ರತಿಯೊಬ್ಬರ ತಮ್ಮ ಜೀವನವನ್ನು ಉತ್ತಮವಾಗಿ ರೂಪಿಸಿಕೊಳ್ಳಲು ಇಂದಿನ ದಿನಮಾನದಲ್ಲಿ ಸಾಕಷ್ಟು ಸಹಾಯ ನೀಡುವ ಶಾಖೆಗಳು ಇವೆ ಅವುಗಳ ಸದುಪಯೋಗವನ್ನು ಪಡೆದುಕೊಂಡು ಎಲ್ಲರೂ ಉತ್ತಮ ಜೀವನದ ಬದುಕು ರೂಪಿಸಿಕೊಳ್ಳಬೇಕು ಎಂದು
ಪೊಲೀಸ್ ಠಾಣೆಯ ಕ್ರೈಂ ಪಿಎಸ್ಐ ಟಿ.ಕೆ. ರಾಠೋಡ ಹೇಳಿದರು ಅವರು ಪಟ್ಟಣದ ರಂಭಾಪುರಿ ಕಲ್ಯಾಣ ಮಂಟಪದಲ್ಲಿ ಕ್ರೇಡಿಟ್ ಅಕ್ಸಿಸ್ ಗ್ರಾಮೀಣ ಲಿಮಿಟೆಡ್ ಶಾಖೆಯ ವತಿಯಿಂದ ಹಮ್ಮಿಕೊಂಡಿದ್ದ ಸಾಮಾಜಿಕ ಆರ್ಥಿಕ ಅಭಿವೃದ್ಧಿ ಕಾರ್ಯಗಾರ ಜ್ಞಾನದಿಂದ ಉತ್ತಮ ಜೀವನ ನಿರ್ಮಾಣ ಮತ್ತು ಹಣಕಾಸು ಸಾಕ್ಷರತೆ ಕಾರ್ಯಕ್ರಮವನ್ನು ಸಸಿ ಗಿಡಕ್ಕೆ ನೀರು ಹಾಕುವ ಮೂಲಕ ಉದ್ಘಾಟಿಸಿ ಅವರು ಮಾತನಾಡುತ್ತಿದ್ದರು
ಅಧ್ಯಕ್ಷತೆಯನ್ನು ವಹಿಸಿದ್ದ ಬೆಳಗಾವಿಯ ವಿಭಾಗೀಯ ವ್ಯವಸ್ಥಾಪಕರಾದ
ರವಿ ಎಸ್ ಎನ್, ಹಾವೇರಿ ಪ್ರಾದೇಶಿಕ ವ್ಯವಸ್ಥಾಪಕರಾದ ನಾಗಪ್ಪ ಸಿ.ಆರೋಗ್ಯ ಶಿಕ್ಷಣ ಇಲಾಖೆ ಪ್ರಕಾಶ್ ಕರ್ಜಗಿ ಅವರ ಮಾತನಾಡಿ ಸಮಾಜದಲ್ಲಿರುವ ಪ್ರತಿಯೊಬ್ಬರ ಜೀವನ ಮಟ್ಟ ಸುಧಾರಿಸಬೇಕು ಆ ನಿಟ್ಟಿನಲ್ಲಿ ಕ್ರೀಡಿಟ್ ಆಕ್ಸಿಸ್ ಗ್ರಾಮೀಣ ಲಿಮಿಟೆಡ್ ಶಾಖೆ ಸಾಕಷ್ಟು ಜನರಿಗೆ ಸಾಲವನ್ನು ನೀಡಿದೆ ಸಾಲ ಪಡೆದ ಎಲ್ಲರೂ ಅದನ್ನು ಸರಿಯಾಗಿ ಬಳಕೆ ಮಾಡಿಕೊಂಡು ಅದರಿಂದ ತಮ್ಮ ವ್ಯಾವಹಾರಿಕ ದುಡಿಮೆ ಹೆಚ್ಚಿಸಿಕೊಂಡು ಅವರು ನೀಡಿರುವ ಸಾಲ ಮರು ಪಾವತಿಸುವುದರೊಂದಿಗೆ ತಮಗೆ ಸಾಲ ನೀಡಿದ ಸಂಸ್ಥೆಗೆ ಉತ್ತಮ ಮತ್ತು ಅದರಿಂದ ಲಾಭ ಪಡೆದ ನಿಮಗೂ ಒಳ್ಳೆಯದಾಗುತ್ತದೆ ಯಾವುದೇ ಕಾರಣಕ್ಕೂ ವ್ಯವಹಾರವನ್ನು ಕೆಡಿಸಿ ಕೊಳ್ಳದೆ ಉತ್ತಮವಾಗಿ ಇಟ್ಟುಕೊಳ್ಳಬೇಕು ಎಂದರು
ಈ ಸಮಯದಲ್ಲಿ ಗ್ರಾಮೀಣ ಕೂಟ ಕ್ರೆಡಿಟ್
ಸಂಸ್ಥೆಗಳ ಮುಖ್ಯಸ್ಥರು ಹಾಗೂ ಪೊಲೀಸ್ ಠಾಣೆಯ ಮೀನಾಕ್ಷಿ ಮಟ್ಟಿ, ವೀರಯ್ಯ ಮಠದ, ಚಂದ್ರಪ್ಪ ಅರಸನಾಳ, ಈರಣ್ಣ ಎಂ ಹೆಚ. ಶಾಖಾ ವ್ಯವಸ್ಥಾಪಕರಾದ ಚಮನಸಾಬ, ಕೃಷ್ಣ ಹಾಗೂ ಗ್ರಾಮೀಣ ಕೂಟದ ಪದಾಧಿಕಾರಿಗಳು ಸಿಬ್ಬಂದಿ ವರ್ಗದವರು ಉಪಸ್ಥಿತರಿದ್ದರು .

